Donate

Help us to help others, please Donate

Related Links

e-Procurement Process 2015

Tender Application Form

Related Links

ಕದಿರುಹರಣೋತ್ಸವ (23-09-2017)

ಗುರುವಾರ, ಸೆಪ್ಟೆಂಬರ 14th, 2017 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬಿ ಸಂವತ್ಸರದ ಕದಿರುಹರಣೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಿ 23-09-2017 ಶನಿವಾರ ಜರುಗಲಿದೆ .
ತತ್ಸಂಬಂಧವಾಗಿ 22-09-2017 ಶುಕ್ರವಾರ ರಾತ್ರಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಂದಿಗೆ ಹೊರಟು ಬಂಕಿಕೊಡ್ಲ ತಲುಪುವುದು .
ಮರುದಿನ ದಿ 23-09-2017 ಶನಿವಾರ ನಸುಕಿನಲ್ಲಿ ಸೋಮವಾರ ಭತ್ತದ ಗದ್ದೆಗೆ ಹೋಗಿ ಭತ್ತದ ಬೆಳೆಯನ್ನು ಕೊಯ್ದು ಪೂಜೆ ಸ್ವೀಕರಿಸುವುದು .
ಜಗತ್ತಿಗೆ ಅನ್ನ ನೀಡುವ ರೈತ ಸಮುದಾಯ ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿ ತಮ್ಮ ಗದ್ದೆಯ ಕೆಲ ಕದಿರನ್ನು ಶ್ರೀ ದೇವರಿಗೆ ಸಮರ್ಪಿಸುವರು .ಈ ಪೂಜೆಯನ್ನು ಸ್ವೀಕರಿಸುತ್ತಾ , ಕದಿರನ್ನು ಪ್ರಸಾದ ರೂಪದಲ್ಲಿ ನೀಡುತ್ತ ಶ್ರೀ ದೇವರ ಉತ್ಸವವು ಸೋಮವಾರ ಮಧ್ಯಾಹ್ನ ಶ್ರೀ ದೇವಾಲಯಕ್ಕೆ ಮರಳುವುದು . ಶಾಸ್ತ್ರೀಯ ಪೂಜಾ ವಿಧಾನ ಹಾಗೂ ನೇಗಿಲಯೋಗಿಯ ಒಳಿತಿಗಾಗಿ ಪ್ರಾರ್ಥಿಸಿ ಜನಪದೀಯ ಪರಿಕಲ್ಪನೆಯಲ್ಲಿ ಕದಿರು ಹರಣೋತ್ಸವ ಆಚರಿಸಲ್ಪಡುವುದು .

Leave a Reply

Highslide for Wordpress Plugin