Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವರಾತ್ರಿ ಮಹೋತ್ಸವ ಶುಭಾರಂಭ

ಮಂಗಳವಾರ, ಫೆಬ್ರವರಿ 21st, 2017 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದುರ್ಮುಖ ಸಂವತ್ಸರದ ಶಿವರಾತ್ರಿ ಮಹೋತ್ಸವವು ಶುಭಾರಂಭಗೊಂಡಿತು . ಆರಂಭದಲ್ಲಿ ಮಹಾಗಣಪತಿಗೆ ವಿಶೇಷ ಪೂಜೆ ನೆರವೇರಿತು . ಆನಂತರದಲ್ಲಿ ನಂದಿ ಧ್ವಜಾರೋಹಣ , ಭೂತಬಲಿ ಜರುಗಿತು . ವೇ ಶಿತಿಕಂಠ ಭಟ್ ಇವರ ಅರ್ಚಕತ್ವದಲ್ಲಿ ವಿವಿಧ ಧಾರ್ಮಿಕ ಉತ್ಸವ, ಕಾರ್ಯಕ್ರಮಗಳು ಜರುಗಲಿವೆ . ಸಮುದ್ರ ತೀರದಲ್ಲಿರುವ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಶುಕ್ರಿ ಬೊಮ್ಮು ಗೌಡ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು . ಶಿವರಾತ್ರಿ ಸಮಿತಿಯ ಸದಸ್ಯರು, ಖ್ಯಾತ ನಾಟಿ ವೈದ್ಯ ಹನುಮಂತ ಬೊಮ್ಮು ಗೌಡ ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

Leave a Reply

Highslide for Wordpress Plugin