ಎಲ್ಲೆಲ್ಲೂ ಜನವೋ ಜನ
..................................................................................................................................................
ಆತ್ಮಲಿಂಗದ ಅಭಿಷೇಕ ಅರ್ಚನೆಗೆ ಭಕ್ತಾದಿಗಳು ದೊಡ್ಡ ಸಂದಣಿಯಲ್ಲೇ ನೆರೆದಿದ್ದಾರೆ. ಲಕ್ಷ ಲಕ್ಷಗಳಲ್ಲಿ ಎಂದು ಹೇಳಬಹುದೇನೋ.
ಈ ಸಂದಣಿ ನಿನ್ನೆ ರಾತ್ರಿಯಿಂದಲೇ ನೆರೆಯಲು ಶುರುವಾಗಿದೆ. ಶಿವರಾತ್ರಿಯ ಪ್ರಯುಕ್ತ ಆತ್ಮಲಿಂಗಕ್ಕೆ ಮೊದಲ ಅಭಿಷೇಕ ನಿನ್ನೆ ಮಧ್ಯರಾತ್ರಿಯೇ ಪ್ರಾರಂಭವಾಗಿದ್ದು, ಇಂದೂ ಮುಂದುವರೆದಿದೆ.
ರಾತ್ರಿ ಹಗಲುಗಳ ಯಾವುದೇ ಭೇದವಿಲ್ಲದೇ ಬಂದ ಭಕ್ತಸ್ತೋಮ ಮೊದಲು ಕೋಟಿತೀರ್ಥದಲ್ಲಿ ಮಿಂದು ನಂತರ ಸಮುದ್ರಕ್ಕೆ ಮೈಕೊಟ್ಟು ಅನಂತರ ಅಭಿಷೇಕದ ಸರತಿ ಸಾಲಿನಲ್ಲಿ ನಿಲ್ಲಲು ಧಾವಿಸುತ್ತಿದೆ. ಒಂದು ಸಾಲು ಕೋಟಿತೀರ್ಥದ ಕಡೆಯಿಂದ ದೇವಾಲಯವನ್ನು ಪ್ರವೇಶಿಸಿದರೆ, ಮತ್ತೊಂದು ಸಮುದ್ರದ ಕಡೆಯಿಂದ, ಹೀಗೆ ನಾಲ್ಕೂ ದಿಕ್ಕುಗಳಿಂದ ದೇವಾಲಯಕ್ಕೆ ಭಕ್ತ ಸಾಗರ ಹರಿಯುತ್ತಿದೆ.
ಈ ಬಾರಿಯ ವಿಶೇಷವಾಗಿ ‘ಗಂಗಾ ಜಲಾಭಿಷೇಕ’ವನ್ನು ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಗಂಗೆಯನ್ನು ಹೃಷೀಕೇಶದಿಂದ ತರಲಾಗಿದ್ದು, ಅಭಿಷೇಕವನ್ನು ಗೈಯ್ಯಲು ಜನ ಮುಗಿಬೀಳುತ್ತಿದ್ದಾರೆ. ಗಂಗೆಯನ್ನು ಶಿವನ ಶಿರಕ್ಕೆ ಸುರಿಯುವ ಧನ್ಯತಾ ಭಾವ ಮುಗಿಲುಮುಟ್ಟುತ್ತಿದೆ.
ಅಭೀಷೇಕದ ನಂತರ ಅಮೃತ ಫಲಾಹಾರದ ಸ್ವಾದಾಸ್ವಾದ. ಶಿವರಾತ್ರಿಯಾದುದರಿಂದ ಇಂದು ಉಪವಾಸ. ಅದಕ್ಕಾಗಿ ಸಿದ್ಧಪಡಿಸಲಾಗಿರುವ ಲಘು ಆಹಾರ – ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ಪಾಯಸ ಭಕ್ತಾದಿಗಳ ಮೈಮನಗಳನ್ನು ತಂಪಾಗಿ, ಹಗುರ ಭಾವದಲ್ಲಿ ನಿಲ್ಲಿಸುತ್ತಿದೆ.

Leave a Reply