

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಕರ್ಣ.೨೪. ಅಕ್ಷಯ ತೃತೀಯಾ ಹಾಗೂ ಬಸವ ಜಯಂತಿಯ ಪುಣ್ಯ ದಿನವಾದ ಇಂದು ೨೪ ಮಂಗಲವಾರದಂದು
ಕರ್ನಾಟಕ ಸರಕಾರದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ವಿಶೇಶ್ವರ ಹೆಗಡೆ ಕಾಗೇರಿಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ,ಕುಮಟಾ ಶಾಸಕರಾದ ಮಾನ್ಯ ಶ್ರೀ ದಿನಕರ ಶೆಟ್ಟಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಶ್ರೀದೇವರಿಗೆ ಅಭಿಷೇಕ-ಪೂಜಾ ಸೇವೆಗಳನ್ನು ಸಮರ್ಪಿಸಿದರು.
ರಾಜ್ಯವನ್ನು ಕಾಡುತ್ತಿರುವ ಬರ ಹಾಗೂ ಪ್ರಾಕೃತಿಕ ಉತ್ಪಾತಗಳಿಂದ ಜನತೆಯನ್ನು ರಕ್ಷಿಸಬೇಕೆಂದು ಶ್ರೀದೇವರಲ್ಲಿ ಪ್ರಾರ್ಥಿಸಿದ ಮಾನ್ಯಸಚಿವರು ಶ್ರೀ ದೇವಾಲಯದ ಗರ್ಭಗುಡಿಯಲ್ಲಿನ ವಾತಾವರಣವನ್ನು ತಂಪುಗೊಳಿಸಲು ಹವಾ ನಿಯಂತ್ರಕ ಅಳವಡಿಸುವ ಮೂಲಕ ಭಕ್ತರಿಗೆ ವಿಶೇಷಸೌಲಭ್ಯವನ್ನು ಒದಗಿಸಿದ ಶ್ರೀ ದೇವಾಲಯದ ಆಡಳಿತವನ್ನು ಪ್ರಶಂಸಿಸಿದರಲ್ಲದೆಶ್ರೀ ದೇವಾಲಯದ ಪೂಜಾ ಹಾಗೂ ದರ್ಶನ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ನಾಗರಾಜ ಶೆಟ್ಟಿ ಯವರೂ ಶ್ರೀ ದೇವಾಲಯದ ಭಕ್ತಾ-ಜನೋಪಯೋಗೀ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.ವೇ. ನಾಗರಾಜ ಪ್ರಸಾದ, ವೇ. ವಿಶ್ವನಾಥ ಭಟ್ಟ ಪೂಜಾ ವಿನಿಯೋಗ ನೆರವೇರಿಸಿಕೊಟ್ಟರು. ಶ್ರೀ ದೇವಾಲಯದ ವತಿಯಿಂದ ಶ್ರೀ ಜಿ.ಕೆ. ಹೆಗಡೆ ಮಾನ್ಯ ಸಚಿವರು ಮತ್ತು ಶಾಸಕರನ್ನು ಸ್ವಾಗತಿಸಿದರು.