ಪ್ರಕಟಣೆಗಳು

ಗೋಕರ್ಣ ದೇವಾಲಯದ ಅಧಿಕೃತ ಪ್ರಕಟಣೆಗಳು, ಸುದ್ದಿ ಮಾಹಿತಿಗಳು, ಹಾಗೂ ಆಗು ಹೋಗುಗಳ ಒಳನೋಟ ಈ ಅಂಕಣದಲ್ಲಿ ಲಭ್ಯ.


ಗೋಕರ್ಣ: ಸುವಸ್ತು ಸಂಗ್ರಹ ರಥ

ಹರೇರಾಮ,
ಶ್ರೀ ಕ್ಷೇತ್ರ ಗೋಕರ್ಣದ ಶಿವರಾತ್ರಿ ಮಹೋತ್ಸವದ ಸುವಸ್ತು ಸಂಗ್ರಹಕ್ಕಾಗಿ ಸುವಸ್ತು ಸಂಗ್ರಹ ರಥ ವಿದ್ಯುಕ್ತವಾಗಿ ಸಂಚಾಲನೆಗೊಂಡಿತು.

ವೇ. ಶಿತಿಕಂಠ ಹಿರೇ ಭಟ್ಟರು ಪೂಜೆ ನೆರವೇರಿಸಿದರು .
ಶಿವರಾತ್ರಿ  ಮಹೋತ್ಸವ ಸಮಿತಿಯ ಸದಸ್ಯರು, ಹಾಗೂ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವಂತರು ಉಪಸ್ಥಿತರಿದ್ದರು.
ಈ ರಥವು ಭಟ್ಕಳ, ಹೊನ್ನಾವರ, ಕುಮಟ , ಅಂಕೋಲಾ , ಕಾರವಾರ, ಸಿದ್ದಾಪುರ ತಾಲೂಕುಗಳಲ್ಲಿ ಸಂಚರಿಸಿ ಶಿವರಾತ್ರಿ ಮಹೋತ್ಸವಕ್ಕೆ ಜನರನ್ನು ಆಮಂತ್ರಿಸುವ ಮತ್ತು ಜನರು ಅಮೃತಾನ್ನ ಪ್ರಸಾದ ಭೋಜನಕ್ಕಾಗಿ ನೀಡುವ ಸುವಸ್ತುಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ.

ಶ್ರೀ ಕ್ಷೇತ್ರ ಗೋಕರ್ಣದ  ಶಿವರಾತ್ರಿ [...]


ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳವರ ಭೇಟಿ

ದಿನಾಂಕ 02/02/2012 ಗುರುವಾರದಂದು ಸಾಯಂಕಾಲ ಶ್ರೀ ಕ್ಷೇತ್ರ ಬೇಬಿ ಮಠದ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ನೆರವೇರಿಸಿದರು.

ಶ್ರೀಗಳವರಿಗೆ ಫಲ-ತಾಂಬೂಲ ಸಮರ್ಪಣೆ ಮಾಡಲಾಯಿತು. ವೇ.ಮೂ. ರಮೇಶ ಪ್ರಸಾದ ಪೂಜಾ ವಿಧಿ ನೆರವೇರಿಸಿದರು.
ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳವರು ಶ್ರೀ ದೇವಾಲಯವು ಪರಮಪೂಜ್ಯ ರಾಘವೇಶ್ವರ ಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ
ಅಭಿವೃದ್ದಿ ಹೊಂದುತ್ತಿದ್ದು , ಮುಂದಿನ ದಿನಗಳಲ್ಲಿ ಮಹೋನ್ನತವಾದ ಶ್ರೀ ಕ್ಷೇತ್ರವಾಗಿ ಪರಿಣಮಿಸಲಿ ಎಂದು ಹಾರೈಸಿದರು.


ಶ್ರೀ ದೇವಾಲಯದಲ್ಲಿ ಸುವರ್ಣ-ರಜತ ನಾಣ್ಯ ಅಭಿಷೇಕ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ದಿನಾಂಕ 15-01-2012 ಭಾನುವಾರದಂದು ಶ್ರೀ ಅಶ್ವಥ ನಾರಾಯಣ ಚಿಕಾಗೋ (- ಅಮೇರಿಕ) ಇವರಿಂದ ಶ್ರೀ ಆತ್ಮಲಿಂಗಕ್ಕೆ ಸುವರ್ಣ-ರಜತ ನಾಣ್ಯ ಅಭಿಷೇಕ ವಿಶೇಷ ಪೂಜೆ ನಡೆಯಿತು.


ಗೋಕರ್ಣಕ್ಕೆ ಗಣ್ಯರು

ಶ್ರೀ ದೇವಾಲಯಕ್ಕೆ ಭೇಟಿ ನೀಡಿದ ಪೂಜ್ಯ ಸಂತರು, ಮಹನೀಯರುಗಳು
ಶ್ರೀ ಮಹಾಬಲನ ಪೂಜೆಮಾಡಿ ಧನ್ಯಭಾವ ಪಡೆದರು.


ಮಧ್ಯಾಹ್ನ 12.00 ರಿಂದ 02.30 ಪ್ರಸಾದ ಭೋಜನ

ಹರೇ ರಾಮ,

ಅಮೃತಾನ್ನ ಪ್ರಸಾದ ಭೋಜನ |
ಪ್ರತಿ ಮಧ್ಯಾಹ್ನ ಸ್ವೀಕರಿಸಿ ಭಕ್ತಜನ ||
ಮಹಾದೇವ ಸಂಪ್ರೀತಿಯಲಿ  ಅನ್ನ, ಪಾಯಸ|
ಗುರುದೇವ ಕರುಣಿಸಲಿ ದೇವ ರಾಯಸ ||
ಪ್ರತಿದಿನವೂ ಮಧ್ಯಾಹ್ನ 12.00 ರಿಂದ 02.30 ವರೆಗೆ
ಉಚಿತವಾಗಿ ಅಮೃತಾನ್ನ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ.
Prasad Bhojan for one and all
Every noon Anna – Payasa in a hall.
Mothers love  by Gurudev
Blessings by Lord Mahadev.

Amrutanna Prasad Bhojan 12.00 to 02.30 noon for all [...]


ಗೋಕರ್ಣ ತ್ರಿಪುರಾಖ್ಯ ದೀಪೋತ್ಸವ


ಮಾಧ್ಯಮ ವರದಿ – ತ್ರಿಪುರಾಖ್ಯ ದೀಪೋತ್ಸವ


ಗೋಕರ್ಣದಲ್ಲಿ ಕನಕಾಭಿಷೇಕ ಸೇವೆ ಆರಂಭ್ಣ

ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ಇತ್ತೀಚೆಗಿನ ಶತಮಾನಗಳಲ್ಲಿಯೇ ಕಾಣದಿದ್ದ ಕನಕಾಭಿಷೇಕ ಹಾಗೂ ರಜತಾಭಿಷೇಕ.
ಪರಮಪೂಜ್ಯ ಶ್ರೀ ಶ್ರೀಗಳವರಿಂದ ಈ ಸೇವೆಗಳ ಸಮರ್ಪಣೆ.


ಗೋಕರ್ಣದಲ್ಲಿ ಸೀಮೋಲ್ಲಂಘನ ಪೂಜೆ


ಗೋಕರ್ಣದಲ್ಲಿ ಶ್ರೀ ಶ್ರೀರವಿಶಂಕರಗುರೂಜಿ.