Donate

Help us to help others, please Donate

Related Links

e-Procurement Process 2015

Tender Application Form

Related Links

Reminiscence

Reminiscence

Tuesday, September 24th, 2013

Reminiscence is a window for conscience. It is possible to call anyone within ourselves by recollecting. If we call Ravana, Lanka will be our mind, That will be burnt and a battlefield.. . ! If we call Rama, Ramarajya will be within ourself.. No war… but, Ayodhya… - Sri Sri Raghavwshwara Bharatee Mahaswamiji, Sri ramachandrapuraMath

Saturday, August 8th, 2009

“ಪರಿಪೂರ್ಣ ಶಾಂತಿ ಲಭಿಸುವುದು ಏಕಾಂತವಾಸದಲ್ಲಿ ಮಾತ್ರ.ಬಹುಜನರಿದ್ದರೆ ಒಮ್ಮೆ ಪ್ರೀತಿಯ ನಿನಾದ:ಇನ್ನೊಮ್ಮೆ ದ್ವೇಶದ ಆಸ್ಫೋಟ.ಒಂದೆಡೆ ಕರುಣೆಯ ವೀಣೆ ಮಿಡಿದರೆ,ಇನ್ನೊಂದೆಡೆ ಹೃದಯ ಭೇದಿಸುವ ಕ್ರೌರ್ಯದ ತಮಟೆ.ಅಂತರಂಗ ವಿಹಾರಿಗಳಾದ ಮಹರ್ಷಿಗಳು ಶಾಂತಿಯನ್ನು ಅರಸಿದ್ದು ಹೃದಯಾಲಯದಲ್ಲಿ.ಅದನ್ನು ಪ್ರತಿನಿಧಿಸುವ ಗಿರಿ-ಗುಹೆ-ಗಹ್ವರಗಳಲ್ಲಿ.ಶಾಂತಿಯಿರುವುದು ಬೆಳ್ಳಿಯ ಮಾತಿನಲ್ಲಲ್ಲ:ಬಂಗಾರದ ಮೌನದಲ್ಲಿ.ಓ ಮೌನವೇ ! ನೀ ಶಾಂತಿಯ ಬಯಸುವೆಯಾದರೆ ಲೋಕಾಂತರದ ದೊಂಬರಾಟವ ಬಿಟ್ಟು ಅಂತರಂಗದಲ್ಲೇರ್ಪಡುವ ಏಕಾಂತದ ಮೌನಕ್ಕೆ ಶರಣಾಗು.”

Friday, July 3rd, 2009

The glob where the biggest sin of cows lotter is taking place is a house of dirt and nuesence.The heavy rain years together may not suffecient to wash the hands of this sin.She with the nector of for milk has quenched the hunger of mankind,but the tragidy is we are killing her.The god never excuse […]

Monday, June 29th, 2009

“ಸ್ವರ್ಗ-ನರಕಗಳು ಮಾನವನ ಜೀವನಮಾರ್ಗವನ್ನು ನಿರ್ದೇಶಿಸುತ್ತಿವೆ.ನರಕದ ಭೀತಿ ಮನುಷ್ಯ ಪಾಪಕರ್ಮಕ್ಕೆ ಇಳಿಯುವುದನ್ನು ತಪ್ಪಿಸಿದರೆ,ಸ್ವರ್ಗದ ಅಭಿಲಾಷೆ ಸತ್ಕರ್ಮದೆಡೆಗೆ ಮನಸ್ಸನ್ನು ಪ್ರೇರೇಪಿಸುತ್ತದೆ.ಮನುಷ್ಯ ಸಹಜವಾದ ಆಸೆ-ಭೀತಿಗಳನ್ನು ನಮ್ಮ ಪೂರ್ವಜರು ಮಾನವನ ಒಳಿತಿಗೆ ಉಪಯೋಗಿಸಿದರು.ಎಳವೆಯ ಸುಬೋಧೆ ಪಶುವಿನಂತಹ ಶಿಶುವನ್ನು ಮಾನವನನ್ನಾಗಿ ಮಾಡುತ್ತದೆ.ಮಾನವನನ್ನು ದಾನವನಾಗಬಿಡದೇ ಮಾಧವನನ್ನಾಗಿಸುತ್ತದೆ.”

Friday, June 5th, 2009

ಗೋಹತ್ಯೆಯಂತಹ ಮಹಾಪಾತಕ ನಡೆಯುತ್ತಿರುವ ಅಖಂಡ ಭೂಮಂಡಲವಿಂದು ಸೂತಕದ ಮನೆಯಾಗಿದೆ.ನಾವು ಮಾಡುತ್ತಿರುವ ಪಾಪದ ಕೊಳೆಯನ್ನು ತೊಳೆಯಲು ವರ್ಷಾನುಗಟ್ಟಲೆ ಮಳೆ ಮುಸಲಧಾರೆಯಾಗಿ ಸುರಿದರೂ ಸಾಲದೆಂತೆನಿಸುತ್ತದೆ.ತನ್ನ ಅಮೃತಮಯವಾದ ಹಾಲಿನಿಂದ ಜನರ ಒಡಲನ್ನು ತಂಪಾಗಿಸಿದವಳು ಆಕೆ.ದುರಂತವೆಂದರೆ ಇಂದು ಆಕೆಯ ಒಡಲನ್ನೇ ಹರಿಯಲು ಮುಂದಾಗಿದ್ದೇವೆ.ಈ ಪಾತಕವನ್ನು ದೈವ ಎಂದೂ ಕ್ಷಮಿಸದು.

Friday, June 5th, 2009

Without the light of knowledge we are all blind.The night of ignorance is encircling us.It is neccessary that we have to travell to our original house that is the residence of god.In the middle of the travell we have the light that is given by god himself.But we have not lightened this with the light […]

Monday, May 11th, 2009

The God whom we worship in the form of an idol he has not only that outlook but he is their in there in the whole universe .If we make any damage to the nature ,the part of the universe it is like damaging God himself.The worshiping of nature is as good as worshiping of […]

Wednesday, May 6th, 2009

ಒಬ್ಬ ವಿಜ್ನಾನಿಯ ದೃಷ್ಟಿಯಿಂದ ಚಂದ್ರ ವೃದ್ಧಿಸುವುದೂ ಇಲ್ಲ,ಕ್ಷಯಿಸುವುದೂ ಇಲ್ಲ.ಸೂರ್ಯ-ಚಂದ್ರರ ಸ್ಥಿತಿಗತಿಗಳ ತಾರತಮ್ಯದಿಂದಾಗಿ ವೃದ್ಧಿಸಿದಂತೆ-ಕ್ಷಯಿಸಿದಂತೆ ತೋರುತ್ತಾನೆ.ಭೂಮಿಯ ಆಕರ್ಷಣೆಯನ್ನು ಮೀರಿ ಬಾಹ್ಯಾಕಾಶದಲ್ಲಿ ನಿಂತು ನೋಡಿದರೆ ಚಂದ್ರ ಸದಾ ಏಕರೂಪವಾಗಿಯೇ ಇರುವುದು ಅರಿವಾಗುತ್ತದೆ.ಭೌತಿಕ ಆಕರ್ಷಣೆಗಳನ್ನು ಮೀರಿ ಹೃದಯಾಕಾಶದಲ್ಲಿ ನಿಂತು ನೋಡುವ ಜ್ನಾನಿ,ಹುಟ್ಟು-ಬೆಳವಣಿಗೆ -ಸಾವುಗಳಿಲ್ಲದೇ ಆತ್ಮ ಸದಾ ಏಕರೂಪವಾಗಿಯೇ ಇರುವುದನ್ನು ಅರಿಯುತ್ತಾನೆ.

ಸಂನ್ಯಾಸ

Friday, April 3rd, 2009

ಸಂನ್ಯಾಸವೆಂದರೆ ಜೀವನವನ್ನೇ ಜನಾರ್ದನನಿಗೆ ಸಮರ್ಪಿಸುವುದಾಗಿದೆ.ವ್ಯಕ್ತಿಯಲ್ಲಿ ತಾನೆಂಬ ಸ್ವಾರ್ಥವಿರಬಹುದು.ಆದರೆ ಸಂನ್ಯಾಸಿಯಲ್ಲಿ ಜಗವನ್ನೇ ತನ್ನದೆಂದು ಭಾವಿಸುವ ವಿಶಾಲ ಹೃದಯವಿದೆ.ಸಂಗ್ರಹವೇ ಸಂಸಾರ.ತ್ಯಾಗವೇ ಸಂನ್ಯಾಸ.ಪ್ರಪಂಚದಲ್ಲಿ ಗುರುಪೀಠ ಇರುವವರೆಗೆ ಯಾರೂ ಅನಾಥರಾಗಲು ಸಾಧ್ಯವಿಲ್ಲ.ತ್ಯಾಗದಲ್ಲಿ ಸುಖವಿದೆಯೆಂಬ ದಿವ್ಯ ಸಂದೇಶ ಸಾರುವ ಆಶ್ರಮವೆಂದರೆ ಸಂನ್ಯಾಸ.

ಶಿಕ್ಷಣ

Wednesday, February 11th, 2009

ಇಂದಿನ ಶಿಕ್ಷಣ ‘ಚಿತ್ತು ಕಾಟಿ’ನ ಶಿಕ್ಷಣವಾಗಿದೆ. ಆದರೆ ಇದು ಚಿತ್ತಾರದ ಶಿಕ್ಷಣವಾಗಬೇಕು., ನಾವು ತೆಂಗಿನಕಾಯಿಯಂತೆ ಹೊರಗೆ ಕಂದಾಗಿ ಒಳಗೆ ಬಿಳಿಯರಂತೆ ಬ್ರಿಟಿಷ್ ಶಿಕ್ಷಣ ಪಡೆಯುತ್ತಿದ್ದೇವೆ. ಇದನ್ನು ತಡೆಯದಿದ್ದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಬೀಜಕ್ಕೆ ನೀರು ಗೊಬ್ಬರ ಮಣ್ಣು ಸರಿಯಾಗಿ ಸಿಕ್ಕರೆ ಚೆನ್ನಾಗಿ ಹೆಮ್ಮರವಾಗಿ ಬೆಳೆಯುವಂತೆ, ಇಂದಿನ ಮಕ್ಕಳಿಗೆ ಸರಿಯಾದ ಪರಿಸರ, ಶಿಕ್ಷಣ ಜ್ಞಾನ ದೊರೆತರೆ ಮಾತ್ರ, ಸಂಸ್ಕೃತಿಯ ಹರಿಕಾರರಾಗಿ ಬೆಳೆಯಲು ಮತ್ತು, ಬೆಳಗಲು ಸಾಧ್ಯವಿದೆ. - ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು

Highslide for Wordpress Plugin