ಮುಖಪುಟ >> ಪ್ರಸಕ್ತ, ಸುದ್ದಿಪುಟ

ರುದ್ರಾಧ್ಯಾಯ ಪುಸ್ತಕ ಲೋಕಾರ್ಪಣೆ

..................................................................................................................................................

ಗೋಕರ್ಣ:ಜೂನ್ 11,ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ  ಕಳೆದ ಅಕ್ಷಯ ತೃತೀಯಾದಿಂದ ಪ್ರಾರಂಭಗೊಂಡಿರುವ  ಕೋಟಿರುದ್ರಾನುಷ್ಥಾನದ ಅಂಗವಾಗಿ ಹೊಸದಾಗಿ ಶ್ರೀ ರುದ್ರ ಮಂತ್ರವನ್ನು ಕಲಿಯುವವರಿಗೆ ಅನುಕೂಲವಾಗುವಂತೆ ನೂತನವಾಗಿ ಸಂಪಾದಿಸಿದ ಶ್ರೀ ರುದ್ರಾಧ್ಯಾಯ ಗ್ರಂಥವು 11 ಗುರುವಾರ ಸಂಜೆ  ಲೋಕಾರ್ಪಣಗೊಂಡಿತು.ಶ್ರೀ ದೇವಾಲಯದ ಚಂದ್ರಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರೊ.ರಾಮಕೃಷ್ಣ ಬೈಲಕೇರಿಯವರು ಈ ಗ್ರಂಥವನ್ನು ಬಿಡುಗಡೆ ಮಾಡುತ್ತಾ ಭಾರತೀಯ ಮಹರ್ಷಿಗಳ ಅಸಾಧಾರಣ ತಪಃಸಮಯದಲ್ಲಿ ಆವಿರ್ಭವಿಸಿದ ವೇದಮಂತ್ರಗಳು ತಮ್ಮ ದಿವ್ಯ ಶಕ್ತಿಯಿಂದ ಸಾಧಕನನ್ನು ಅತ್ಯುನ್ನತ ಸ್ಥಿತಿಗೆ ಕರೆದೊಯ್ಯುತ್ತವೆ.ಇಂತಹ ಮಂತ್ರಗಳಲ್ಲಿ ರುದ್ರ-ನಮಕ-ಚಮಕಗಳು ಲೋಕಹಿತಂಕರನಾದ ಶ್ರೀಶಂಕರನ ಪರಮಶ್ರೇಷ್ಢತೆಯನ್ನು ಪರ್ತಿಪಾದಿಸುತ್ತವೆ.ರುದ್ರಪಾರಾಯಣ ಮಾಡುವ ವ್ಯಕ್ತಿಗೆ ಶಿವಾನುಗ್ರಹವಾಗುವಂತೆ ಮಾಡಿ ಆತನ ಸಂಪೂರ್ಣ ಬದುಕನ್ನು ಶಿವಮಯಗೊಳಿಸುವ ಶಕ್ತಿ  ಈ ಮಂತ್ರಗಳ ವೈಶಿಷ್ಟ್ಯವಾಗಿದೆ.ಈ ಎಲ್ಲ ಹಿನ್ನೆಲೆಯಲ್ಲಿಯೇ ಪೂಜ್ಯ ಶ್ರೀರಾಘವೇಶ್ವರ ಶ್ರೀಗಳವರು ಕೋಟಿರುದ್ರಾನುಷ್ಠಾನವನ್ನು ಸಂಕಲ್ಪಿಸಿದ್ದು ಎಲ್ಲ ಆಸಕ್ತ ಶಿಷ್ಯರ ಅನುಕೂಲಕ್ಕಾಗಿ ಈ ಗ್ರಂಥವನ್ನು ಪ್ರಕಾಶನಗೊಳಿಸಲಾಗಿದೆ.ನೂತನ ರುದ್ರಾಧ್ಯಾಯನಾಭ್ಯಾಸಿಗಳು ಈ ಗ್ರಂಥವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಹಾರೈಸಿದರು.ಕೋಟಿರುದ್ರಾನುಷ್ಠಾನ ಸಮಿತಿಯ ಕಾರ್ಯಾಧ್ಯಕ್ಷ ವೇ.ಶಿತಿಕಂಠ ಭಟ್ ಹಿರೇ ಪ್ರಾಸ್ತಾವಿಕವಾಗಿ ರುದ್ರಾಧ್ಯಾಯ ಪುಸ್ತಕದ ಪರಿಚಯ ನೀಡಿದರು.ಶ್ರೀರಾಮಚಂದ್ರಾಪುರ ಮಠದ ಶ್ರೀ ಭಾರತೀ ಪ್ರಕಾಶನವು ಈ ರುದ್ರಾಧ್ಯಾಯ  ಗ್ರಂಥವನ್ನು ನಾಡಿನ ಖ್ಯಾತ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟರು ಸಂಪಾದಿಸಿದ್ದು,ರುದ್ರಮಂತ್ರಗಳೊಂದಿಗೆ ಪುರುಷಸೂಕ್ತವೇ ಮೊದಲಾದ ಹಲವೂ ವೈದಿಕಮಂತ್ರಗಳೂ ಸಹ ಈ ಗ್ರಂಥದಲ್ಲಿವೆ.ವೇದಘೋಷದೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷ ವೇ.ರಾಮಕೃಷ್ಣಭಟ್ ಶಂಕರಲಿಂಗ,ವೇ,ಬಾಲಕೃಷ್ಣ ಭಟ್ ಜಂಬೆ,ವೇ.ಪರಮೇಶ್ವರ ಮಾರ್ಕಾಂಡೆ ಉಪಸ್ಥಿತರಿದ್ದರು.image0051

---------------------------------------------------------------------------------------------------------------------------------------------------------------------------------------

Leave a Reply