Donate

Help us to help others, please Donate

Related Links

e-Procurement Process 2015

Tender Application Form

Related Links

ಕೃಷ್ಣಾಷ್ಟಮಿ , ‘ದಧಿ ಶಿಕ್ಯೋತ್ಸವ’ ಉತ್ಸವ ಸಂಪನ್ನ

ಶನಿವಾರ, ಆಗಸ್ತು 19th, 2017 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ , ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ
ನೈವೇದ್ಯ ಪೂಜೆ ನೆರವೇರಿಸಲಾಯಿತು . ಸಾಯಂಕಾಲ ಶ್ರೀ ದೇವರ ಸಲಾಮು ಕೋಟಿತೀರ್ಥದ ಸಮೀಪವಿರುವ ಕೃಷ್ಣಾಪುರ ದೇವಾಲಯಕ್ಕೆ ತೆರಳಿ ಹಿಂದಿರುಗಿತು .

ಮರುದಿನ ನವಮಿಯಂದು ‘ದಧಿ ಶಿಕ್ಯೋತ್ಸವ’
ಸಂಜೆ ಐದು ಘಂಟೆಗೆ ಶ್ರೀ ದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ .
ಅಲ್ಲಲ್ಲಿ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗು ತೆಂಗಿನ ಕಾಯಿ ಒಡೆಯುವುದು ಈ ಉತ್ಸವದ ವಿಶೇಷ . ಈ ಉತ್ಸವಕ್ಕೆ ‘ದಧಿ ಶಿಕ್ಯೋತ್ಸವ’ ಎಂದು ಕರೆಯುತ್ತಾರೆ .
ನಂತರ ಕೋಟಿತೀರ್ಥವನ್ನು ಸುತ್ತುವರಿದು ಕೃಷ್ಣಾಪುರ ದೇವಾಲಯ ಹಾಗೂ ವೆಂಕಟರಮಣ ದೇವಾಲಯಗಳ ಮೂಲಕ ಶ್ರೀ ದೇವರ ಉತ್ಸವವು ಮರಳಿ ಬಂದಿತು .
ಎಲ್ಲ ಸಮಾಜದ ಬಂಧುಗಳು ಪಾಲ್ಗೊಳ್ಳುವ ಜನಪದೀಯ ಪರಿಕಲ್ಪನೆಯ ಈ ಉತ್ಸವದೊಂದಿಗೆ ಈ ವರ್ಷದ ಉತ್ಸವಗಳು ಶುರುವಾಗುತ್ತವೆ .

Leave a Reply

Highslide for Wordpress Plugin