SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

ಶಾರ್ವರಿ ಸಂವತ್ಸರದ ತ್ರಿಪುರಾಖ್ಯದೀಪೋತ್ಸವ 29-11-2020. | Karthika Poornima.

Tripurakhya Deepotsava concluded in the holy directions of Sri Sri Raghaveshwara Bharathi Mahaswamiji, Shree RaamachandrapuraMatha, at Samsthana Shree Mahabaleshwara Temple Shree Kshetra Gokarna on 29-11-2020 Sunday (Karthika Poornima).
   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶಾರ್ವರಿ ಸಂವತ್ಸರದ ತ್ರಿಪುರಾಖ್ಯದೀಪೋತ್ಸವ 29-11-2020 ರವಿವಾರ ವಿಜೃಂಭಣೆಯಿಂದ ಜರುಗಿತು.
ಲಕ್ಷಬಿಲ್ವಾರ್ಚನೆ , ಭೂತಬಲಿ, ವನಭೋಜನ, ದೇವಾಲಯದಲ್ಲಿ ಲಕ್ಷದೀಪೋತ್ಸವ , ಕೋಟಿತೀರ್ಥದಲ್ಲಿ ತೆಪ್ಪೋತ್ಸವ , ಕೊನೆಯಲ್ಲಿ ರಾತ್ರಿ ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಅರ್ಚಕರಾದ ವಿದ್ವಾನ್ ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು . ಶ್ರೀ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
   ಈ ಪರ್ವ ದಿನದಂದು “ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು” ದೇವಾಲಯಕ್ಕೆ ಚಿತ್ತೈಸಿ, ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳದವರು ತಯಾರಿಸಿದ
” ರಜತ ರಥ ” ದಲ್ಲಿ “ಸಾರ್ವಭೌಮ”ನು ಆರೂಢನಾಗುವ ಅಮೋಘ ಗಳಿಗೆಯಲ್ಲಿ ರಥಕ್ಕೆ ಪೂಜೆ ಮಾಡಿ ಅನುಗ್ರಹಿಸಿದರು.
   ಈ ರಜತ ರಥವನ್ನು ಸುಮಾರು 80 ಲಕ್ಷ+ ವೆಚ್ಚದಲ್ಲಿ ತಯಾರಿಸಿದ್ದು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಚರಿತ್ರೆಯಲ್ಲಿ ದಾಖಲಾರ್ಹ ಸಂಗತಿಯಾಗಿದೆ. ನಂತರ ಶ್ರೀ ಪರಮಪೂಜ್ಯರು ದೇವಾಲಯಕ್ಕೆ ಆಗಮಿಸಿ ಜಗದೀಶ್ವರನಿಗೆ ವಿಶೇಷ ರುದ್ರಾಭಿಷೇಕ ಪೂಜೆ ಮಾಡಿದರು. ದೇವಾಲಯದ ಶಿಖರವನ್ನು ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.

Donate

Your donation will help us accomplish our mission

Click Here

Guruvani

Reminiscence

Reminiscence is a window for conscience. It is possible to call anyone within ourselves by recollecting. If we call Ravana,...

Read More

Highslide for Wordpress Plugin