ಗೋಕರ್ಣದಲ್ಲಿ ಪ್ರಸಾದದ ನೂತನ ಕೌಂಟರ್ ಉದ್ಘಾಟನೆ
..................................................................................................................................................
ಗೋಕರ್ಣ:ಜೂನ್ 1: ಧರ್ಮ ನಮ್ಮ ಜೀವನಕ್ಕೆ ಉಸಿರು ತುಂಬುವಂಥದ್ದು,ನಮ್ಮ ಬದುಕು ಮೌಲ್ಯಯುತವಾದಾಗ ಬೇಕಾದರೆ ಧಾರ್ಮಿಕ ಮಾರ್ಗದರ್ಶನ ಅತ್ಯಗತ್ಯ.ಇಂದು ರಾಜಕೀಯ ಎಂಬುದು ಎಲ್ಲೆಡೆ ಹಾಸುಹೊಕ್ಕಾಗಿದೆ.ವಾಸ್ತವವಾಗಿ ರಾಜಕಾರಣಕ್ಕೆ ಧರ್ಮ ಬೇಕೆ ಹೊರತು ಧರ್ಮದಲ್ಲಿ ರಾಜಕೀಯ ಸಲ್ಲದು ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಶ್ರೀಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಸೋಮವಾರ ಪ್ರಸಾದದ ನೂತನ ಕೌಂಟರ್ ಉದ್ಘಾಟಿಸಿ ವಿಶೇಷ ಪೂಜೆಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದೆ ದೇವಾಲಯ ಮತ್ತು ಪರಿಸರದಲ್ಲಿ ಸ್ವಚ್ಛತೆ ಇರಲಿಲ್ಲ.ಶ್ರೀ ದೇವರಲ್ಲಿ ನಡೆಯುವ ಪೂಜಾದಿಗಳಿಗೆ ಸಮರ್ಪಕವಾದ ಸೇವಾರಶೀದಿ ವ್ಯವಸ್ಥೆ ಮೊದಲಾದ ಯಾವ ಸೌಲಭ್ಯಗಳೂ ಇರಲಿಲ್ಲ.ಈಗ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಡಳಿತ ವ್ಯವಸ್ಥೆಗೊಳಪಟ್ಟ ನಂತರ ದೇವಾಲಯದಲ್ಲಿ ಹಲವಾರು ಬದಲಾವಣೆಗಳಾಗಿವೆ ಎಂದರು.ಈಗ ಯಾತ್ರಿಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಶ್ರೀದೇವಾಲಯದ ಸಮಗ್ರ ಅಭಿವೃದ್ಧಿ ಮಾತ್ರವಲ್ಲದೇ ಸುತ್ತಮುತ್ತಲಿನ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿ,ಕುಡುಂಬಗಳಿಗೆ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಗೋವುಗಲನ್ನು ನೀಡಲಾಗಿದೆ.ಈ ಎಲ್ಲ ಬೆಳವಣಿಗೆಗಳು ದೇವಾಲಯವು ಶ್ರೀಮಠದ ಆಡಳಿತಕ್ಕೊಳಪಟ್ಟಮೇಲೆ ನಡೆದಿದೆ ಎಂಬುದನ್ನು ಗಮನಿಸಬೇಕು ಎಂದರು.
1983 ರಲ್ಲಿ ನಡೆದ ಅಷ್ಟಬಂಧ ಕಾರ್ಯದಲ್ಲಿ ಸಚಿವನಾಗಿ ಸರಕಾರದಿಂದ ದೊರೆಯಬಹುದಾದ ಎಲ್ಲ ನೆರವನ್ನು ಮಂಜೂರಿ ಮಾಡಿಸಿದ್ದೆ.ಹಾಗೆಯೇ ಬರುವ ಅಷ್ಟಬಂಧ ಕಾರ್ಯಕ್ರಮಕ್ಕೂ ಕೇಂದ್ರಸರ್ಕಾರದಿಂದ ದೊರೆಯಬಹುದಾದ ಎಲ್ಲ ಸಹಾಯ ಕೊಡಿಸುವುದಾಗಿ ಹೇಳಿದರು.ಅವರು ದೇವಾಲಯಗಳು ಮಾನಸಿಕ ಶಾಂತಿ ನೆಮ್ಮದಿ ನೀಡುವ ಸ್ಥಾನಗಳಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಐತಿಹಾಸಿಕ ಕೋಟಿರುದ್ರ ಕಾರ್ಯ ವೀಕ್ಷಿಸಿದ ಅವರು ಶ್ರೀ ಮಹಾಗಣಪತಿ,ತಾಮ್ರಗೌರಿ,ದೇವಾಲಯಗಳಿಗೂ ಭೇಡಿ ನೀಡಿ ಪೂಜೆ ಸಲ್ಲಿಸಿದರು.ಕೋಟಿರುದ್ರ ಕಾರ್ಯಕ್ರಮಾನುಷ್ಠಾನ ಸಮಿತಿಯ ಆಚಾರ್ಯ ಗಜಾನನ ಭಟ್,ಸಂಚಾಲಕ ಜಿ.ಕೆ.ಹೆಗಡೆ ಮೊದಲಾದವರು ದೇಶಪಾಂಡೆಯವರನ್ನು ಬರಮಾಡಿಕೊಂಡರು.ನಾಗರಾಜ ಹಿತ್ತಲಮಕ್ಕಿ,ವೇ.ಬಾಲಕೃಷ್ಣ ಜಂಬೆ,ವೇ.ಪರಮೇಶ್ವರ ಮಾರ್ಕಾಂಡೆ ಮೊದಲಾದ ವೈದಿಕರು,ನಾಗರೀಕರು ಉಪಸ್ಥಿತರಿದ್ದರು.
Leave a Reply