ಮುಖಪುಟ >> News, ಸುದ್ದಿಪುಟ

ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀ ಚಂದ್ರಶೇಖರಸ್ವಾಮೀಜಿ

..................................................................................................................................................

ಗೋಕರ್ಣ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಜ್ಯೋತಿಷಿ  ಶ್ರೀಚಂದ್ರಶೇಖರಸ್ವಾಮೀಜಿಯವರು ೨೪ ಶನಿವಾರದಂದು ಶ್ರೀಕ್ಷೇತ್ರಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀಮಹಾಬಲೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಅರ್ಚಿಸಿದರು. ಅಲ್ಲದೆ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕೋಟಿರುದ್ರಾನುಷ್ಠಾನವನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸ್ವಾಮೀಜಿ ದೇವಾಲಯವು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಹೊಸತನವನ್ನು ಕಂಡಿದೆ. ಯಾತ್ರಿಕ ಭಕ್ತರಿಗಾಗಿ ಅನೇಕ ಸುಧಾರಣೆಗಳನ್ನು ಆಡಳಿತ ವ್ಯವಸ್ಥೆ ಕೈಗೊಂಡಿದೆ. ಇದು ಅತ್ಯಂತ ಸಂತೋಷಕರವಾದ ವಿಷಯಎಂದು ಹೇಳಿ ಶ್ರೀದೇವಾಲಯದಿಂದ ಯಾತ್ರಿಕರಿಗಾಗಿ ನಡೆಯುತ್ತಿರುವ ಅಮೃತಾನ್ನ ಪ್ರಸಾದಭೋಜನ ವ್ಯವಸ್ಥೆಗಾಗಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡಿದರಲ್ಲದೆ ಅನ್ನಛತ್ರಕ್ಕಾಗಿ ೨೫ ಲಕ್ಷರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಆಶ್ವಾಸನೆಯಿತ್ತರು. ಕೋಟಿರುದ್ರ ಸಮಿತಿಯ ಶ್ರೀ ಶಿತಿಕಂಠಭಟ್ಟ ಹಿರೇ, ಉಪಾಧಿವಂತಮಂಡಲz ವೇ. ಗಣೇಶ ನಾರಾಯಣ ಹಿರೇಗಂಗೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------------------------------------------------------------------------------------------------------------------------------------------------------------------------------

Leave a Reply