ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ
ದಿನಾಂಕ 14-12 -2020 ಸೋಮವಾರ ಕಾರ್ತೀಕ ಅಮಾವಾಸ್ಯೆಯಂದು ಶಾರ್ವರಿ ಸಂವತ್ಸರದ #ರಂಗಪೂಜೆ (ಎಡೆ ಅಮಾವಾಸ್ಯೆ) ಉತ್ಸವ, ರಥೋತ್ಸವ ಸಂಪನ್ನಗೊಂಡಿತು. ಅರ್ಚಕರಾದ ವೇ.ಮೂ. ಸಾಂಬ ಬಟ್ ಷಡಕ್ಷರಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳದ ಸದಸ್ಯರು ಹಾಗೂ ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು.
ಶ್ರೀದೇವರಿಗೆ 108 ಎಡೆ ವಿಶೇಷ ಭಕ್ಷ್ಯ ನೈವೇದ್ಯ ಸಲ್ಲಿಸಲಾಯಿತು. ಪೂಜೆಯ ನಂತರ ಶ್ರೀ ದೇವಾಲಯದಲ್ಲಿ ಸೇವೆ ಸಲ್ಲಿಸುವ ವಿವಿಧ ಸಮಾಜದ ಕಾರ್ಯಕರ್ತರಿಗೆ ಎಡೆ ಪ್ರಸಾದವನ್ನು ವಿತರಿಸಲಾಯಿತು.
As per the holy directions of Sri Sri Raghaveshwara Bharathi Mahaswamiji, Shree RamachandrapuraMatha, ‘RangaPooja’ celebration performed at Samsthana Sri Mahabaleshwara Temple, on the day of Karthika Amavasya.