ಮುಖಪುಟ >> ಮಹಾ ಶಿವರಾತ್ರಿ

ಗೋಕರ್ಣ : ಉತ್ಸವದಲ್ಲಿ ಗುನ್ಯಾಕ್ಕೆ ಉಚಿತ ಗವ್ಯ ಚಿಕಿತ್ಸೆ

..................................................................................................................................................

ಗೋಕರ್ಣ, ಫೆ.೧೯ – ಗೋಕರ್ಣದಲ್ಲಿ ಒಂದು ಕಡೆ ಮಹಾಶಿವರಾತ್ರಿ ಮಹೋತ್ಸವದ ಸಂಭ್ರಮವಾದರೆ ಮತ್ತೊಂದೆಡೆ ಚಿಕೂನ್ ಗುನ್ಯಾ ಪೀಡಿತರಿಗಾಗಿ ಉಚಿತ ಗವ್ಯ ಚಿಕಿತ್ಸೆಯನ್ನು ಆಯೋಜಿಸಲಾಗಿದೆ.

ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಕೂನ್ ಗುನ್ಯಾದ ಸಮಸ್ಯೆ ಉಲ್ಬಣಗೊಂಡಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಶ್ರೀರಾಮಚಂದ್ರಾಪುರಮಠ ಗವ್ಯ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ತಪಾಸಣೆ, ಚಿಕಿತ್ಸೆಗಳೆರಡನ್ನೂ ಉಚಿತವಾಗಿ ನೀಡಲಾಗುತ್ತದೆ. ಚಿಕಿತ್ಸೆಗೆ ಗೋ ಆಧಾರಿತ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳ ಭಯವಿರುವುದಿಲ್ಲ.

ಗೋಕರ್ಣದಲ್ಲಿ ಗವ್ಯ ಉತ್ಪನ್ನಗಳ ಮಾರಾಟ ಮಳಿಗೆ

ಗೋಕರ್ಣದಲ್ಲಿ ಗವ್ಯ ಉತ್ಪನ್ನಗಳ ಮಾರಾಟ ಮಳಿಗೆ

ಈ ಹಿಂದೆ ೨೦೦೮ರ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ಮಾದರಿಯ ಚಿಕಿತ್ಸೆಯನ್ನು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಭಾಗಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ನೀಡಲಾಗಿದ್ದು, ಅದು ಯಶಸ್ವಿಯಾಗಿರುತ್ತದೆ.

ಹಾಗಾಗಿ ರೋಗ ಪೀಡಿತರು ಚಿಕಿತ್ಸೆಯ ಪ್ರಯೋಜನವನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೇ ತಜ್ಞ ವೈದ್ಯರು ಮಧುಮೇಹ, ಅಟ್ಲುಪಿತ್ತ, ಸ್ತ್ರೀರೋಗ, ಕ್ಯಾನ್ಸರ್ ಪೀಡಿತ ರೋಗಿಗಳ ಉಚಿತ ತಪಾಸಣೆಯನ್ನೂ ಮಾಡುತ್ತಾರೆ.

ಈ ಶಿಬಿರ ಮಹಾಶಿವರಾತ್ರಿ ಮಹೋತ್ಸವದ ಒಂಭತ್ತು ದಿನಗಳ ಕಾಲವೂ ನಡೆಯಲಿದೆ.

---------------------------------------------------------------------------------------------------------------------------------------------------------------------------------------

Leave a Reply