ಮುಖಪುಟ >> ಸುದ್ದಿಪುಟ

ಅಖಂಡ ಭಜನೆ ವಿದೇಶೀಯರನ್ನೂ ಸೆಳೆಯುತ್ತಿದೆ…

..................................................................................................................................................

ಶ್ರೀಮಹಾಬಲೇಶ್ವರ ದೇವಾಲಯ, ಗೋಕರ್ಣ, ಫೆ.೨೧ ಮಹಾಶಿವರಾತ್ರಿ ಉತ್ಸಹ ಬಹಳ ಹರ್ಷ ಉಲ್ಲಾಸಗಳಿಂದ ಆಚರಿಸಲ್ಪಡುತ್ತಿದೆ. ಅದರ ಮಧ್ಯದಲ್ಲಿಯೇ ಅದಕ್ಕೊಂದು ಗರಿಯಗಿ ಅಖಂಡ ಭಜನೆ ಕಂಗೊಳಿಸುತ್ತಿದೆ.

ವಿದೇಶೀಯರನ್ನೂ ಆಕರ್ಷಿಸುತ್ತಿರುವ ಅಖಂಡ ಭಜನೆ

ವಿದೇಶೀಯರನ್ನೂ ಆಕರ್ಷಿಸುತ್ತಿರುವ ಅಖಂಡ ಭಜನೆ

ದೇವಾಲಯದ ಪ್ರಾಂಗಣದಲ್ಲಿರುವ ಭಜನಾ ವೇದಿಕೆಯಲ್ಲಿ ೨೪ ಗಂಟೆಯೂ ಅಖಂಡ ಗತಿಯಲ್ಲಿ ಶಿವನ, ದೇವ-ದೇವರ ಸ್ತುತಿ ಸಾಗುತ್ತಿದೆ. ಭಜನೆ ಮಹೋತ್ಸವದ ಮೊದಲ ದಿನವೇ ಪ್ರಾರಂಭವಾಗಿದ್ದು, ಕಡೆಯ ದಿನದ ಕಡೆಯ ಕ್ಷಣದವರೆಗೂ ನಡೆಯಲಿದೆ.

ಭಜನೆಯಲ್ಲಿ ಒಟ್ಟು ೭೫ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಲಿವೆ. ಅವರ ಗಾಯನ, ಉಲ್ಲಾಸ ತುಂಬುವ ನರ್ತನ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತ್ತಿದೆ.

ನಮ್ಮವರು ಮಾತ್ರವಲ್ಲ, ವಿದೇಶೀಯರೂ ಅದಕ್ಕೆ ತಮ್ಮ ಹೆಜ್ಜೆಯ ಗೆಜ್ಜೆಯನ್ನು, ತಾಳದ ನಿನಾದವನ್ನು ಜೋಡಿಸುತ್ತಿದ್ದಾರೆ. ಉತ್ಸವ ಉಂಟುಮಾಡುತ್ತಿರುವ ಧಾರ್ಮಿಕ ಜಾಗೃತಿ ತನ್ನ ಕೆಲಸವನ್ನು ಪ್ರಾರಂಭಿಸಿದೆಯೇನೋ ಎಂದು ಭಾಸವಾಗುತ್ತಿದೆ.

ಗೋಕರ್ಣ ದೇವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡ ದಿನದಂದೇ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿದೇಶಿಯರ ಸಂಸ್ಕೃತಿಗೆ ಮರುಳಾಗುವುದು ಬೇಡ. ಅವರನ್ನೇ ನಮ್ಮಲ್ಲಿ ಒಳಗೊಳ್ಳಿಸಿಕೊಳ್ಳುವ. ನಮ್ಮ ಸಂಪತ್ತನ್ನೂ ಅವರಿಗೂ ಕೊಡುವ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಅದರ ಸಾಕಾರವಾಗುತ್ತಿದೆಯೋ ಏನೋ ಎಂಬಂತೆ ಕಣ್ಣ ಮುಂದಿನ ಅಖಂಡ ಭಜನೆ ಕಂಗೊಳಿಸುತ್ತಿದೆ.

---------------------------------------------------------------------------------------------------------------------------------------------------------------------------------------

One Response to “ಅಖಂಡ ಭಜನೆ ವಿದೇಶೀಯರನ್ನೂ ಸೆಳೆಯುತ್ತಿದೆ…”

  1. Venkatesh Dodmane

    ಒಂದು ಅತ್ಯುತ್ತಮ ಬೆಳವಣಿಗೆ. ಕೆಲವು ವಿದೇಶಿಯರು ನಾಟಕ ಮಾಡಿದರೂ, ಇನ್ನು ಕೆಲವರು ನಿಜಕ್ಕೂ ಶ್ರದ್ದಾಳುಗಳು.
    ಅದೇನೇ ಇರಲಿ ಗೋಕರ್ಣದಲ್ಲಿ ಧನಾತ್ಮಕ ಬೆಳವಣಿಗೆ ಯಾಗಿದೆ ಅನ್ನುವುದಂತೂ ಸತ್ಯ, ಅಭಿವೃದ್ದಿ ಹೀಗೇ ಸಾಗಲಿ ಎಂದು ಆಶಿಸುತ್ತೇನೆ. ಎಲ್ಲ ಸಂಘಟಕರಿಗೆ ಹೃತ್ಪೂರ್ವಕ ಅಭಿನಂದನೆಗಳು, ವಂದನೆಗಳು.

    ಇದೆಲ್ಲಕ್ಕೆ ಕಾರಣರಾದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳಿಗೆ ಧೀರ್ಘ ಉದ್ದಂಡ ನಮಸ್ಕಾರಗಳು.

    February 22nd, 2009 | 11:50 pm

Leave a Reply