ಗೋಕರ್ಣ: ಮಹಾಶಿವರಾತ್ರಿ ಉತ್ಸವಕ್ಕೆ ಕ್ಷಣಗಣನೆ
..................................................................................................................................................
ಗೋಕರ್ಣ, ಫೆ.೧೭ – ಮಹಾಶಿವರಾತ್ರಿ ಮಹೋತ್ಸವಕ್ಕಾಗಿ ಗೋಕರ್ಣ ಬಗೆಬಗೆಯ ಅಲಂಕಾರಗಳೊಂದಿಗೆ ಸಜ್ಜಾಗುತ್ತಿದೆ. ತನ್ನಿಮಿತ್ತ ಶ್ರೀ ರಾಘವೇಷ್ವರ ಭಾರತೀ ಮಹಾ ಸ್ವಾಮಿಗಳು ಪುರವನ್ನು ಪ್ರವೇಶಿಸಿ, ಸಕಲ ತಯಾರಿಗಳನ್ನೂ ವೀಕ್ಷಿಸಿದರು.
ಕಳೆದ ಮಕರ ಸಂಕ್ರಮಣದಂದು ಹೊರಟು ಉತ್ತರಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ ’ಮಹಾಶಿವರಾತ್ರಿ ಉತ್ಸವ ರಥ’ ಮತ್ತು ಹೃಷೀಕೇಶದಿಂದ ಪವಿತ್ರ ಗಂಗಾ ಜಲವನ್ನು ಹೊತ್ತು ಬಂದ ’ಗಂಗಾ ಜಲ ರಥ’ವೂ ಪುರವನ್ನು ಪ್ರವೇಶಿಸಿತು.
ನಾಳೆಯಿಂದ ಮಹಾಶಿವರಾತ್ರಿ ಮಹೋತ್ಸವ ಪ್ರಾರಂಭವಾಗಲಿದೆ. ನಾಳಿನ ಧರ್ಮಸಭೆಯಲ್ಲಿ ಶ್ರೀ ರಾಮಾನಂದ ಅವಧೂತರು, ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವ ಕೃಷ್ಣಯ್ಯ ಶೆಟ್ಟಿ, ಶಾಸಕ ದಿನಕರ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

Hare Rama.I heartily congratulate for your efforts to launch this site before shivaratri.I am visiting Gokarna along with one bus full of people from HBR layout,Bangalore,on 22nd and I wanted to know many things about shivaratri celebrations.You are effectively providingit..
I have a small request.It will be good if you can provide guides for local area tour from math..Because,usually people are misguided in temple towns.At least to bus full of people or tourists coming for the first time.Pl ensure clean drinking water supply,and extra security ..as Taliban is eyeing at coastal Karnataka.Pranams at the lotus feet of Smastana