ಹಣ
..................................................................................................................................................
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ
ಜಗತ್ತಿನ ಎಲ್ಲ ಮಾದಕ ವಸ್ತುಗಳಿಗಿಂತ ಹೆಚ್ಚು ಮತ್ತೇರಿಸುವ ವಸ್ತು ಹಣ. ಮಾದಕ ವಸ್ತುಗಳು ತಾತ್ಕಾಲಿಕವಾಗಿ ಮತ್ತೇರಿಸಿದರೆ ಹಣ ನಿರಂತರ ಮತ್ತೆರಿಸುತ್ತಲೇ ಇರುತ್ತದೆ, ಅರ್ಥದ ಹಿಂದೆ ಧರ್ಮದ ಹಿನ್ನೆಲೆ ಇರದಿದ್ದರೆ ಮನುಷ್ಯ ಹಾರಾಡುತ್ತಾನೆ. ದೇವ – ಗುರು – ಹಿರಿಯರನ್ನು ಧಿಕ್ಕರಿಸುತ್ತಾನೆ. ಹಣ ಕಳೆದುಕೊಂಡರೆ ಬಲ – ದರ್ಪಗಳು ಕಳೆದು ಹೋಗುತ್ತವೆ, ಬದುಕನ್ನು ಬಿರುಗಾಳಿಗೆ ಒಡ್ಡಬಲ್ಲ ಅರ್ಥವೂ ಧರ್ಮದ ಚೌಕಟ್ಟಿನಲ್ಲಿ ಬಂಧಿತವಾಗಿ ಆತ್ಮಕಲ್ಯಾಣಕ್ಕೂ ಲೋಕ ಕ್ಷೇಮಕ್ಕೂ ಕಾರಣವಾಗಬೇಕು.
|| ಹರೇ ರಾಮ ||
Leave a Reply