ಮುಖಪುಟ >> ಸುದ್ದಿಪುಟ

ಅಶೋಕೆಯಲ್ಲಿ ಹೊಸ ಶಕೆ ಪ್ರಾರಂಭ:ಶ್ರೀ ಶ್ರೀಮದ್ರಾಘವೇಶ್ವರ ಶ್ರೀ.

..................................................................................................................................................

ಗೋಕರ್ಣ:ಮಾ.8.ಒಂದು ಬಿಂದುವಿನಿಂದ ಹೊರಟ ರೇಖೆಯೊಂದು ತನ್ನ ಪಥವನ್ನು ಬದಲಿಸದೇ ಚಲಿಸಿ ಪುನಃ ತಾನು ಹೊರಟ ಬಿಂದುವನ್ನು ಸೇರಿದಾಗ ಅದಕ್ಕೆ ವೃತ್ತ ಎಂದು ಹೆಸರು.ನಮ್ಮ  ಪೀಠದ ಪರಂಪರೆಯಲ್ಲಿ ಶ್ರೀಮದಾಚಾರ್ಯಶಂಕರಭಗವತ್ಪಾದರಿಂದ ಸಂಸ್ಥಾಪಿತವಾದ ಹಲವು ಪ್ರದೇಶಗಳಲ್ಲಿ ಕುಡಿಯೊಡೆದು ಪುನಃ ತನ್ನ ಮೂಲ ನೆಲೆಯಾದ ಅಶೋಕೆಯಲ್ಲಿಯೇ ಮೂಲಮಠದ ಪುನರ್ನಿಮಾಣದ ಮೂಲಕ ಒಂದು ವೃತ್ತವನ್ನು ಪೂರೈಸಿದೆ.ಈ ಮೂಲಕ ಅಶೋಕೆಯಲ್ಲಿ ಹೊಸ ಶಕೆಯೊಂದರ ಪ್ರಾರಂಭವಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಅಭಿಪ್ರಾಯ ಪಟ್ಟಿದ್ದಾರೆ.ಮಾ.8 ರವಿವಾರದಂದು ಶ್ರೀರಾಮಚಂದ್ರಾಪುರ ಮಠ ಮೂಲಮಠದ ಪುನರ್ನಿರ್ಮಾಣಕ್ಕಾಗಿ ಆಯೋಜಿತವಾದ “ಭೂಪರೋಗ್ರಹ” ಸಮಾರಂಭದಲ್ಲಿ  ಸಾನ್ನಿಧ್ಯವನ್ನಿತ್ತು ಅನುಗ್ರಹ ಭಾಷಣನೀಡುತ್ತಿದ್ದ ಶ್ರೀಗಳು ಕೆಳದಿ ಸಂಸ್ಥಾನದ ಶ್ರೀಚೌಡಪ್ಪ ನಾಯಕರ ಪ್ರಾರ್ಥನೆಯಂತೆ ೧೫೦೦ ವರ್ಷಗಳ ಹಿಂದೆ ಗೋಕರ್ಣದಿಂದ ಹೊಸನಗರಕ್ಕೆ ಹೋಗಿ ಮಠಸ್ಥಾಪನೆ ಮಾಡಿ ಧರ್ಮಪ್ರಸಾರ ಕಾರ್ಯವನ್ನು  ಕೈಗೊಂಡ ಆಗಿನ  ಪೀಠಾಧೀಶರು ಶ್ರೀ ಶಂಕರಾಚಾರ್ಯರ ಆಶಯಕ್ಕನುಗುಣವಾಗಿ ಹಲವಾರು ಶಾಖಾ ಮಠಗಳನ್ನು ಸ್ಥಾಪಿಸಿದರು.ಕಾರಣಾಂತರಗಳಿಂದ ಮೂಲಮಠವು ನಿರ್ಲಕ್ಷಿತವಾಗಿತ್ತು.ಪುನಃ ಇಲ್ಲಿ ಶ್ರೀ ಮಠದ ನಿರ್ಮಾಣದಿಂದ ಶ್ರೀ ಮಲ್ಲಿಕಾರ್ಜುನ ದೇವಾಲಯದ ನವೀಕರಣ ಕಾರ್ಯವೂ ನಡೆಯಲಿದ್ದು ಸಹಸ್ರ ನಂದಿಗಳನ್ನು ಹೊಂದಿದ ಬೃಹತ್ ಗೋಶಾಲೆ,ಪ್ರಾಚೀನ ಗುರುಕುಲಪದ್ಧತಿಯ ವಿಶ್ವವಿದ್ಯಾಲಯ,ಜಾಗತಿಕಸ್ತರದ ಯೋಗಕೇಂದ್ರಗಳೂ ಸ್ಥಾಪನೆಯಾಗಲಿವೆ.ಮಹರ್ಷಿ ದೇವರಾತರ ಕಲ್ಪನೆಯಾದ ಗೋರಕ್ಷಾ ಬ್ರಹ್ಮಚರ್ಯಾಶ್ರಮವು ಈ ರೀತಿಯಲ್ಲಿ ಸಾಕಾರಗೊಳ್ಲಲಿದ್ದು  ಐತಿಹಾಸಿಕವಾಗಲಿರುವ ಈ  ಕಾರ್ಯವು ನಮ್ಮ ಸಮಯದಲ್ಲಿ ನಡೆಯುತ್ತಿದೆ ಎಂಬುದೇ ದೊಡ್ಡ ಭಾಗ್ಯ ಎಂದು ಹೇಳಿ ಎಲ್ಲ ಯೋಜನೆಗಳ ಸಾಫಲ್ಯಕ್ಕೆ ಸತತ ಪರಿಶ್ರಮ ವಹಿಸುವಂತೆ ಎಲ್ಲಾ ಶಿಶ್ಯರಿಗೂ ಕರೆಯಿತ್ತರು.

ಶ್ರೀ ಮಠದ ನಿರ್ಮಾಣಕ್ಕಾಗಿ ಭೂಮಿಯನ್ನಿತ್ತ ಶ್ರೀ ದೇವಶ್ರಮ ಶರ್ಮ ಮಾತನಾಡಿ ಅಂತರಾಷ್ಟ್ರೀಯಖ್ಯಾತಿ ಹೊಂದಿದ ತನ್ನ ತಂದೆ ಮಹರ್ಷಿ ದೇವರಾತರ ಕನಸು ಪೂಜ್ಯ ಶ್ರೀಗಳವರಿಂದ ನನಸಾಗುತ್ತಿದೆ,ಸ್ವಲಾಭಕ್ಕಿಂತ ಸಾಮಾಜಿಕ ಹಿತ ಮುಖ್ಯ ಎಂದು ನುಡಿದರು.ಕೇಂದ್ರಪರಿಷತ್ ಅಧ್ಯಕ್ಷ ಎಸ್.ಆರ್.ಹೆಗಡೆ ಪ್ರಾಸ್ತಾವಿಕ ಮಾತನಾಡಿ ಶ್ರೀ ಮಠದ ಎಲ್ಲಾ ಯೋಜನೆಗಳ ಕಾಲಬಧ್ಧ ನಿರ್ಮಿತಿಯ ವಿವರಣೆ ನೀಡಿದರು.ಶ್ರೀ ಮಹಾಗಣಪತಿ ದೇವಾಲಯದ ಧರ್ಮದರ್ಶಿ ಶ್ರೀಧರ ಕಾಮತ್,ಶ್ರೀ ನಿಸರಾಣಿ ರಾಮಚಂದ್ರ ಮೊದಲಾದವರು ರಾಮಸತ್ರ,ದೇವಾಲಯ ನವೀಕರಣಗಳ ಬಗ್ಗೆ ಮಾಹಿತಿ ನೀಡಿದರು.ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಎಸ್.ಆರ್.ನಾಯಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ದಾನಿ ಡಿ.ಡಿ.ಶರ್ಮ ದಂಪತಿಗಳು ,ಶ್ರೀ ಭಾರತೀ ಪಾಟೀಲ್,ಶ್ರೀಧರ ಕಾಮತ್ ಮೊದಲಾದ ದಾನಿಗಳನ್ನು ಸನ್ಮಾನಿಸಲಾಯಿತು.ನಿಧಿ ಸಂಗ್ರಹಕ್ಕಾಗಿ “ಶಿವಾರ್ಪಣ “ಕರಂಡಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣಗೊಳಿಸಲಾಯಿತು.img_0041

ಶ್ರೀಮಠದ ಪುನರ್ನಿಮಾಣಕ್ಕೆ ಶ್ರೀಗಳವರಿಂದ ಗುದ್ದಲೀಪೂಜೆ ನಡೆಯಿತು.

---------------------------------------------------------------------------------------------------------------------------------------------------------------------------------------

One Response to “ಅಶೋಕೆಯಲ್ಲಿ ಹೊಸ ಶಕೆ ಪ್ರಾರಂಭ:ಶ್ರೀ ಶ್ರೀಮದ್ರಾಘವೇಶ್ವರ ಶ್ರೀ.”

  1. viswa-suntime

    hare ram…. gurumatavannu sthapisuvudu shishyara adya karthavya…addarinda ee karyadalli navella bhagavahisona tanu …mana …dhanadinda sampoorna palgondu gurugala asirvadakke pathraragona….idu nammellara soubhagya.

    May 24th, 2009 | 12:59 pm

Leave a Reply