ಗೋಕರ್ಣ
ಗೋಕರ್ಣದ ಹುಟ್ಟು, ಬೆಳವಣಿಗೆ, ಇತಿಹಾಸ, ಶ್ರೀಮಠದ ಇತಿಹಾಸ, ಗೋಕರ್ಣ – ಶ್ರೀಮಠದ ಸಂಪರ್ಕ ಇತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುವ ಸಮಗ್ರ ಅಂಕಣ.
ಪ್ರಿಯ ಗುರು ಬಂಧು,
ಗುರುಸ್ಮರಣಪೂರ್ವಕ ವಂದನೆಗಳು
“ಅಶೋಕಾವನ” ಸಸ್ಯಸಾನುವಿನ ದಿವ್ಯತಾಣ.ಒಂದೆಡೆ ಸಮುದ್ರರಾಜನ ಭೋರ್ಗರೆತ.ಅದೂ ಅತಿವಿಶಿಷ್ಟವಾದ ಓಂಕಾರದ ಆಕೃತಿಯಲ್ಲಿ.ಇನ್ನೊಂದೆಡೆ ಪರಶಿವನೇ ಆತ್ಮಲಿಂಗರೂಪವಾಗಿ ತನ್ನೆಲ್ಲ ಪರಿವಾರದೊಂದಿಗೆ ನೆಲೆನಿಂತ ಭೂಮಂಡಲದ ಕೈಲಾಸ.ಮತ್ತೊಂದೆಡೆ ಜೀವಿಗಳಲ್ಲರ ಪಾಪ ಕಳೆವ ಅಘನಾಶಿನಿಯ ಸಮುದ್ರಸಂಗಮದ ಸುದೂರ ಪರಿಸರ.ಮಧ್ಯದಲ್ಲಿ ಮಲ್ಲಿಕಾರ್ಜುನನ ಸನ್ನಿಧಿ.ರಮಣೀಯವಾದ ಪಶುಪತಿ ತೀರ್ಥ.
ಇಂತಹ ದಿವ್ಯ-ಭವ್ಯ-ಚೇತೋಹಾರಿಯಾದ ಪೃಕೃತಿಮಾತೆಯ ಮಡಿಲನ್ನು ಶ್ರೀಶಂಕರಭಗವತ್ಪಾದರು ದರ್ಶಿಸುತ್ತಾರೆ.ಅದೂ ಜಾತಿವೈರ ಮರೆತ ಹುಲಿ-ಹುಲ್ಲೆಯ ಒಡನಾಟದೊಂದಿಗೆ.ಅಂತಹ ತಾಣಕ್ಕೊಂದು ಪೀಠ ಬೇಕೆಂದೋ,ತಾವು ಉದ್ದೇಶಿಸಿದ್ದ ಪೀಠಸ್ಥಾಪನೆಗೆ ಈ ತಾಣ ಯೋಗ್ಯವೆಂದೋ ನಿಶ್ಚಯಿಸಿ “ಶ್ರೀ ರಘೂತ್ತಮ ಪೀಠ” ವನ್ನಲ್ಲಿ ಸ್ಥಾಪಿಸುತ್ತಾರೆ.
ಹಾಗೆ ಸ್ಥಾಪನೆಗೊಂಡು ಬೆಳೆದ [...]
ಗೋಕರ್ಣದಲ್ಲಿ ಸಾವಿರನಂದಿಗಳ ಬೃಹತ್ ಗೋಶಾಲೆಯ ನಿರ್ಮಾಣ.
ಗೋಕರ್ಣ:ಮಾ.14.ವೇದಗಳಲ್ಲಿ ಪಶುಪತಿಯೆಂದೇ ವರ್ಣಿತನಾದ ಶ್ರೀಮಹಾಬಲೇಶ್ವರನ ಪ್ರೀತ್ಯರ್ಥವಾಗಿ ಸಾವಿರನಂದಿಗಳ ಸಾವಿರನಂದಿಗಳ ಬೃಹತ್ ಗೋಶಾಲೆಯೊಂದನ್ನು ಸಮೀಪದ ಅಶೋಕೆಯ ಮೂಲಮಠದ ಪ್ರದೇಶದಲ್ಲಿ ಸ್ಥಾಪಿಸುವುದಾಗಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.ನಂದಿಯ ಶೃಂಗದ ಮೂಲಕ ಈಶ್ವರದರ್ಶನವನ್ನು ಮಾಡುವ ಪದ್ಧತಿಯಿದ್ದು ಈ ನಂದಿಯು ಸಾಂಕೇತಿಕವಾಗಿ ಜೀವಾತ್ಮನನ್ನು ಪರತಿನಿಧಿಸುತ್ತದೆ,ನಂದಿಯು ಸದಾ ಈಶ್ವರನ ಎದುರಿಗೇ ಇದ್ದು ಪರಮೇಶ್ವರನನ್ನು ಅವಲೋಕಿಸುತ್ತಿರುವುದೋ ಅದೇರೀತಿಯಲ್ಲಿ ಭಕ್ತನೂ ಸಹ ಆ ಈಶ್ವರನ ಸಾಕ್ಷಾತ್ಕಾರಕ್ಕಾಗಿ ಪರಮಾತ್ಮನನ್ನು ತದೇಕಚಿತ್ತನಾಗಿ ಧ್ಯಾನಿಸಬೇಕು ಎಂಬುದೇ ಶಿವದೇವಾಲಯಗಳಲ್ಲಿ ನಂದಿಯನ್ನು ಪ್ರತಿಷ್ಠಾಪಿಸುವ ುದ್ದೇಶವಾಗಿದೆ ಎಂದೂ ಸಹ ಪೂಜ್ಯ ಶ್ರೀಗಳು ಅಭಿಪ್ರಾಯ [...]
ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳು
ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳ ಬಗೆಗಿನ ವಿವರಗಳು :
ಗೋಕರ್ಣ ಮತ್ತು ಶ್ರೀರಾಮಚಂದ್ರಾಪುರ ಮಠ
ಸನಾತನ ವೈದಿಕಧರ್ಮಪ್ರತಿಷ್ಠಾಪನಾಚಾರ್ಯ ಎಂದೇ ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾದ ಶ್ರೀಮದಾಚಾರ್ಯಶಂಕರಭಗವತ್ಪಾದರು ತಮ್ಮ ಶಿಷ್ಯ – ಪ್ರಶಿಷ್ಯರೊಂದಿಗೆ ಗೋಕರ್ಣಕ್ಕೆ ಆಗಮಿಸಿ, ಸಾರ್ವಭೌಮ ಮಹಾಬಲನನ್ನು ವಿಧಿವತ್ತಾಗಿ ಅರ್ಚಿಸಿದರು. ಅಲ್ಲದೇ ಆಸ್ತಿಕಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ ಶ್ರೀಮದಾಚಾರ್ಯರು ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದರು…
ಇತಿಹಾಸ
’ಗೋಕರ್ಣ’ ಭಾರತೀಯರೆಲ್ಲರಿಗೆ ಅತ್ಯಂತ ಪವಿತ್ರವಾದ ತ್ರಿಸ್ಥಳಗಳಲ್ಲಿ ಒಂದು. ಅಂತೆಯೇ ಭರತಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿಯೂ ಒಂದು. ಜಗದಾಧಾರನಾದ ಪರಶಿವನು ಇಲ್ಲಿ ಆತ್ಮಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೋರ್ಗರೆವ ಪಶ್ಚಿಮ ಸಮುದ್ರದ ತಡಿಯಲ್ಲಿ ಸಾಗರಾಭಿಮುಖನಾಗಿ ಸ್ಥಾಪಿತನಾದ ಈ ಕೃಪಾಸಾಗರ ಸಾರ್ವಭೌಮ ಮಹಾಬಲನೆಂದೇ ಖ್ಯಾತ.