ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶಿವಯೋಗದ ಪುಣ್ಯ ಪರ್ವ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಜನರು ಆತ್ಮಲಿಂಗ ದರ್ಶನ, ಅಭಿಷೇಕ ಸೇವೆ ಸಲ್ಲಿಸಿದರು. ಬಂದ ಭಕ್ತಾದಿಗಳಿಗೆ ಬೆಳಿಗ್ಗೆಯಿಂದಲೇ ಅಮೃತಾನ್ನ ಪ್ರಸಾದ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು. ವೇ ಕೃಷ್ಣ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು.
ರಾಜ್ಯಸಭಾ ಸದಸ್ಯ ಶ್ರೀ ಪ್ರಭಾಕರ ಕೋರೆ, ಕಾರವಾರ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಮಹಾರಾಷ್ಟ್ರ ಸಚಿವರಾದ ಶ್ರೀ ಏಕನಾಥ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಆಯುಕ್ತರು ಕುಮಟಾ ಇವರು ಭೇಟಿ ನೀಡಿದರು.
”ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು” ಶ್ರೀರಾಮಚಂದ್ರಾಪುರಮಠ ಇವರು ಮತ್ತು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೆ ಮಠದ ಶ್ರೀ ಶ್ರೀ ಶಿವಾನಂದ ಸರಸ್ವತಿ ಮಹಾಸ್ವಾಮಿಗಳವರು ಭೇಟಿ ನೀಡಿ ವಿಶೇಷ ರುದ್ರಾಭಿಷೇಕ ಪೂಜೆ ಸಲ್ಲಿಸಿದರು .
On the auspicious day of Mahashivaratri – devotees performed pooja and darshan of Lord Mahabaleshwara at Shree kshetra Gokarna. ”Jagadguru Shankaracharya Gokarna Mandaladheeshwar Shree Shree Raghaveshwara Bharathi Mahaswamiji” and Shree Shree Shivananda Saraswati mahaswamiji, Kavalemath – performed pooja. Devotees had Amrutanna Prasad (Breakfast) at Amrutanna Bhojanshala.