Donate

Help us to help others, please Donate

Related Links

e-Procurement Process 2015

Tender Application Form

Related Links

‘ಕಾಮಾಘನಾಶಿನಿ ಸಂದರ್ಶನೋತ್ಸವ’ ಮತ್ತು ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನ

ಸೋಮವಾರ, ಏಪ್ರಿಲ್ 10th, 2017 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ ಹೇಮಲಂಭಿ ಸಂವತ್ಸರದ ‘ಕಾಮಾಘನಾಶಿನಿ ಸಂದರ್ಶನೋತ್ಸವ’ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನಗೊಂಡಿತು .
ಶ್ರೀ ದೇವರ ಉತ್ಸವದ ಮುಂದುಗಡೆ ಸಾಂಪ್ರದಾಯಿಕ ಅಲಂಕೃತ ಸುಗ್ಗಿ ಕುಣಿಯುತ್ತ ಸಾಗುತ್ತದೆ . ಸ್ಥಳೀಯ ಹುಳಸೆಕೇರಿ ಹಾಲಕ್ಕಿ ಪಂಗಡದವರಿಂದ ಸುಗ್ಗಿ ಕುಣಿತ ಸೇವೆ ಜರುಗುತ್ತದೆ . ಶ್ರೀ ದೇವಾಲಯದಿಂದ ರಥಬೀದಿಯ ಮೂಲಕ ಸಾಗುವ ಉತ್ಸವವು ಕೋಟಿತೀರ್ಥದ ಪಟ್ಟವಿನಾಯಕ ದೇವಾಲಯಕ್ಕೆ ತೆರಳುತ್ತದೆ . ಅಲ್ಲಿ ಧಾರ್ಮಿಕ ಕೈಂಕರ್ಯ ಪೂರೈಸಿ ಸುಗ್ಗಿಯ ಕುಣಿತದ ಜೊತೆ ಉತ್ಸವವು ಶ್ರೀ ಮಹಾಗಣಪತಿ ದೇವಾಲಯಕ್ಕೆ ಆಗಮಿಸುತ್ತದೆ . ಅಲ್ಲಿ ಕಾಮದಹನ ಕಾರ್ಯಕ್ರಮ ಪೂರೈಸುವ ಮೂಲಕ ಉತ್ಸವ ಮಂಗಲವಾಯಿತು .ಶ್ರೀ ದೇವಾಲಯದ ವತಿಯಿಂದ ಪ್ರಧಾನ ಅರ್ಚಕರಾದ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಇವರು ಅರಸ ಗೌಡರು ಹಾಗು ಊರ ಗೌಡರಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವ ಸಮರ್ಪಣೆ ನೆರವೇರಿಸಿದರು .

Leave a Reply

Highslide for Wordpress Plugin