Donate

Help us to help others, please Donate

Related Links

e-Procurement Process 2015

Tender Application Form

Related Links

‘ಕದಿರು ಹರಣೋತ್ಸವ’ ಸಂಪನ್ನ

ಶನಿವಾರ, ಸೆಪ್ಟೆಂಬರ 23rd, 2017 -

ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬಿ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ,ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ, ದಿನಾಂಕ 23-09-2017 ಶನಿವಾರ ಸು-ಸಂಪನ್ನಗೊಂಡಿತು .
ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು .
ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು . ಶ್ರೀ ದೇವಾಲಯದಲ್ಲಿ ಹೊಸ ಕದಿರನ್ನು ಸಮರ್ಪಿಸಿ, ಪೂಜೆ ಸಲ್ಲಿಸಲಾಯಿತು . ವೇ ಕೃಷ್ಣ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು . ಎಲ್ಲ ಸಮುದಾಯದ ಜನರು ಶೃದ್ಧಾ ಭಕ್ತಿಗಳಿಂದ ಭಾಗವಹಿಸಿದ್ದರು .

Leave a Reply

Highslide for Wordpress Plugin