Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀರುದ್ರಾಧ್ಯಾಯ

Saturday, March 6th, 2010 -

ಶಿವ. ಜಗತ್ತಿಗೆಶುಭವನ್ನು ಮಂಗಳವನ್ನು ನೀಡುವವ.ಲೋಕಹಿತಂಕರನಾದುದರಿಂದ ಈತ ಶಂಕರನೂ ಹೌದು.ನಮ್ಮ ಈ ಬವಬಂಧನಕ್ಕೆ ಈತನಿಂದಲೇ ಬಿಡುಗಡೆ.ಆದ್ದರಿಂದ ಇವನಿಗೆ ರುದ್ರ ಎಂದೂ ಹೆಸರು. ರುದ್ರಪ್ರೀತಿಕರವಿಧಾನಗಳಿಂದ ಪರಮೇಶ್ವರಾನುಗ್ರಹ ತೀರಸುಲಭ.ಎಂದೇ ಸಾಧನೆಯ ಪ್ರಪಂಚದಲ್ಲಿ,ಸಾಧಕರಪರಿಧಿಯಲ್ಲಿ ರುದ್ರಪಾರಾಯಣ,ರುದ್ರಾರ್ಚನೆಗಳಿಗೆ ಅತಿಶ್ರೇಷ್ಠಸ್ಥಾನ.

ನಮ್ಮ ಬದುಕಿನ ಉನ್ನತಿಗೆ ಪ್ರಾಚೀನವೈದಿಕಪರಂಪರೆಯು ತೋರಿಸಿದ ಅನುಷ್ಠಾನಗಳಪಂಕ್ತಿ ತುಂಬದೊಡ್ಡದು. ಅವುಗಳಲ್ಲಿ ಮೊದಲಸ್ಥಾನದಲ್ಲಿರುವುದು ಅತಿಪ್ರಾಚೀನ ಹಾಗೂಪ್ರಸಿದ್ಧವಾದದ್ದುರುದ್ರಾನುಷ್ಠಾನ.ಕಾರ್ಯಸೌಲಭ್ಯ ಮತ್ತು ಶೀಘ್ರಫಲಲಾಭ ಈ ಅನುಷ್ಠಾನದವೈಶಿಷ್ಟೈ.ಲೌಕಿಕವಾದ ಸುಖಸಂತೋಷಗಳಲ್ಲದೆ ಜನ್ಮಾಂತರಗಳ ಕರ್ಮಫಲರೂಪವಾದ ಸಂತಾಪವನ್ನುಶಮನಮಾಡುವಶಕ್ತಿಯೂ ಈ ಅನುಷ್ಠಾನಕ್ಕಿದೆಯೆಂಬುದು ಆಪಸ್ತಂಭ,ಪರಾಶರ ಮೊದಲಾದ ಸ್ಮೃತಿಗಳಲ್ಲಿ ಹಾಗೂ ಕೈವಲ್ಲ್ಯ, ಜಾಬಾಲೋಪನಿಷತ್ತುಗಳಲ್ಲಿಯೂ ಸಹ ಉಲ್ಲೇಖಿತ. ಶಾಂತಿ,ಪುಷ್ಟಿ,ತುಷ್ಟಿ ಆರೋಗ್ಯ ಧನಧಾನ್ಯಾಭಿವೃದ್ಧಿ ಈ ಎಲ್ಲಫಲಗಳಿಗಾಗಿ ರುದ್ರಾಧ್ಯಾಯದ ಒಂದುಮಂತ್ರದ ನಿರಂತರಜಪ, ಅಥವಾರುದ್ರಾಧ್ಯಾಯದಪಾರಾಯಣ ಸಾಕು ಎನ್ನುವುದು ಪ್ರಾಚೀನ ಉಕ್ತಿ.

ಒಬ್ಬನೇ ಆದರೂ ಸಾಧಕನ ಅನುಗ್ರಹಕ್ಕಾಗಿ ಶಿವ,ರುದ್ರ,ಈಶ್ವರ ಮೊದಲಾದ ಅನೇಕರೂಪಗಳಲ್ಲಿಪ್ರಕಟಗೊಳ್ಳುವ ಈ ದಿವ್ಯಶಕ್ತಿಯ ಆರಾಧನೆಗೆ ರುದ್ರಪಾರಾಯಣ,ರುದ್ರಾಭಿಷೇಕ,ರುದ್ರಯಾಗ ಮೊದಲಾದಹಲವುವಿಧಗಳು. ಬಂಧನ,ಮೋಹನ,ಉದ್ಧಾರ ಈ ಮೂರೂಶಕ್ತಿಗಳನ್ನುಹೊಂದಿದ ಶಿವ ರುದ್ರಪಾರಾಯಣದಿಂದ ತೃಪ್ತ.

ರುದ್ರಪಾರಾಯಣವನ್ನು ಕೇಳುವುದೇ ಒಂದು ಅಲೌಕಿಕ ಅನುಭವ. ಅಭಿಷೇಕಪ್ರಿಯನೆಂದೇ ಖ್ಯಾತನಾದ ಗಂಗಾಧರನನ್ನು ಪವಿತ್ರಗಂಗೆಯಿಂದ,ಎಳನೀರು,ಜೇನು,ಹಾಲು,ಪರಿಮಳದ್ರವ್ಯಗಳಿಂದ ರುದ್ರಪಾರಾಯಣಪೂರ್ವಕವಾಗಿ ಅಭಿಷೇಕ ಮಾಡುವುದೂ ಸಹ ಇಷ್ಟಾರ್ಥಸಿದ್ಧಿಗೆ ಸುಲಭದಹಾದಿ ಎನ್ನುವ ಸ್ಮೃತಿಗಳು ಬ್ರಹ್ಮಹತ್ಯೆ ಗುರುದ್ರೋಹದಂತಹ ಮಹಾಪಾತಕಗಳೂಸಹ ಈ ಅನುಷ್ಠಾನದಿಂದ ನಾಶವಾಗುತ್ತವೆ ಎಂಬುದನ್ನು ಉಲ್ಲೇಖಿಸಿವೆ.

ತಮ್ಮ ಬದುಕಿನ ಎಲ್ಲ ಚಟುವಟಿಕೆಗಳೂ ಈಶ್ವರನ ಆರಾಧನೆಯಾಗಲಿ ಎಂದು “ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ “ಎಂಬ ಮಾತಿನ ಮುಖಾಂತರ ಶ್ರೀಮದಾಚಾರ್ಯರು ಘೋಷಿಸಿದರೆ ಅದ್ವೈತಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀಮದಪ್ಪಯ್ಯದೀಕ್ಷಿತರು ಮೃತ್ಯು ಪಕ್ಕದಲ್ಲಿಯೇ ಇದೆ.ಶರೀರದಲ್ಲಿ ಶಕ್ತಿಯಿದ್ದಾಗ ಶಿವಾರ್ಚನೆ ಮಾಡಿ ಕೃತಾರ್ಥರಾಗಿ ಎನ್ನುತ್ತಾರೆ.

ವೇದಗಳನ್ನೋ ಪುರಾಣಗಳನ್ನೋ ಅವುಗಳ ಅಕ್ಷರಾರ್ಥದಲ್ಲಿಯೇಗ್ರಹಿಸುವುದು ಅವಿವೇಕ ಎನ್ನುತ್ತಾರೆ ಅರಿತವರು. ಕೇವಲ ಶಬ್ದಸ್ವರೂಪವನ್ನರಿತವನಿಗೆ ವಸ್ತುಸಾಕ್ಷಾತ್ಕಾರ ಅಸಾಧ್ಯ. ಸಮುದ್ರಶಬ್ದದ ಮುಖಾಂತರ ಸಾಗರವನ್ನರಿಯಲು ಪ್ರಯತ್ನಿಸುವುದು ಬೊಗಸೆಯಲ್ಲಿ ಸಮುದ್ರವನ್ನಳೆದಂತೆ. ಸಾಂಕೇತಿಕವಾದ ಅರ್ಥದ ಅನುಸಂಧಾನ ಮಾಡಿದವರಿಗೆ ಮಾತ್ರ ವೇದಮಂತ್ರಗಳ ಅರಿವು ಮೂಡಲುಸಾಧ್ಯ.

ತ್ರಿಪುರಸಂಹಾರಕ ಎಂಬುದು ಶಿವನಿಗೆ ಸಲ್ಲುವ ಹೆಸರು.ತ್ರಿಪುರ ಎಂಬುದಕ್ಕೆ ಮೂರುಪಟ್ಟಣಗಳು ಎಂಬುದು ಅಕ್ಷರಾರ್ಥ ಹೌದು,ಆದರೆ ಸಾಂಕೇತಿಕವಾದ ಅಧ್ಯಾತ್ಮದ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ನಿಲುಕುವ ಅರ್ಥವೇ ಬೇರೆ. ಈ ಲೋಕದಲ್ಲಿ ಜನಿಸಿದ ಪ್ರತಿಯೋರ್ವ ಜೀವಿಗೂ ಸ್ಥೂಲ-ಸೂಕ್ಷ್ಮ-ಕಾರಣಗಳೆಂಬ ಮೂರು ನೆಲೆಗಳಿವೆ.ಆತ್ಮಜ್ಞಾನಿಯಾಗಿ ಈ ಮೂರುನೆಲೆಗಳನ್ನು ನಾಶಪಡಿಸುವವರೆಗೆ ಪರಮಾತ್ಮಸಾಕ್ಷಾತ್ಕಾರ ಅಸಾಧ್ಯ ಎಂಬುದೇ ಈ ಕಥೆಯ ಸಾಂಕೇತಿಕ ಅರ್ಥ

ಕರೆದರೆ ಓ ಎನ್ನನೇ ಶಿವನು? ಎಂಬುದು ಅನುಭಾವಿಗಳ ಉಕ್ತಿ. ಕರೆಯಲು ಸಮಯವಾದರೂ ನಮಗಿದೆಯೇ? ಕೋಳೂರುಕೊಡಗೂಸಿನ ಮುಗ್ಧತೆ,ಮಮತೆಯಿದ್ದಲ್ಲಿ ಆತ ಬರಲೇಬೇಕು, ಬರುತ್ತಾನೆ. ಆದರೆ ಕರೆಯುವ ಹೃದಯದ ಕಾತರತೆ ಎಷ್ಟಿದೆ ಎಂಬುದು ಮಾತ್ರ ಪ್ರಶ್ನೆ. ಬೇಡಿದ್ದನ್ನೆಲ್ಲ ನೀಡುವವ ಎಂಬ ಪ್ರಸಿದ್ಧಿಯಲ್ಲಿ ಭಕ್ತರಿಗೆ ಎಲ್ಲವನ್ನೂನೀಡಿದ್ದಲ್ಲದೆ ಸ್ವತಹ ತನ್ನನ್ನೆ ತಾನು ಕೊಟ್ಟುಕೊಂಡು ವ್ಯಾವಹಾರಿಕವಾಗಿ ಭೋಳೇಶಂಕರ ಎಂಬ ನಿಂದಾಸ್ತುತಿಗೆ ವಿಷಯವಾದವನೂ ಇದೇ ರುದ್ರ. ರುದ್ರಪದದ ಜತೆಗೇ ನಮಗೆ ನೆನಪಾಗುವುದು ಭಯಂಕರ ಎಂಬಪದ. ಇದು ಸತ್ಯವೂಹೌದು.ಭಕ್ತರಬದುಕಿನಲ್ಲಿ ಘಟಿಸುವ ಎಲ್ಲಘೋರ ಅಪಸವ್ಯಗಳಿಗೆ ರುದ್ರಭಯಂಕರನಾಗಿ ಅಘೋರವಾಗಿಸುವುದೂ ಸಹ ಈತನದೇ ವೈಶಿಷ್ಟೈ.

ತಪ ಎಂದರೆ ಬೇಗೆ. ಈಸಂಸಾರತಾಪವನ್ನು ದೂರಮಾಡಲು ತಂಪುಬೇಕು.ಅಭಿಷೇಕವೆಂಬುದು ಇದಕ್ಕೆ ಸುಲಭಮಾರ್ಗ.ಜಗದೀಶ್ವರನನ್ನು ಲಿಂಗರೂಪದಲ್ಲಿ ಪರಿಭಾವಿಸಿಜಲಧಾರೆಯಿಂದ ಅಭಿಷೇಕ.ಒಂದೊಂದು ದೇವತೆಗೆ ಒಂದೊಂದು ಸಂಖ್ಯೆ. ಗಣಪತಿಗೆ ಇಪ್ಪತ್ತೊಂದು,ರವಿಗೆ ಹನ್ನೆರಡು,ರುದ್ರನಿಗೆ ಹನ್ನೊಂದು. ಏಕಾದಶರುದ್ರರು.ತತ್ಪ್ರೀತ್ಯರ್ಥವಾಗಿ ಏಕಾದಶರುದ್ರಪಾರಾಯಣ. ಅಭಿಷೇಕ.ಅರ್ಚನೆ.ಹವನ. ಈ ಎಲ್ಲ ವಿಧಿಗಳಲ್ಲಿಯೂ ಹನ್ನೊಂದಕ್ಕೇ ಪ್ರಾಶಸ್ತ್ಯ.

ಸಹಸ್ರ ಸಹಸ್ರಕಂಠಗಳಿಂದ ಎಕಕಾಲದಲ್ಲಿ ಸಾಮೂಹಿಕವಾಗಿ ಒಂದೇನಾದದಿಂದ ಹೊರಹೊಮ್ಮುವ ಶುಭಂಕರರುದ್ರಪಾರಾಯಣ ನಡೆಯುವುದೇ ಒಂದು ವಿಶೇಷ.ಇದರಲ್ಲಿ ಸ್ವತಹ ಪಾಲ್ಗೊಳ್ಳುವುದು, ಕೇಳಿಕೃತಾರ್ಥರಾಗುವುದೂ ಒಂದು ಭಾಗ್ಯದಪರಿಯೇ. ಆತ್ಮಲಿಂಗರೂಪಿಯಾದ ಲೋಕಶಂಕರನನ್ನು ಸ್ವತಹ ಸ್ಪರ್ಶಿಸಿ ಅರ್ಚಿಸುವ ಅವಕಾಶವಿರುವ ವಿಶಿಷ್ಟಕ್ಷೇತ್ರಗೋಕರ್ಣ. ಈ ಈಶನಸನ್ನಿಧಿಯಲ್ಲಿ ಕೋಟಿರುದ್ರಪಾರಾಯಣದ ಸಂಕಲ್ಪದಮೂಲಕ ಜಾಗತಿಕಸ್ತರದಘಟನೆಯೊಂದು ವರ್ತಮಾನದಲ್ಲಿ ನಡೆಯುತ್ತಿದೆ. ಇಂತಹ ಶಿವಪ್ರೀತಿಕರಕಾರ್ಯವೊಂದು ಹಿಂದೆ ನಡೆದಿದ್ದನ್ನು ಇತಿಹಾಸ ಉಲ್ಲೇಖಿಸಿಲ್ಲ.

ಗೋಕರ್ಣಕ್ಕೆ ಬಂದು ಬೇಡಿದ್ದನ್ನು ಪಡೆಯದೆ ಬರಿಗೈಯ್ಯಲ್ಲಿ ಹಿಂದಿರುಗಿದ ಭಕ್ತನಿಲ್ಲ ಎಂದೇ ಈತನಿಗೆ ಸಾರ್ವಭೌಮ, ಮಹಾಬಲ ಎಂದೇ ಖ್ಯಾತಿ. ನಂಬದೇ ಕೆಟ್ಟವರು,ಕೆಡುವವರು ಇರಬಹುದು, ಆದರೆ ನಂಬಿ ಕೆಟ್ಟವರಿಲ್ಲ ಎಂಬುದು ದಾಸವರೇಣ್ಯರ ನುಡಿ. ನಮ್ಮ ಬದುಕಿನ ಆಧ್ಯಾತ್ಮಿಕ-ಆಧಿದೈವಿಕ-ಆಧಿಭೌತಿಕರೂಪವಾದತಾಪತ್ರಯಗಳನ್ನು ದೂರಮಾಡಲೆಂದೇ ಇವನ ಕೈಯ್ಯಲ್ಲಿ ತ್ರಿಶೂಲವಿದೆ.ಶರೀರ-ಮಾತು-ಮನಸ್ಸುಗಳೆಂಬ ತ್ರಿಕರಣಗಳ ಪ್ರತೀಕವಾದ ತ್ರಿದಳಬಿಲ್ವಪತ್ರೆಯಿಂದ ಈತನಿಗೆ ಅರ್ಚನೆ. ಶ್ರದ್ಧೆ,ನಂಬಿಕೆಗಳು ಜೀವನದ ಮೂಲಬೇರು. ಬೇರನ್ನು ಕತ್ತರಿಸಿದರೆ ಹೂ ಹಣ್ಣುಗಳಿಲ್ಲ,ಮರವೂ ಇಲ್ಲ. ಜಾಗತಿಕಸ್ತರದ ಇಂತಹ ಲೋಕಕ್ಷೇಮಕರಕಾರ್ಯದಲ್ಲಿ ಪಾಲ್ಗೊಂಡು ಧನ್ಯರಾಗುವುದು ಭಾಗ್ಯವಂತೂ ಹೌದು.

Leave a Reply

Highslide for Wordpress Plugin