Donate

Help us to help others, please Donate

Related Links

e-Procurement Process 2015

Tender Application Form

Related Links

ನಿಮ್ಮ ಸಹಾಯ

ಜಗದ ಏಕೈಕ ಆತ್ಮಲಿಂಗದ ದಿವ್ಯ ಸನ್ನಿಧಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸ್ವೀಕರಿಸಲಾಗುವ ದೇಣಿಗೆ ವಿವರ :-

1. ಅಮೃತಾನ್ನ ಪ್ರಸಾದ ಭೋಜನ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರಿಗೆ ಪ್ರತಿದಿನವೂ ಮಧ್ಯಾಹ್ನ 12.00 ರಿಂದ 02.00 ವರೆಗೆ ಮತ್ತು ಸಾಯಂಕಾಲ 07.30 ರಿಂದ 08.30 ವರೆಗೆ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ. ಅನ್ನದಾನಕ್ಕೆ ದೇಣಿಗೆ ನೀಡಲು ಇಚ್ಛಿಸುವ ದಾನಿಗಳು ಶ್ರೀ ದೇವಾಲಯದ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಅವಕಾಶವಿದೆ.

ಅಮೃತಾನ್ನ ದೇಣಿಗೆ ವಿವರ : Annadadana Seva list-Kannada  ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ, ಶ್ರೀ ಕ್ಷೇತ್ರ ಗೋಕರ್ಣ

SAMSTAN SHREE MAHABALESHWAR DEV GOKARNA

Account Number : 36454677092
STATE BANK OF INDIA
Branch : TADRI (GOKARNA)
IFS Code : SBIN0008291

ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ , ಶ್ರೀ ಕ್ಷೇತ್ರ ಗೋಕರ್ಣ

VIJAYA BANK

Madengeri Branch

A/c no. 130601011002000

IFSC : VIJB0001306

 

2. ಆಭರಣ ದೇಣಿಗೆ :- ಶ್ರೀ ದೇವಾಲಯದಲ್ಲಿ ಶ್ರೀ ದೇವರ ಆಭರಣ ತಯಾರಿ ಹಾಗೂ ರಜತ ಮಹಾದ್ವಾರ ನಿರ್ಮಿಸಲು ದೇಣಿಗೆ ಸ್ವೀಕರಿಸಲಾಗುವುದು. ಆಭರಣ ನಿಧಿಗಾಗಿಯೇ ವಿಶೇಷ ಸೇವೆಯಿದ್ದು ವಿವರ ಈ ಕೆಳಗಿನಂತಿದೆ. ಮತ್ತು ಶ್ರೀ ದೇವರ ಆಭರಣ ನಿಧಿಗೆ ಭಕ್ತರು ದೇಣಿಗೆ ಸಲ್ಲಿಸಲು ಅವಕಾಶವಿದೆ.

ಆಭರಣ ನಿಧಿ

ಕರ್ನಾಟಕ ಬ್ಯಾಂಕ್

Gokarna Branch

A/c. no. 2522500100744101

IFSC KARB 0000252

 

3. ಅಭಿವೃದ್ಧಿ ನಿಧಿ : ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶಯದಂತೆ ಶ್ರೀ ದೇವಾಲಯದ ಸರ್ವತೋಮುಖವಾದ ಅಭಿವೃದ್ಧಿಗಾಗಿ ಸಹೃದಯಿ ಭಕ್ತರಿಂದ ಅಭಿವೃದ್ಧಿ ನಿಧಿಗೆ ದೇಣಿಗೆ ಸ್ವೀಕರಿಸಲಾಗುವುದು. ಬಹಳ ಪ್ರಾಚೀನವಾದ ಈ ಶಿವ ದೇವಾಲಯವು ಇತ್ತೀಚಿನ ಮೂರು ವರ್ಷಗಳಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಧಾರ್ಮಿಕ ವಿಚಾರಗಳಲ್ಲಿ, ಯಾತ್ರಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಲ್ಲಿ ಹಾಗೂ ವಿವಿಧ ಸಮಾಜಮುಖಿಯಾದ ಯೋಜನೆಗಳೊಂದಿಗೆ ಕಾರ್ಯರೂಪಕ್ಕಿಳಿದು ಚಲನಶೀಲವಾಗಿದೆ. ಭಕ್ತಾದಿಗಳು ತಮ್ಮ ಸಾಮರ್ಥ್ಯ , ಆಶಯಕ್ಕನುಗುಣವಾಗಿ ದೇಣಿಗೆ ನೀಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳಲ್ಲಿ ಸಹಭಾಗಿಗಳಾಗಬಹುದು .

ದೇಣಿಗೆ ನೀಡಿದ ಭಕ್ತಾದಿಗಳು ತಮ್ಮ ಗೋತ್ರ, ನಕ್ಷತ್ರ, ರಾಶಿ ಇವುಗಳನ್ನು ಆಡಳಿತ ಕಾರ್ಯಾಲಯ 08386-257956, 257955, 9482331354 info@srigokarna.org / atmalingagokarna@gmail.com ಈ ವಿಳಾಸಕ್ಕೆ ತಿಳಿಸುವುದು.

Highslide for Wordpress Plugin