ಮುಖಪುಟ >> ಸುದ್ದಿಪುಟ

ಗೋಕರ್ಣ : ಶಿವರಾತ್ರಿ ಸಿದ್ಧತಾ ಸಭೆ – ಅಭೂತಪೂರ್ವ ಕಾರ್ಯಕ್ರಮಕ್ಕೆ ಕ್ಷಣಗಣನೆ

..................................................................................................................................................

ಗೋಕರ್ಣ, ಫೆ ೨: ಇದೇ ಬರುವ ೧೭ರಿಂದ ೨೬ನೆ ತಾರೀಕಿನ ವರೆಗೆ ಇಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮದ ಸಿದ್ಧತೆಗಾಗಿ ಕಾರ್ಯಕರ್ತರ ಸಿದ್ಧತಾ ಸಭೆ ನಡೆಯಿತು. ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಉತ್ಸವವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಪೂರ್ವತಯಾರಿಗೆ ವಿದ್ಯುಕ್ತ ಚಾಲನೆ ದೊರಕಿತು. ಸಾಂಸ್ಕೃತಿಕ , ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮದ ರೂಪುರೇಶೆಗಳನ್ನು ಅಂತಿಮಗೊಳಿಸಲಾಯಿತು.
ಪತ್ರಿಕಾ ವರದಿಗಾರರೊಂದಿಗೆ ಮಾತನಾಡಿ ಶ್ರೀ ಗುರುಗಳು

ಶಿವರಾತ್ರಿ ಸಿದ್ಧತಾ ಸಭೆ

ಶಿವರಾತ್ರಿ ಸಿದ್ಧತಾ ಸಭೆ

ಗೋಕರ್ಣದ ಸಮಗ್ರ ಅಭಿವೃದ್ಧಿಯ ತಮ್ಮ ಕನಸನ್ನು ಬಿಚ್ಚಿಟ್ಟರು. ‘ವಿಶ್ವಕ್ಕೆ ಒಂದೇ ಗೋಕರ್ಣ, ವರ್ಷಕ್ಕೆ ಒಂದೇ ಶಿವರಾತ್ರಿ’ ಎಂದು ಸಾರಿದ ಅವರು, ಈ ಶಿವರಾತ್ರಿಯಲ್ಲಿನ ಹಲವು ಚೊಚ್ಚಲತೆಯನ್ನು ವಿವರಿಸಿದರು. ಸಮಾಜದಲ್ಲಿ ವಿಶೇಷ ಸಾಧನೆಮಾಡಿದವರಿಗೆ ಮಹಾಬಲದೇವನ ಹೆಸರಿನಲ್ಲಿಪ್ರಶಸ್ತಿ ಪ್ರದಾನ ಮಾಡುವ ಸಂಪ್ರದಾಯಕ್ಕೆ ಚಾಲನೆಕೊಡಲಾಗುವುದು. ಎಲ್ಲ ಭಕ್ತರೂ ಶಿವನ ಆತ್ಮಲಿಂಗಕ್ಕೆ ಗಂಗಾಭಿಷೇಕ ನಡೆಸುವ ವಿಶೇಷ ಸೇವೆಯನ್ನು ಈ ಸಲ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಂತೆಯೇ ಗೋಕರ್ಣದ ಅಭಿವೃದ್ಧಿಗಾಗಿ ‘ಗೋಕರ್ಣ ಅಭಿವೃದ್ಧಿ ಪ್ರಾಧಿಕಾರ’ ವನ್ನು ಆರಂಭಿಸುವಂತೆ ಸರಕಾರದ ಮುಂದೆ ಬೇಡಿಕೆಯನ್ನಿತ್ತರು. ಗೋಕರ್ಣದ ಸಮಗ್ರ ಮಾಹಿತಿಗಾಗಿ ನೂತನ ವೆಬ್ ಸೈಟನ್ನು ಕಾರ್ಯಾರಂಭಗೊಳಿಸಿದರು. ಈ ವೆಬ್-ಸೈಟ್ ವಿದ್ಯುಕ್ತವಾಗಿ ಶಿವರಾತ್ರಿಯಂದು ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು. ಶಿವರಾತ್ರಿಯ ಪೂರ್ವಭಾವಿಯಾಗಿ ರಥಪೂಜೆಯನ್ನು ಶ್ರೀಗುರುಗಳು ನಡೆಸಿಕೊಟ್ಟರು.

ಸ್ಥಳೀಯ ಶಾಸಕರಾದ ಶ್ರೀ ದಿನಕರ ಶೆಟ್ಟಿ , ಉಪಾಧಿವಂತರ ಸಮಿತಿ ಹಿರಿಯರು, ಶ್ರೀ ಗೋಕರ್ಣ ದೇವಾಲಯದ ಆಡಳಿತ ಸಮಿತಿ ಸದಸ್ಯರು, ಹತ್ತು ಮಹನೀಯರು ಈ ಸಭೆಯಲ್ಲಿ ನೆರೆದಿದ್ದರು. ಗೋಕರ್ಣ ದೇವಾಲಯ ಹಾಗೂ ಪರಿಸರದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯನ್ನು ಹಮ್ಮಿಕೊಂಡು, ಆ ಮೂಲಕ ಸಂಪೂರ್ಣ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಶ್ರೀಗುರುಗಳು ಹಂಚಿಕೊಂಡರು.

---------------------------------------------------------------------------------------------------------------------------------------------------------------------------------------

2 Responses to “ಗೋಕರ್ಣ : ಶಿವರಾತ್ರಿ ಸಿದ್ಧತಾ ಸಭೆ – ಅಭೂತಪೂರ್ವ ಕಾರ್ಯಕ್ರಮಕ್ಕೆ ಕ್ಷಣಗಣನೆ”

  1. shankara

    HARE RAAMA verry well designed most awaiting website.
    Which is verry much informative.
    If you can give some bus fasility informations from bangalore that will be help full to devotees like us I hope.
    Many many congratulations to the whole teem behind this grand success.
    HARE RAAMA

    February 4th, 2009 | 12:01 pm
  2. shambhu kumara sharma

    HARE RAAMA.

    February 23rd, 2009 | 12:09 pm

Leave a Reply