ಮುಖಪುಟ >> ಪ್ರಸಕ್ತ, ಸುದ್ದಿಪುಟ

ಗೋಕರ್ಣದಲ್ಲಿ ವರ್ಷ ಪರ್ಯಂತ ಕೋಟಿರುದ್ರಾನುಷ್ಥಾನ

..................................................................................................................................................

ಗೋಕರ್ಣ: ಏಪ್ರಿಲ್ 28.2009 ಜಗತ್ತಿನ ಇತಿಹಾಸದಲ್ಲೇ ಮೊಟ್ಟ ಮೊದಲು 1 ವರ್ಷ ಪರ್ಯಂತ ಕೋಟಿರುದ್ರಾನುಷ್ಥಾನ ಶ್ರೀ ಮಹಾಬಲೇಶ್ವರ ಸನ್ನಿಧಿಯಲ್ಲಿ ನಡೆಯುವುದಾಗಿ ಶ್ರೀಮದ್ ರಾಘವೇಶ್ವರ ಬಾರತೀ ಸ್ವಾಮೀಜಿ ನುಡಿದರು.

              ಅವರು  ಶ್ರೀ ಮಹಾಬಲೇಶ್ವರ ದೇವಾಲಯದ ಹೊರ ಪ್ರಾಕಾರದಲ್ಲಿ ನಡೆದ ಕೋಟಿರುದ್ರ ಸಂಕಲ್ಪ ಸಭೆಯಲ್ಲಿ ಆಶೀರ್ವದಿಸಿ ಮಾತನಾಡುತ್ತಿದ್ದರು.ಇಂದು ಪುಣ್ಯದಿನ ಈ ದಿನದಿಂದ ಮುಂದಿನ ಅಕ್ಷಯತೃತೀಯದವರೆಗೂ ರುದ್ರಾನುಷ್ಥಾನ ನಡೆಯಲಿದೆ.ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ರುದ್ರಾನುಷ್ಥಾನ ಗೋಕರ್ಣ ಉಪಾಧಿವಂತ ವೈದಿಕರು,ಅರ್ಚಕರು ಹಾಗೂ ಅನೇಕ ಕಡೆಗಳಿಂದ ಆಗಮಿಸುವ ವೈದಿಕರು ನಡೆಸಲಿದ್ದಾರೆ.ಪ್ರತಿದಿನ 837 ಋತ್ವಿಜರು,3 ಏಕಾದಶ ಅಂದರೆ 27,951 ರುದ್ರಾನುಷ್ಥಾನ ಆರಾಧನೆ ನಡೆಯಲಿರುವುದಾಗಿ ತಿಳಿಸಿದರು.ವರ್ಷ ಪರ್ಯಂತ ನಡೆಸುವ ರುದ್ರಾನುಷ್ಥಾನದಿಂದ ಪ್ರಪಂಚದಲ್ಲೆಲ್ಲಾ ಸುಭಿಕ್ಷೆ ನೆಲೆಗೊಳ್ಳಲಿದೆ.ರುದ್ರ ಮಂತ್ರದಲ್ಲಿ ಅಷ್ಟೊಂದು ಶಕ್ತಿ ಇದೆ.ಯಂತ್ರಗಳು ಕಾರುವ ಹೊಗೆಯಿಂದ ವಾಯುಮಾಲಿನ್ಯ ಉಂಟಾದರೆ,ಮಂತ್ರಾನುಷ್ಥಾನದಿಂದ ಅವು ಪರಿಹಾರಗೊಂಡು ಎಲ್ಲೆಡೆ ಶಾಂತಿ ಸೌಹಾರ್ದತೆ ನೆಲೆಗೊಳ್ಳುತ್ತದೆ.ಈ ರೀತಿ ಅನುಷ್ಥಾನ ಇತಿಹಾಸದಲ್ಲೇ ಪ್ರಥಮವಾಗಿದೆ.ಮುಂದಿನ ಕ್ಷಯತೃತೀಯದವರೆಗೆ ರುದ್ರಾನುಷ್ಥಾನ ನಡೆದು ಮಹೋತ್ಸವ ನಡೆಯಲಿದೆ.ಆ ವೇಳೆಯಲ್ಲಿ ಆತ್ಮಲಿಂಗವನ್ನು ದಿವ್ಯದರ್ಶನಕ್ಕಾಗಿ ಭಕ್ತಕೋಟಿಗೆ ಮೀಸಲಿಡಲಾಗುವುದು ಎಂದರು.

                         ಇದೇ ಸಂದರ್ಭದಲ್ಲಿ ಮೈಸೂರಿನ ಮಂಜುನಾಥ ಶ್ರೌತಿಗಳು ರಚಿಸಿದ ಸಾಮವೇದ ಮಹಾನ್ಯಾಸ ರುದ್ರಾರಾಧನ ವಿಧಿ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಕೃತಿಕಾರರು ಪುಸ್ತಕ ಪರಿಚಯ ನೀಡಿದರು.ವೇದಿಕೆಯಲ್ಲಿ ಪುಣೆಯ ಉದ್ಯಮಿ ಗಿರಿಧರ ಕಾಳೆ ದಂಪತಿ ,ನ್ಯಾಯವಾದಿ ಎಮ್.ಆರ್.ಸತ್ಯನಾರಾಯಣರಾವ್,ಉಪಾಧಿವಂತ ಮಂಡಳದ ಆಧ್ಯಕ್ಷ ಜಿ.ಎನ್.ಹಿರೇಗಂಗೆ,ಕೋಟಿರುದ್ರಾನುಷ್ಥಾನ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಶಂಕರಲಿಂಗ,ಕೆ.ಎಚ್.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.

                         ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಎಮ್.ಆರ್.ಸತ್ಯನಾರಾಯಣರಾವ್ ಸ್ವಾಗತಿಸಿ ಪರಿಚಯಿಸಿದರು.ಇದೇ ಸಂದರ್ಭದಲ್ಲಿ ಮಹಾಶಿವರಾತ್ರಿ ಉತ್ಸವದ ಜಮಾಖರ್ಚಿನ ವಿವರವನ್ನು ಜಿ.ಆರ್.ಭಟ್ ಸಬೆಯಲ್ಲಿ ಓದಿ ಹೇಳಿದರು.ಕೆ.ಸಿ.ವೆಂಕಟೇಶ್ ವಂದಿಸಿದರು.ವಿವಿದೆಡೆಯಿಂದ ಆಗಮಿಸಿದ್ದ ಜನರು ಪಾಲ್ಗೊಂಡಿದ್ದರು.img_3974

---------------------------------------------------------------------------------------------------------------------------------------------------------------------------------------

One Response to “ಗೋಕರ್ಣದಲ್ಲಿ ವರ್ಷ ಪರ್ಯಂತ ಕೋಟಿರುದ್ರಾನುಷ್ಥಾನ”

  1. Ithihasa kandariyada…..kelariyada…adbhutha gokarnadalli nadeyalide ee desha ramarajyavaguvudaralli sandehavilla….. jai sri ram….!

    May 24th, 2009 | 1:08 pm

Leave a Reply