ಶ್ರೀರಾಮಚಂದ್ರಾಪುರ ಮಠ

ಶ್ರೀ ಆಚಾರ್ಯ ಶಂಕರರಿಂದ ಸ್ಥಾಪನೆಗೊಂಡು, ಅವಿಚ್ಛಿನ್ನವಾಗಿ ನಡೆದು ಬಂದಿರುವ ಗುರುಪರಂಪರೆಯ ಬಗೆಗೆ, ಶ್ರೀ ರಾಮಚಂದ್ರಾಪುರ ಮಠದ ಬಗೆಗೆ, ಮಠದ ಎಲ್ಲಾ ಕಾರ್ಯಕ್ರಮಗಳ ಬಗೆಗೆ ಮಾಹಿತಿಗಾಗಿ ಈ ಅಂಕಣ.


ಗೋಕರ್ಣ ಮತ್ತು ಶ್ರೀರಾಮಚಂದ್ರಾಪುರ ಮಠ

ಸನಾತನ ವೈದಿಕಧರ್ಮಪ್ರತಿಷ್ಠಾಪನಾಚಾರ್ಯ ಎಂದೇ ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾದ ಶ್ರೀಮದಾಚಾರ್ಯಶಂಕರಭಗವತ್ಪಾದರು ತಮ್ಮ ಶಿಷ್ಯ – ಪ್ರಶಿಷ್ಯರೊಂದಿಗೆ ಗೋಕರ್ಣಕ್ಕೆ ಆಗಮಿಸಿ, ಸಾರ್ವಭೌಮ ಮಹಾಬಲನನ್ನು ವಿಧಿವತ್ತಾಗಿ ಅರ್ಚಿಸಿದರು. ಅಲ್ಲದೇ ಆಸ್ತಿಕಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ ಶ್ರೀಮದಾಚಾರ್ಯರು ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದರು…