Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವರಾತ್ರಿ ಮಹೋತ್ಸವ ಸಂಪನ್ನ

ರವಿವಾರ, ಮಾರ್ಚ 5th, 2017 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರ ದಿವ್ಯ ಮಾರ್ಗದರ್ಶನ ಮತ್ತು ಸಾನ್ನಿಧ್ಯದಲ್ಲಿ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಸುಸಂಪನ್ನಗೊಂಡಿತು . ದಿನಾಂಕ 28-02-2017 ರಂದು ವೇ ಶಿತಿಕಂಠ ಹಿರೇಭಟ್ ಅರ್ಚಕತ್ವದಲ್ಲಿ ಚೂರ್ಣೋತ್ಸವ , ಅವಭೃತ , ಚೂರ್ಣಬಲಿ , ಕೋಟಿತೀರ್ಥದಲ್ಲಿ ಜಲಯಾನೋತ್ಸವ , ದೀಪೋತ್ಸವ , ಅಂಕುರಾರ್ಪಣೆ ಹಾಗು ಅಂಕುರ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು .ಶಿವಯೋಗದ ದಿನದಂದು ಹಾಗು ಮಹಾರಥೋತ್ಸವದಂದು ಅಸಂಖ್ಯಾತ ಭಕ್ತರು ನೆರೆದಿದ್ದರು . ಆಗಮಿಸಿದ್ದ ಭಕ್ತಸಾಗರಕ್ಕೆ ಸುಗಮ ದರ್ಶನ, ಪೂಜೆ ವ್ಯವಸ್ಥೆ , ಅಮೃತಾನ್ನ ಉಪಹಾರ / ಪ್ರಸಾದ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು . ಧರ್ಮಸಭೆ, ಸಾರ್ವಭೌಮ ವಿದ್ಯಾರ್ಥಿ ಪುರಸ್ಕಾರ ವಿತರಣೆ, ಸಾರ್ವಭೌಮ ಪ್ರಶಸ್ತಿ ಘೋಷಣೆ ಮತ್ತು ಪ್ರತಿದಿನ ವಿವಿಧ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .
ಶಿವರಾತ್ರಿ ಮಹೋತ್ಸವವು ಯಶಸ್ವಿಯಾಗಲು ಸಹಕರಿಸಿದ ಆರಕ್ಷಕ ಇಲಾಖೆ , ಲೋಕೋಪಯೋಗಿ ಇಲಾಖೆ , ಹೆಸ್ಕಾ೦ ಗೋಕರ್ಣ , ಗ್ರಾಮಪಂಚಾಯತ ಗೋಕರ್ಣ , ಕಂದಾಯ ಇಲಾಖೆ , ಆರೋಗ್ಯ ಇಲಾಖೆ , ಅರಣ್ಯ ಇಲಾಖೆ ಹೀಗೆ ಎಲ್ಲ ಇಲಾಖೆಗಳು , ನಿಗದಿತವಾಗಿ ಸೇವೆ ಸಲ್ಲಿಸುತ್ತಿರುವ ಹಾಲಕ್ಕಿ ಸಮಾಜದವರು , ಅಂಬಿಗ ಸಮಾಜದವರು , ಖಾರ್ವಿ ಸಮಾಜದವರು , ಗಾಬಿತ ಸಮಾಜದವರಿಗೆ , ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು , ಹಾಗೂ ಊರ ನಾಗರೀಕರಿಗೆ ಶ್ರೀ ದೇವಾಲಯದ ಪರವಾಗಿ ಅನಂತ ಧನ್ಯವಾದಗಳು .

Leave a Reply

Highslide for Wordpress Plugin