Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವರಾತ್ರಿ ಮಹೋತ್ಸವ ಪ್ರಾರಂಭ :-

ಶುಕ್ರವಾರ, ಫೆಬ್ರವರಿ 9th, 2018 -

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲ೦ಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಇಂದು ಗಣೇಶ ಪೂಜೆ , ನಂದಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು .
ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ವೇ ಕೃಷ್ಣ ಭಟ್ ಷಡಕ್ಷರಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉಪಾಧಿವಂತ ಮಂಡಲದ ಸದಸ್ಯರು , ಊರ ನಾಗರೀಕರು ಹಾಜರಿದ್ದರು.
ಸಾಯಂಕಾಲ 06.00 ಘಂಟೆಗೆ ಸಮುದ್ರ ತೀರದ ‘ಮಹರ್ಷಿ ದೈವರಾತ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿತು . ರಾಜ್ಯ ಸಂಗೀತ ಅಕಾಡೆಮಿ ಸದಸ್ಯರು, ಖ್ಯಾತ ಗಾಯಕರೂ ಆದ ಡಾ ಅಶೋಕ ಹುಗ್ಗಣ್ಣವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ ವಿ ಆರ್ ಮಲ್ಲನ್ , ಸದಸ್ಯರಾದ ಶ್ರೀ ಮಹೇಶ ಶೆಟ್ಟಿ, ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಬೀರಣ್ಣ ನಾಯಕ ಅಡಿಗೋಣ , ಶ್ರೀ ಜಯರಾಮ ಹೆಗಡೆ , ಡಾ ಶೀಲಾ ಹೊಸ್ಮನೆ , ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಇವರು ಉಪಸ್ಥಿತರಿದ್ದರು .

Leave a Reply

Highslide for Wordpress Plugin