Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವರಾತ್ರಿ ಮಹೋತ್ಸವ ಸಂಪನ್ನ

ಶಿವರಾತ್ರಿ ಮಹೋತ್ಸವ ಸಂಪನ್ನ

ರವಿವಾರ, ಮಾರ್ಚ 5th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರ ದಿವ್ಯ ಮಾರ್ಗದರ್ಶನ ಮತ್ತು ಸಾನ್ನಿಧ್ಯದಲ್ಲಿ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಸುಸಂಪನ್ನಗೊಂಡಿತು . ದಿನಾಂಕ 28-02-2017 ರಂದು ವೇ ಶಿತಿಕಂಠ ಹಿರೇಭಟ್ ಅರ್ಚಕತ್ವದಲ್ಲಿ ಚೂರ್ಣೋತ್ಸವ , ಅವಭೃತ , ಚೂರ್ಣಬಲಿ , ಕೋಟಿತೀರ್ಥದಲ್ಲಿ ಜಲಯಾನೋತ್ಸವ , ದೀಪೋತ್ಸವ , ಅಂಕುರಾರ್ಪಣೆ ಹಾಗು ಅಂಕುರ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು […]

ಶಿವರಾತ್ರಿ ಮಹೋತ್ಸವ ಶುಭಾರಂಭ

ಶಿವರಾತ್ರಿ ಮಹೋತ್ಸವ ಶುಭಾರಂಭ

ಮಂಗಳವಾರ, ಫೆಬ್ರವರಿ 21st, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದುರ್ಮುಖ ಸಂವತ್ಸರದ ಶಿವರಾತ್ರಿ ಮಹೋತ್ಸವವು ಶುಭಾರಂಭಗೊಂಡಿತು . ಆರಂಭದಲ್ಲಿ ಮಹಾಗಣಪತಿಗೆ ವಿಶೇಷ ಪೂಜೆ ನೆರವೇರಿತು . ಆನಂತರದಲ್ಲಿ ನಂದಿ ಧ್ವಜಾರೋಹಣ , ಭೂತಬಲಿ ಜರುಗಿತು . ವೇ ಶಿತಿಕಂಠ ಭಟ್ ಇವರ ಅರ್ಚಕತ್ವದಲ್ಲಿ ವಿವಿಧ ಧಾರ್ಮಿಕ ಉತ್ಸವ, ಕಾರ್ಯಕ್ರಮಗಳು ಜರುಗಲಿವೆ . ಸಮುದ್ರ ತೀರದಲ್ಲಿರುವ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ […]

ರಥಸಪ್ತಮಿ – ಮಹಾರಥಕ್ಕೆ ಪೂಜೆ

ರಥಸಪ್ತಮಿ – ಮಹಾರಥಕ್ಕೆ ಪೂಜೆ

ಶನಿವಾರ, ಫೆಬ್ರವರಿ 4th, 2017

ರೂಢಿಗತ ಪಂಪರೆಯಂತೆ ರಥಸಪ್ತಮಿಯ ದಿನವಾದ ಇಂದು ಶ್ರೀ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥಕ್ಕೆ ಪೂಜೆ ಸಲ್ಲಿಸಲಾಯಿತು . ವೇ ನಾರಾಯಣ ಪಂಡಿತರು ಗಣಪತಿ ಪೂಜೆ ನೆರವೇರಿಸಿದರು . ಉಪಾಧಿವಂತ ಪುರೋಹಿತರು , ಹಾಲಕ್ಕಿ ಜನಾಂಗದವರು , ಖಾರ್ವಿ ಜನಾಂಗದವರು , ಗಾಬಿತ ಜನಾಂಗದವರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು . ಇಂದಿನಿಂದ ಮಹಾರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆಯಲಿದೆ ದಿನಾಂಕ 27-02-2017 ಸೋಮವಾರ ಮಹಾರಥೋತ್ಸವ ಜರುಗಲಿದೆ . ಮಹಾಶಿವರಾತ್ರಿಗೆ ಶ್ರೀ ಕ್ಷೇತ್ರ ಗೋಕರ್ಣ ಸಿದ್ಧಗೊಳ್ಳುತ್ತಲಿದೆ .

ಮಹಾಶಿವರಾತ್ರಿ 2017  – ನಿಮಂತ್ರಣ ಪತ್ರಿಕೆ

ಮಹಾಶಿವರಾತ್ರಿ 2017 – ನಿಮಂತ್ರಣ ಪತ್ರಿಕೆ

ಶುಕ್ರವಾರ, ಜನವರಿ 27th, 2017
ಮಹಾಶಿವರಾತ್ರಿ – 2017

ಮಹಾಶಿವರಾತ್ರಿ – 2017

ಶುಕ್ರವಾರ, ಜನವರಿ 27th, 2017

। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2017 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

Sri Sri Shivananda Swaraswati Swamiji @ Car Festival

ಶ್ರೀಮನ್ಮಹಾರಥೋತ್ಸವ ಸು-ಸಂಪನ್ನ

ಗುರುವಾರ, ಮಾರ್ಚ 10th, 2016

ದಿನಾಂಕ 09-03-2016 ರಂದು ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವವು ಸು-ಸಂಪನ್ನಗೊಂಡಿತು . ಮಧ್ಯಾಹ್ನ 03.30 ಕ್ಕೆ ರಥಬೀದಿಯ ಶುರುವಿನಿಂದ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ರಥವನ್ನು ಏರಿದ ನಂತರ ಹೊರಟ ಮಹಾರಥ ರಥಬೀದಿಯ ತುದಿಯಲ್ಲಿರುವ ವೆಂಕಟರಮಣ ದೇವಾಲಯದ ವರೆಗೆ ಸಾಗಿತು . ಊರ , ಹೊರ ಊರಿನ, ಹೊರ ರಾಜ್ಯಗಳ ಅಲ್ಲದೆ ವಿದೇಶೀಯ ಭಕ್ತರೂ ಜಗದೀಶ್ವರನ ಮಹಾರಥ ಎಳೆದು ಪುನೀತರಾದರು . ಜಗದೀಶ್ವರ ಮಹಾಬಲೇಶ್ವರನನ್ನು ಹೊತ್ತ ಮಹಾರಥ ವಿಶೇಷ ವಾದ್ಯ , ಭಕ್ತರ ಹರ ಹರ […]

Sri Athmalinga

ಶಿವಯೋಗ – ಆತ್ಮಲಿಂಗ ದರ್ಶನ ಪಡೆದ ಭಕ್ತಸಾಗರ

ಸೋಮವಾರ, ಮಾರ್ಚ 7th, 2016

ಮಾಘ ಕೃಷ್ಣ ತೃಯೋದಶಿ – ಸೋಮವಾರ – ಶಿವಯೋಗದ ದಿನವಾದ ಇಂದು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭಕ್ತಸಾಗರ ಹರಿದಿದೆ . ಬೃಹತ್ ಸಂಖೆಯಲ್ಲಿ ಸೇರಿದ್ದ ಭಕ್ತರು ಶಾಂತಿ – ಸಮಾಧಾನಗಳಿಂದ ಶ್ರೀ ಆತ್ಮಲಿಂಗ ಸ್ಪರ್ಶದರ್ಶನ, ಪೂಜೆ ಸೇವೆ ಕೈಗೊಂಡರು . ಸಮುದ್ರ ತೀರದಿಂದ ದೇವಾಲಯದವರೆಗೆ ದರ್ಶನ ಸರದಿ ಸಾಲು ಹಬ್ಬಿತ್ತು . ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಭಕ್ತಾದಿಗಳಿಗೆ ಶ್ರೀ ದೇವಾಲಯದ ವತಿಯಿಂದ ಅಮೃತಾನ್ನ ವಿಶೇಷ ಉಪಹಾರ […]

ಶಿವರಾತ್ರಿ ಮಹೋತ್ಸವ ೨೦೧೬-  ಆಮಂತ್ರಣ ಪತ್ರಿಕೆ

ಶಿವರಾತ್ರಿ ಮಹೋತ್ಸವ ೨೦೧೬- ಆಮಂತ್ರಣ ಪತ್ರಿಕೆ

ಶುಕ್ರವಾರ, ಫೆಬ್ರವರಿ 12th, 2016
ಮಹಾಶಿವರಾತ್ರಿ 2016

ಮಹಾಶಿವರಾತ್ರಿ 2016

ಗುರುವಾರ, ಫೆಬ್ರವರಿ 4th, 2016

। ಪಾತು ನಿತ್ಯಂ ಮಹಾಬಲಃ ।। ಮಹಾಶಿವರಾತ್ರಿ 2016 ಆತ್ಮೀಯ ಭಗವದ್ಭಕ್ತರೇ, ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಜಯ ಸಂವತ್ಸರದ ಶಿವರಾತ್ರಿ ಮಹೋತ್ಸವಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ […]

Sri Sri of Kavalemath

ಶಿವರಾತ್ರಿ ಮಹೋತ್ಸವದ ಚಿತ್ರಗಳು (2015)

ಬುಧವಾರ, ಏಪ್ರಿಲ್ 22nd, 2015
Highslide for Wordpress Plugin