ಮಹಾ ಶಿವರಾತ್ರಿ

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನಡೆಯುವ ಮಹಾ ಶಿವರಾತ್ರಿ ಆಚರಣೆಯ ಸಮಗ್ರ ಸುದ್ದಿ ಈ ಅಂಕಣದಲ್ಲಿ ಲಭ್ಯ.


ಶಿವರಾತ್ರಿ ಉತ್ಸವದ ಆಹ್ವಾನ.


ಗೋಕರ್ಣದ ಮಹಾಶಿವರಾತ್ರಿ ಉತ್ಸವ.”ಸುವಸ್ತುಸಂಗ್ರಹರಥ”ಸಂಚಾರ.


ಜಗತ್ತಿನ ಮೊದಲ ಚಿತ್ರಕಾರ ಶಿವ – ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು [...]


ಗೋಕರ್ಣ ಬದಲಾಗುತ್ತಿದೆ : ಹೊಸದಿಗಂತ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ನೇರನುಡಿಯ ಬರಹ

ಮೊನ್ನೆ ಸಂಪನ್ನಗೊಂಡ  ಶಿವರಾತ್ರಿಯ ಬಗ್ಗೆ ಹೊಸದಿಗಂತದ ಪ್ರಧಾನ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ರವರು ತಮ್ಮ ನೇರನುಡಿ ಅಂಕಣದಲ್ಲಿ ಅನುಭವ – ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಓದಿ, ಅಭಿಪ್ರಾಯ ತಿಳಿಸಿ . . .


ಶಿವರಾತ್ರಿಯ ಸಮಾರೋಪ ಹಲವು ಹೊಸತುಗಳಿಗೆ ನಾಂದಿಯಾಗಲಿದೆ : ರಾಘವೇಶ್ವರ ಶ್ರೀ

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೬ – ಪ್ರತಿಯೊಂದು ರಾತ್ರಿಯೂ ಶುಭ ಮುಂಜಾವಿನ ಪೂರ್ವರಂಗ.
ಅಂತೆಯೇ ಶಿವರಾತ್ರಿಯ ಈ ಪರ್ವವು ಸಹ ಎಷ್ಟೋ ಕಾಲದಿಂದ ಅವ್ಯವಾಗಿದ್ದ ಆತ್ಮಲಿಂಗ ಸ್ವರೂಪಿಯಾದ ಶಿವ ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ’ಹರಹರ ಮಹಾದೇವ’ ಎಂಬ ಘೋಷಣೆಯಲ್ಲಿ ಉಳಿದೆಲ್ಲ ಶಬ್ದಗಳು ಮುಚ್ಚಿ ಹೋದವು ಎಂದು ಶ್ರೀ ರಾಘವೇಶ್ವರಭಾರತೀ ಶ್ರೀಗಳು [...]


ಗೋಕರ್ಣ : ನಾಲ್ಕು ದಿಕ್ಕು, ನೂರು ಧ್ವನಿ

ಗೋಕರ್ಣ, ಫೆ.೨೬ – ಮಹಾಶಿವರಾತ್ರಿ ಉತ್ಸವ ವಿಧ್ಯುಕ್ತವಾಗಿ ಮಂಗಲವನ್ನು ಕಂಡಿದೆ. ಗೋಕರ್ಣದ ಮಟ್ಟಿಗೆ ಈ ಒಂಭತ್ತು ದಿನಗಳ ಉತ್ಸವ ಹೊಚ್ಚಹೊಸತು. ಇಲ್ಲಿಯವರೆಗೆ ವಾರ್ಷಿವಾಗಿ ಒಂಭತ್ತು ದಿನಗಳ ಉತ್ಸವ ನಡೆಯುತ್ತಿತ್ತಾದರೂ ಈ ರೀತಿಯ ಸಂಭ್ರಮ ಇರಲಿಲ್ಲ.


ತ್ಯಾಗಬುದ್ಧಿಯಿಂದ ಮಾತ್ರ ಪರಮಾತ್ಮ ಸಾಕ್ಷಾತ್ಕಾರ – ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೫ – ಜಗತ್ತಿಗೆ, ಸಮಾಜಕ್ಕೆ ನನ್ನಿಂದ ಒಳಿತಾಗಲಿ ಎಂಬ ಬುದ್ಧಿಯಿಂದ ಮಾಡಿದ ಸ್ವಾರ್ಥ ಲೇಪವಿಲ್ಲದ ಕಾರ್ಯದಿಂದ ಮಾತ್ರ ಪರಮಾತ್ಮನನ್ನು ಹೊಂದಲು ಸಾಧ್ಯ. ಇದೇ ಮಾನವನಲ್ಲಿ ಮಾಧವನನ್ನು ನೋಡುವ ರೀತಿಯೂ ಸಹ ಜಗತ್ತಿನ ಎಲ್ಲ ಕಷ್ಟಕೋಟಲೆಗಳನ್ನು ತಾನು ನುಂಗಿ ಒಳ್ಳೆಯದನ್ನು ಜಗತ್ತಿಗೆ ನೀಡುವ ಸಂಕೇತ ಹಾಲಾಹಲವನ್ನು ಕುಡಿದು ಲೋಕಕ್ಕೆ [...]


ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಅಗತ್ಯ – ಮೋಹನ ಆಳ್ವ

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೪ – ಸುಮಾರು ಇಪ್ಪತ್ತು ಸಹಸ್ರ ವರ್ಷಗಳ ಇತಿಹಾಸ ಹೊಂದಿದ ಜಾಗತಿಕ ಸ್ತರದ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಮೂರುಸಾವಿರಕ್ಕೂ ಮೀರಿದ ಭಾಷೆಗಳಿವೆ. ಈ ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿತವಾಗಿರುವುದು ಭಾರತೀಯ ಜೀವನ ಪದ್ಧತಿಯಿಂದ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಹಿಮಾಲಯದವರೆಗೆ ಭಾರತೀಯರು ಬದುಕಿದ ರೀತಿ ಒಂದೇ.

ಇಂತಹ ಮಹತ್ತ್ವಪೂರ್ಣ ಸ್ಥಾನದಲ್ಲಿರುವ ನಮಗೆ ಸಾಮಾಜಿಕ ಜವಾಬ್ದಾರಿಯೂ ಇದ್ದೇ‌ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದ್ದಾರೆ.


ಮುಖ್ಯಮಂತ್ರಿಗಳಿಗೆ ನಂದಿಯ ಅನುಗ್ರಹ

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತಪರ ಮುಂಗಡಪತ್ರ ಮಂಡಿಸಿ, ಕೃಷಿಪರ ಮುಖ್ಯಮಂತ್ರಿ ಎನಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ‘ನಂದಿ’ಯನ್ನು ಪ್ರದಾನ ಮಾಡಲಾಯಿತು.


ಎಲ್ಲೆಲ್ಲೂ ಜನವೋ ಜನ

ಆತ್ಮಲಿಂಗದ ಅಭಿಷೇಕ ಅರ್ಚನೆಗೆ ಭಕ್ತಾದಿಗಳು ದೊಡ್ಡ ಸಂದಣಿಯಲ್ಲೇ ನೆರೆದಿದ್ದಾರೆ. ಲಕ್ಷ ಲಕ್ಷಗಳಲ್ಲಿ ಎಂದು ಹೇಳಬಹುದೇನೋ.
ಈ ಸಂದಣಿ ನಿನ್ನೆ ರಾತ್ರಿಯಿಂದಲೇ ನೆರೆಯಲು ಶುರುವಾಗಿದೆ. ಶಿವರಾತ್ರಿಯ ಪ್ರಯುಕ್ತ ಆತ್ಮಲಿಂಗಕ್ಕೆ ಮೊದಲ ಅಭಿಷೇಕ ನಿನ್ನೆ ಮಧ್ಯರಾತ್ರಿಯೇ ಪ್ರಾರಂಭವಾಗಿದ್ದು, ಇಂದೂ ಮುಂದುವರೆದಿದೆ.
ರಾತ್ರಿ ಹಗಲುಗಳ ಯಾವುದೇ ಭೇದವಿಲ್ಲದೇ ಬಂದ ಭಕ್ತಸ್ತೋಮ ಮೊದಲು ಕೋಟಿತೀರ್ಥದಲ್ಲಿ ಮಿಂದು ನಂತರ ಸಮುದ್ರಕ್ಕೆ ಮೈಕೊಟ್ಟು ಅನಂತರ ಅಭಿಷೇಕದ ಸರತಿ ಸಾಲಿನಲ್ಲಿ ನಿಲ್ಲಲು ಧಾವಿಸುತ್ತಿದೆ. ಒಂದು ಸಾಲು ಕೋಟಿತೀರ್ಥದ ಕಡೆಯಿಂದ ದೇವಾಲಯವನ್ನು ಪ್ರವೇಶಿಸಿದರೆ, ಮತ್ತೊಂದು ಸಮುದ್ರದ ಕಡೆಯಿಂದ, ಹೀಗೆ ನಾಲ್ಕೂ ದಿಕ್ಕುಗಳಿಂದ [...]