ಕಲೆ ಶಿವಾರಾಧನ ಸಾಧನ : ರಾಘವೇಶ್ವರ ಶ್ರೀ
..................................................................................................................................................
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಿದರು.
ಜಗತ್ತಿನ ಆದಿ ನಟ ಶಿವ. ಶಿವನ ತಾಂಡವ ಸಂಹಾರಕ್ಕೆ ಪ್ರತೀಕ. ಗೌರಿಯ ಲಾಸ್ಯ ಸೃಷ್ಟಿಯ ಸಂಕೇತ. ಇವುಗಳ ಸಂಗಮವೇ ತಾಲ. ಶಿವ ಕಲಾಧರ. ಚಂದ್ರಕಲೆ ಜ್ಞಾನರೂಪವಾದ ಎಲ್ಲ ಕಲೆಗಳಿಗೆ ಪ್ರತೀಕವಾಗಿದೆ. ಉತ್ತಮ ಸಂಗೀತ ನೃತ್ಯಗಳ ಮೂಲಕ ನಾವು ಬ್ರಹ್ಮಾನಂದ ಸದೃಶವಾದ ಸಂತೋಷವನ್ನು ಪಡೆಯಬಹುದು ಎಂದು ಹೇಳಿದರು.
ಶ್ರೀ ಪ್ರಶಾಂತ ದೇಶಪಾಂಡೆ ಮಾತನಾಡಿ ಈ ಶಿವರಾತ್ರಿ ಮಹೋತ್ಸವ ಕಲಾ ಪ್ರಪಂಚಕ್ಕೆ ಬಹುದೊಡ್ಡ ಕೊಡುಗೆ. ಹಿಂದೆ ಆಳರಸರು ನೃತ್ಯ, ಸಂಗೀತ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಂದು ಪೂಜ್ಯ ಶ್ರೀ ಕಲೆಗಳಿಗೆ ಪ್ರೋತ್ಸಾಹ ನೀಡಿ ಒಂಭತ್ತು ದಿನಗಳ ಕಲೋತ್ಸವವನ್ನು ಆಯೋಜಿಸಿದ್ದಾರೆ ಎಂದು ನುಡಿದರು.

Leave a Reply