“ರಾಘವೇಶ್ವರ ಶ್ರೀಗಳು ದೇವರ ಸಮಾನರು”ಅವರಿಗಾಗಿಯೇ ಗೋಕರ್ಣ ವಹಿಸಿಕೊಡಲಾಗಿದೆ.
..................................................................................................................................................
ಬೆಂಗಳೂರು:ರಾಮಚಂದ್ರಾಪುರ ಮಠದ ಸ್ವಾಮೀಜಿ ದೇವರ ಸಮಾನರು ಅಲ್ಲಿನ ವ್ಯವಸ್ಥೆ ಸರಿಪಡಿಸಲು ಗೋಕರ್ಣ ದೇವಾಲಯವನ್ನು ಅವರಿಗೆ ವಹಿಸಿಕೊಡಲಾಗಿದೆ.ಈಗ ಅಲ್ಲಿನ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವಸತಿ ಹಾಗು ಮುಜರಾಯಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ನೂತನ ಕೊಠಡಿ ಪ್ರವೇಶ ಮಾಡಿ,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗೋಕರ್ಣ ದೇವಾಲಯಕ್ಕೆ ಸುಮಾರು 20 ಬಾರಿ ಭೇಟಿ ನೀಡಿದ್ದೆ,ಒಮ್ಮೆಯಂತೂ ಅಲ್ಲಿನ ವ್ಯವಸ್ಥೆಯನ್ನು ನೋಡಿ ರಾತ್ರೋರಾತ್ರಿ ವಾಪಸ್ ಬಂದಿದ್ದೆ.ಈಗ ಅಲ್ಲಿಗೆ ಹೋದರೆ ತುಂಬಾ ಸಂತೋಷವಾಗುತ್ತದೆ.ಈ ರೀತಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನುಡಿದರು.
Leave a Reply