ಮುಖಪುಟ >> ಪ್ರಸಕ್ತ, ಸುದ್ದಿಪುಟ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ

..................................................................................................................................................

ಜುಲೈ 7 :ಕೋಲ್ಕತ್ತಾ:ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಶ್ರೀಗಳ 16 ನೇ ಚಾತುರ್ಮಾಸ್ಯ ವೃತ ಮಂಗಳವಾರ ಕೋಲ್ಕತ್ತಾದ ಇಮಾಮಿಹೌಸ್ ನಲ್ಲಿ ಆರಂಭಗೊಂಡಿತು.ಜುಲೈ 7 ರಿಂದ ಸೆಪ್ಟೆಂಬರ್ 4 ರ ವರೆಗೆ ನಡೆಯಲಿರುವ ಚಾತುರ್ಮಾಸ್ಯ  ಅನೇಕ ಸಾಂಸ್ಕೃತಿಕ,ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮ ಒಳಗೊಂಡಿದೆ.ಬರುವ ವಿಜಯದಶಮಿಯಿಂದ ಪ್ರಾರಂಭಗೊಳ್ಳುವ ವಿಶ್ವಗೋಗ್ರಾಮಯಾತ್ರೆಯ ಚಿಂತನಾಸಭೆಗಳು ನಡೆಯಲಿವೆ.ಚಾತುರ್ಮಾಸ್ಯ ವೃತಾರಂಭದ ಬಳಿಕ ಸಂದೇಶ ನೀಡಿದ ಸ್ವಾಮೀಜಿ,ಗೋವುಗಳ ಸ್ವಾತಂತ್ರ್ಯಕ್ಕಾಗಿ ಗೋಪ್ರೇಮಿಗಳು ಮಾತ್ರವಲ್ಲ,ಅದನ್ನು ಅವಲಂಬಿಸಿದ ಪ್ರತಿಯೊಬ್ಬರೂ ಸಂಗ್ರಾಮ ಮಾಡಬೇಕಾದ ಅನಿವಾರ್ಯ ಇದೆ ಎಂದರು.vyasapooja

---------------------------------------------------------------------------------------------------------------------------------------------------------------------------------------

Leave a Reply