ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ...
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ದೇವಾಲಯದಲ್ಲಿ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ಭೀಮಕೊಂಡಕ್ಕೆ...
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಶಿವಗಂಗಾ ವಿವಾಹ ಮಹೋತ್ಸವವು ವೈಭವದಿಂದ ಜರುಗುತ್ತದೆ. ರೂಢಿಗತ ಪರಂಪರೆಯಂತೆ ಮಹಾಬಲೇಶ್ವರ ಉತ್ಸವವು ಗಂಗಾಷ್ಟಮಿಯ ದಿನ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯಕ್ಕೆ ಹೋಗಿ ಗಂಗಾಮಾತೆಯ ಅನುಮತಿ ಪಡೆದು ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ನೆರವೇರುತ್ತದೆ. ಆ ಮಾತುಕತೆಯಂತೆ...
ಗಂಗಾಷ್ಟಮಿಯ ಪರ್ವಕಾಲದಲ್ಲಿ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಜರುಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಹಿಂದಿನ ದಿನ ರಾತ್ರೆ ಸುಮಾರು 12 ಗಂಟೆಗೆ ಶ್ರೀ ಮಹಾಬಲೇಶ್ವರ ದೇವಾಲಯದಿಂದ...
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಕದಿರು ಹರಣೋತ್ಸವವು ರೂಢಿಗತ ಪರಂಪರೆಯಂತೆ ಜರುಗುತ್ತದೆ. ತತ್ಸಂಬಂಧ ಶ್ರೀ ದೇವರ ಉತ್ಸವವು ರಾಜಲಾಂಛನಗಳಾದ ಬಿರುದು-ಬಾವಲಿಗಳೊಂದಿಗೆ ಹೊರಟು ಸಮೀಪದ ಊರು ಬಂಕಿಕೊಡ್ಲಿಗೆ ಹೋಗಿ ನಿರ್ದಿಷ್ಟಪಡಿಸಿದ ಭತ್ತದ ಗದ್ದೆಗೆ ಹೋಗಿ, ಭತ್ತವನ್ನು ಕೊಯ್ಯುವ ಧಾನ್ಯ ಹರಣೋತ್ಸವ...
ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರೀ ದೇವಾಲಯದ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ, ನೈವೇದ್ಯ, ಪೂಜೆ ಸಮರ್ಪಿಸಲಾಗುತ್ತದೆ . ರೂಢಿಗತ ಪರಂಪರೆಯಂತೆ ವಿಜಯ ದಶಮಿಯ೦ದು ವಿಜಯೋತ್ಸವದ ಪ್ರಯುಕ್ತ ಶ್ರೀ ದೇವರ ಸವಾರಿಯು ಬಿರುದು ಬಾವಲಿ ಸಹಿತ ಭದ್ರಕಾಳಿ ದೇವಾಲಯದ ಸಮೀಪದ...
ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಗಣೇಶ ಚತುರ್ಥಿ ಉತ್ಸವವನ್ನು ನಾಲ್ಕು ದಿನಗಳ ಕಾಲ ವೈಭವದಿಂದ ಆಚರಿಸಲಾಗುತ್ತದೆ. ಅಂದು ಗಣಪನ ಮೂರ್ತಿಯನ್ನು ವೆಂಕಟರಮಣ ದೇವಾಲಯದಿಂದ ಪಲ್ಲಕ್ಕಿ ಉತ್ಸವದಲ್ಲಿ ವಾಲಗ ,ಕಟ್ಟಿಗೆ , ದೀವಟಿಗೆ ಸಮೇತ ವೈಭವದಿಂದ ಕರೆತರಲಾಗುತ್ತದೆ . ಅಂದು ವಿಶೇಷ ಪಂಚಭಕ್ಷ...