ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ದಿನಾಂಕ :- 08.12.2020 ರಂದು ಕರ್ನಾಟಕದ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಮತ್ತು ಸಂಸದರು ಆದ ಶ್ರೀ ನಳಿನ ಕುಮಾರ ಕಟೀಲವರು ಆಗಮಿಸಿ ಆತ್ಮ ಲಿಂಗಕ್ಕೆ ಗಂಗಾ ಜಲಾಭಿಷೇಕ, ಅರ್ಚನೆ ಮಾಡಿ ಲೋಕ ಕಲ್ಯಾಣವನ್ನು ಪ್ರಾರ್ಥಿಸಿದರು.
ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ.ಹೆಗಡೆ ಸಂಸದರನ್ನು ಸ್ವಾಗತಿಸಿದರು.
ವೇ. ಅಮೃತೇಶ ಭಟ್ ಹಿರೇ ಮತ್ತು ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು.
ನಂತರ ಶ್ರೀ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.