ಮುಖಪುಟ >> ಪ್ರಕಟಣೆಗಳು, ಪ್ರಸಕ್ತ, ಸುದ್ದಿಪುಟ

ಗೋಕರ್ಣವನ್ನು ಜಗತ್ತೇ ನಿರೀಕ್ಷಿಸುವ ಕಾಲ ಬಂದಿದೆ.-ಶ್ರೀ ರಾಘವೇಶ್ವರ ಶ್ರೀಗಳು

..................................................................................................................................................

ಗೋಕರ್ಣ:ಜೂನ್ 1,ಇತಿಹಾಸ ಪ್ರಸಿದ್ಧವಾದ ಕಾಶಿ ಕ್ಷೇತ್ರಕ್ಕೆ ಗೋಕರ್ಣ ಮಿಗಿಲು,ಕಾಶಿಯಲ್ಲಿಲ್ಲದ ಮಹಾಸಮುದ್ರ ಗೋಕರ್ಣದಲ್ಲಿದೆಯೆಮಬ ನಂಬಿಕೆಯಿದೆ.ಸಮಸ್ತ ವೇದ ಮಂತ್ರಗಳ ಭೂಮಿಯಾದ ಗೋಕರ್ಣದಲ್ಲಿ ಇತಿಹಾಸವು ಇಲ್ಲಿಯವರೆಗೆ ದಾಖಲಿಸದ “ಕೋಟಿರುದ್ರಾನುಷ್ಥಾನವು” ಆರಂಭಗೊಂಡಿದೆ.ಲೋಕಕಲ್ಯಾಣಕ್ಕೋಸ್ಕರ ಸಂಕಲ್ಪಿತವಾದ ಈ ಕಾರ್ಯ ಇತಿಹಾಸವನ್ನು ನಿರ್ಮಿಸಲಿದ್ದು ಜಗತ್ತೇ ಗೋಕರ್ಣದತ್ತ ಮುಖಮಾಡುವ ಕಾಲ ಹತ್ತಿರ ಬಂದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಶ್ರೀಗಳು ನುಡಿದರು.ಜೂನ್ 30 ಮಂಗಳವಾರದಂದು ಸಂಜೆ ಶ್ರೀ ಮಹಾಬಲೇಶ್ವರ ದೇವಲಯದಲ್ಲಿ ನಡೆದ ಕೋಟಿರುದ್ರ ಪ್ರಥಮಪರ್ವದ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು,ಮಹಾನದಿಯೂ ಹುಟ್ಟುವಾಗ ಚಿಕ್ಕದಾಗಿಯೇ ಹುಟ್ಟಿ,ಇತರ ಹೊಳೆ ತೊರೆಗಳನ್ನು ತನ್ನೊಂದಿಗೆ ಸೇರಿಸಿಕೊಂಡು ದೊಡ್ಡದಾಗುವ ರೀತಿಯಲ್ಲಿ ಈ ಕೋಟಿರುದ್ರ ಕಾರ್ಯವು ಸಣ್ಣ ಪ್ರಮಾಣದಲ್ಲಿ ಶುರುವಾಗಿ ದೊಡ್ಡ ರೂಪವನ್ನು ಹೊಂದುತ್ತದೆ.ಎಂದೂ ಎಲ್ಲಿಯೂ ಆಗದ ಅಸದೃಶ ರೀತಿಯಲ್ಲಿ ಈ ಕೋಟಿರುದ್ರ ಹಾಗೂ ಅಷ್ಟಬಂಧ ಕಾರ್ಯವನ್ನು ನಡೆಸಬೇಕಿದೆ.ಈ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಕಾರಾತ್ಮಕ ಬೆಳವಣಿಗೆಯಾಗಲಿದ್ದು ರುದ್ರಪ್ರೀತಿಕರವಾದ ಕೋಟಿರುದ್ರ ಲೋಕಕ್ಕೆ ಎಲ್ಲರೀತಿಯ ಮಂಗಳವಾಗಲಿದೆ ಎಂದು ನುಡಿದರು.

                   ಸಮಾರಂಭದಲ್ಲಿ ಪರ್ವಸಂದೇಶ ನೀಡಿದ ಮಾನ್ಯಶಾಸಕ ಶ್ರೀ  ದಿನಕರ ಶೆಟ್ಟಿಯವರು,ಪೂಜ್ಯ ಶ್ರೀಗಳು ರಾಮಾಯಣ ಮಹಾಸತ್ರ,ವಿಶ್ವಗೋಸಮ್ಮೇಳನದಂತ ಕಾರ್ಯಗಳನ್ನು ನಡೆಸಿ ಪ್ರಸಿದ್ಧರಾಗಿದ್ದಾರೆ.ವಿಶ್ವಶಾಂತಿಗೋಸ್ಕರ ಪೂಜ್ಯ ಶ್ರೀಗಳು ಕೋಟಿರುದ್ರವನ್ನು ಸಂಕಲ್ಪಿಸಿದ್ದು,ಇಂತಹ ಪವಿತ್ರಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಬದುಕಿಗೆ ಧನ್ಯತೆಯನ್ನು ನೀಡಿದೆ ಎಂದು ಹೇಳಿ,ಗೋಕರ್ಣ ಕ್ಷೇತ್ರದ ಅಭಿವೃದ್ಧಿಗಾಗಿ ಇಲ್ಲಿನ ಗ್ರಾಮಪಂಚಾಯತವನ್ನು ಪಟ್ಟಣಪಂಚಾಯತವನ್ನಾಗಿ ಪರಿವರ್ತಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇನೆ ಅಲ್ಲದೆ ಹಲವು ಅಭಿವೃದ್ಧಿಕಾರ್ಯಗಳನ್ನು ಮಂಜೂರಿಮಾಡಿಸಿದ್ದೇನೆ ಎಂದು ಹೇಳಿ ಸಧ್ಯ ರಾಜ್ಯವು ತೀವ್ರ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು ಮಳೆಯ ಅಭಾವವನ್ನು ಎದಿರಿಸುತ್ತಿದೆ ಶ್ರೀ ದೇವರ  ಕೃಪೆಯಿಂದ ಇಂತಹ ಪರಿಸ್ಥಿತಿ ದೂರವಾಗಿ ನಾಡಿನಲ್ಲಿ ಸುಭಿಕ್ಷ ನೆಲೆಸಲಿ ಎಂದು ಆಶಿಸಿದರು.

                               ಕೋಟಿರುದ್ರ ಸಮಿತಿಯ ಆಡಲಿತ ಕಾರ್ಯದರ್ಶಿ ಶ್ರೀ ಜಿ.ಕೆ ಹೆಗಡೆ  ಕಾರ್ಯಕ್ರಮದ ಅವಲೋಕನ ಮಾಡಿ ಈಗಾಗಲೆ 62 ದಿನ ರುದ್ರಪಾರಾಯಣ ನಡೆದು 2 ಲಕ್ಷ ಸಂಖ್ಯೆಯಲ್ಲಿ ಸಮರ್ಪಿತವಾಗಿದೆ ಸಾಗಬೇಕಾದ ದಾರಿ ಸಾಕಷ್ಟಿದೆ ಈಗಾಗಲೇ 500 ಕ್ಕೂ ಹೆಚ್ಚು ಪರಸ್ಥಳದ ಋತ್ವಿಜರು ಬಂದು ಸೇವೆ ಸಲ್ಲಿಸಿದ್ದಾರೆ.ರಾಜ್ಯದ ಎಲ್ಲೆಡೆ ಈ ರುದ್ರ ಕಾರ್ಯಕ್ಕಾಗಿಯೇ ರುದ್ರಾದ್ಯಾಪನ ಕೇಂದ್ರಗಳನ್ನು ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿ ಗದಗ ನಗರಸಭೆಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅಂಗಡಿ ಮಾತನಾಡಿ ಜಾಗತಿಕ ಸ್ತರದಲ್ಲಿ ಉಂಟಾದ ಆರ್ಥಿಕ ಹಿಂಜರಿತ ಭಾರತಕ್ಕೆ ವಿಶೇಷ ತೊಂದರೆಯನ್ನು ಉಂಟುಮಾಡದಿರುವುದಕ್ಕೆ ಭಾರತವು ಮಹಾತ್ಮರ ನಾಡಾಗಿರುವುದೇ ಕಾರಣ ಎಂಬ ಅಮೇರಿಕನ್ ಚಿಂತಕರೋರ್ವರ ಮಾತನ್ನು ಉಲ್ಲೇಖಿಸಿ ಈ ರುದ್ರಪ್ರೀತಿ ಕಾರ್ಯದಿಂದ ವಿಶ್ವಶಾಂತಿ ಉಂಟಾಗಲೆಂದು ಆಶಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಶ್ರೀಗಳು ರುದ್ರ ಸಿ.ಡಿ.ಯನ್ನು ಲೋಕಾರ್ಪಣಗೊಳಿಸಿದರು.ವೇ.ರಾಮಕೃಷ್ಣ ಶಂಕರಲಿಂಗ  ದಂಪತಿಗಳು ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು.ಶ್ರೀಜಯರಾಮ ಭಟ್ ಬಿಳಗಿ ಸಭಾಪೂಜೆಯನ್ನು ನಿರ್ವಹಿಸಿದರು.ಕೋಟಿರುದ್ರ ಸಮಿತಿಯ ಪದಾಧಿಕಾರಿಗಳಾದ ವೇ.ಶಿತಿಕಂಠ ಭಟ್ ಹಿರೇ,ವೇ.ಗಣೇಶ ಭಟ್ ಹಿರೇಗಂಗೆ,ಸಭೆಯಲ್ಲಿ ಉಪಸ್ಥಿತರಿದ್ದರು.dsc_6846 ಸಮಸ್ತ ಭಕ್ತವೃಂದ ಉಪಸ್ಥಿತರಿದ್ದರು.

---------------------------------------------------------------------------------------------------------------------------------------------------------------------------------------

Leave a Reply