ಮುಖಪುಟ >> ಗುರುವಾಣಿ

ಸಂತರ ಜೀವನ

..................................................................................................................................................

-  ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ

ಸತ್ಯದ ಹಾದಿ ಸದಾ ದುರ್ಗಮ. ಅದು ನಿರಂತರ ಎಕಾಂಗಿತನದಿಂದ ಕೂಡಿದೆ. ಕಾಣುವ ಪ್ರಪಂಚದ ಭೋಗಗಳನ್ನು ಬಿಟ್ಟು ಕಾಣದ ಭಗವಂತನ ಹಿಂದೆ ಓಡುವ ಸಂತರ ಜೀವನ ಜನರ ಕಣ್ಣಿಗೆ ವಿಲಕ್ಷಣವಾಗಿ  ಕಾಣುವುದು. ಎಲ್ಲ ಸುಖ – ದುಃಖಗಳ  ತಾಯಿಯೆನಿಸಿದ, ತಮ್ಮಲ್ಲೇ ಹುದುಗಿರುವ ಪರಮಾತ್ಮ ಸುಖವನ್ನು ಬಿಟ್ಟು ಹೊರಗಿನ ವಿಷಯ ಸುಖಗಳಿಗಾಗಿ ಹಾತೊರೆಯುವ ಜಗತ್ತು ಜ್ಞಾನಿಗಳ ಕಣ್ಣಿಗೆ ಹುಚ್ಚಾಗಿ ತೋರುವುದು. ವಿಷಯ ಸುಖದ ಪೊರೆಯನ್ನು ಕಳಚಿ ಅಂತರಂಗದ ಆನಂದದಲ್ಲೇ ನೆಲೆ ನಿಲ್ಲುವ ಸಂತನ ಜೀವನ ಅನುಕರಣೀಯ, ಅನುಸರಣೀಯ.

|| ಹರೇ ರಾಮ  ||

---------------------------------------------------------------------------------------------------------------------------------------------------------------------------------------

Leave a Reply