ಮುಖಪುಟ >> ಪ್ರಕಟಣೆಗಳು, ಪ್ರಸಕ್ತ, ಲೇಖನಗಳು, ಸುದ್ದಿಪುಟ

ವಿಶ್ವ ಮಂಗಲ ಗೋ ಗ್ರಾಮ ಯಾತ್ರಾ : ವಿಶ್ವದೊಳಿತಿಗೆ ಗೋಮಾತೆಯ ಯಾತ್ರೆ.

..................................................................................................................................................

|| ಹರೇ ರಾಮ ||
ಪ್ರಿಯರೇ,

ಶ್ರೀ ಸಂಸ್ಥಾನ ಗೋಕರ್ಣ, ಶ್ರೀಮಜ್ಜಗದುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮನೋಸಂಕಲ್ಪದ ವಿಶ್ವಮಂಗಳ ಗೋ ಗ್ರಾಮ ಯಾತ್ರೆ ಯು ಇದೇ ಬರುವ (೨೦೦೯ ರ) ವಿಜಯದಶಮಿಯ ಸುಮುಹೂರ್ತ ದಲ್ಲಿ ಪ್ರಾರಂಭವಾಗಲಿದೆ. ವಿಶ್ವದೊಳಿತಿಗಾಗಿ ನಡೆಯುವ ಈ ಯಾತ್ರೆಯು ಭಾರತದಾದ್ಯಂತ ಸಾಗಿ ಭಾರತೀಯರಲ್ಲಿ ಗೋವಿನ ಬಗೆಗೆ ಕ್ರಾಂತಿಯನ್ನು ಮೂಡಿಸಲಿದೆ.

ಗೋ ಗ್ರಾಮ ಯಾತ್ರೆಯ ಮುನ್ನೋಟ :

  • ೨೦೦೯ ರ ವಿಜಯದಶಮಿಯಂದು ಯಾತ್ರೆ ಶುಭಾರಂಭ

  • ಯಾತ್ರೆಯು 108 ದಿನಗಳ ಕಾಲ ನಡೆಯಲಿದೆ

  • ಭಾರತಾದ್ಯಂತ ಈ ಯಾತ್ರೆಯು ಒಟ್ಟು 400 ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.

  • ಒಟ್ಟು ೨೦,೦೦೦ ಕಿಲೋಮೀಟರುಗಳನ್ನು ಕ್ರಮಿಸಲಿದೆ.

  • ದೇಶದಾದ್ಯಂತ ತಾಲೂಕು – ಜಿಲ್ಲೆ ಮಟ್ಟದಲ್ಲಿ ನಡೆಯುವ  ಉಪ ಯಾತ್ರೆಗಳು ತಮ್ಮ ರಾಜ್ಯಗಳಲ್ಲಿ ಈ ಯಾತ್ರೆಯನ್ನು ಸೇರಲಿದೆ.

  • ೨೧ ಕೋಟಿ ಸಹಿ ಅಭಿಯಾನವನ್ನು ಈ ಯಾತ್ರೆಯು ಹಮ್ಮಿಕೊಂಡಿದೆ.

  • ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋ ಪೂಜೆ, ಗೋ ಸಂದೇಶ ಇತ್ಯಾದಿ ಕಾರ್ಯಕ್ರಮಗಳು ಯಾತ್ರೆಯಾದ್ಯಂತ ಹಮ್ಮಿಕೊಳ್ಳಲಾಗುವುದು.

  • ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಯಾತ್ರೆಯು ಒತ್ತಾಯಿಸುತ್ತದೆ.

  • ಕಸಾಯಿ ಖಾನೆಗಳ ಸಮಗ್ರ ನಿರ್ಮೂಲನಕ್ಕೆ ಯಾತ್ರೆ ಆಗ್ರಹಿಸುವುದು.

  • ಸಂವಿಧಾನಬದ್ಧ ಗೋ-ಹತ್ಯಾ ಕಾನೂನನ್ನುಜಾರಿಗೆ ತರಲು ಒತ್ತಾಯಿಸುತ್ತದೆ.

ಎಲ್ಲಾ ಗೋ-ಭಕ್ತರನ್ನು ಸಂಪರ್ಕಿಸಲು ಸಿದ್ಧತಾ ಯಾತ್ರೆಯನ್ನು ಅಕ್ಟೋಬರ್ ೨೦೦೮ ರಿಂದ ಫೆಬ್ರವರಿ ೨೦೦೯ ರ ತನಕ ನಡೆಸಲಾಗುವುದು.

~oO0Oo~

---------------------------------------------------------------------------------------------------------------------------------------------------------------------------------------

2 Responses to “ವಿಶ್ವ ಮಂಗಲ ಗೋ ಗ್ರಾಮ ಯಾತ್ರಾ : ವಿಶ್ವದೊಳಿತಿಗೆ ಗೋಮಾತೆಯ ಯಾತ್ರೆ.”

  1. suresh-sushuma-skanda

    we are ready to give full support for this yatra with all aspect- money, time-bringing friends

    thanking you

    February 24th, 2009 | 5:05 pm
  2. navella jothegiddeve

    May 1st, 2009 | 5:34 pm

Leave a Reply