“ಕೋಟಿ ರುದ್ರ ದ್ವಿತೀಯ ಪರ್ವ”
..................................................................................................................................................
ಆತ್ಮೀಯ ಭಗವತ್ಪ್ರೀಯರೇ,
ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗದ ದಿವ್ಯ ಸಾನ್ನಿಧ್ಯದಲ್ಲಿ ಲೋಕಕಲ್ಯಾಣದ ಸಂಕಲ್ಪದಿಂದ ಆಯೋಜನೆಗೊಂಡು ಮುನ್ನಡೆಯುತ್ತಿರುವ “ಕೋಟಿ ರುದ್ರ ದ್ವಿತೀಯ ಪರ್ವ” ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ದಿನಾಂಕ 11-08-2009 ನೇ ಮಂಗಳವಾರ ಬೆಳಿಗ್ಗೆ 6.22 ರಿಂದ “ಶ್ರೀ ಮಹಾಬಲೇಶ್ವರನಿಗೆ ಯಾಮ ಪೂಜೆ” ಸಮರ್ಪಣೆಯೊಂದಿಗೆ ಜರುಗಲಿದೆ.ಸರ್ವಮಾನ್ಯ ಶ್ರೀ ಭೀಮೇಶ್ವರ ಜೋಶಿ ಮಾನ್ಯ ಧರ್ಮಕರ್ತರು,ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯ,ಶ್ರೀ ಕ್ಷೇತ್ರ ಹೊರನಾಡು ಇವರು ಪೂಜಾ ಪ್ರಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ವೈಶಿಷ್ಟ್ಯ ಪೂರ್ಣವಾದ ಯಾಮ ಪೂಜೆಯ ವಿವರಗಳು ಮುಂದಿನಂತಿವೆ.
ಬೆಳಿಗ್ಗೆ 6-22 ರಿಂದ ದಿನಾದಿ ಯಾಮಪೂಜೆ
9-22 ರಿಂದ ಮಧ್ಯ ಯಾಮಪೂಜೆ
ಮಧ್ಯಾನ್ನ 12-22 ರಿಂದ ತೃತೀಯ ಯಾಮಪೂಜೆ
3-22 ರಿಂದ ದಿನಾಂತ್ಯ ಯಾಮಪೂಜೆ
ಸಂಜೆ 6-22 ರಿಂದ ನಿಶಾದಿ ಯಾಮಪೂಜೆ
ರಾತ್ರಿ 9-22 ರಿಂದ ನಿಶೀಥ ಯಾಮಪೂಜೆ
12-22 ರಿಂದ ನಿಶಾವಸಾನ ಯಾಮಪೂಜೆ
ಬೆಳಿಗ್ಗೆ 3-22 ರಿಂದ 6-22 ರ ವರೆಗೆ ಯಾಮಪೂಜಾ ಮುಕ್ತಾಯ ಪೂಜೆ ನಂತರ “ರುದ್ರ ಹವನ”
ಶ್ರಾವಣ ಮಾಸದಲ್ಲಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನಡೆಯುತ್ತಿರುವ ಈ ವೈಶಿಷ್ಟ್ಯಪೂರ್ಣವಾದ ಮಹೇಶ್ವರನ ಔಪಾಸನೆಯಲ್ಲಿ ನೀವು ಭಾಗವಹಿಸಬೇಕಾಗಿ ಹೃತ್ಪೂರ್ವಕ ಆಮಂತ್ರಣ.
ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
ಕೋಟಿರುದ್ರ ಸಮಿತಿ
ಶ್ರೀ ಸಂಸ್ಥಾನ ಮಹಾಬಲೇಶ್ವದೇವ ಗೋಕರ್ಣ
Leave a Reply