ಕಳೆದೆರಡು ದಶಕಗಳಿಂದ ವಿಶ್ವ ಗೋ ಸಮ್ಮೇಳನದ ಸಂದೇಶದೊಂದಿಗೆ ಭಾರತೀಯ ಗೋಯಾತ್ರೆ, ಗೋ ಸಂಸತ್ತು, ವಿಶ್ವಮಂಗಲ ಗೋಗ್ರಾಮ ಯಾತ್ರೆ, ಗೋಶಾಲೆಗಳು, ಅಭಯಾಕ್ಷರ , ಗೋಸ್ವರ್ಗ, ಮೊದಲಾದ ಗೋ ಸಂರಕ್ಷಣಾ ಸತ್ಸಂಕಲ್ಪದಿಂದ ಮಹಾಕ್ರಾಂತಿ ಎಸಗಿದ “ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಹಾ ಸಂಕಲ್ಪ ಕೈಗೂಡಿದ ಆನಂದಮಯ ಗಳಿಗೆ ಇದು. ಜಗದೀಶ್ವರನಾದ ಶ್ರೀಮಹಾಬಲೇಶ್ವರ ಕರ್ನಾಟಕ ಸರ್ಕಾರದ ಈ ಗೋಸಂರಕ್ಷಣೆಯ ವಿಧಿ-ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶಕ್ತಿಯನ್ನು ನೀಡಲೆಂದು ಶುಭಹಾರೈಕೆ.