Donate

Help us to help others, please Donate

Related Links

e-Procurement Process 2015

Tender Application Form

Related Links

ಮಹಾಶಿವರಾತ್ರಿ

ಮಹಾಶಿವರಾತ್ರಿ

ರವಿವಾರ, ಆಗಸ್ತು 3rd, 2014

ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ ಶ್ರೀ ರಾಮಚಂದ್ರಾಪುರ ಮಠವನ್ನು ಸ್ಥಾಪಿಸಿದ್ದು ಕೂಡ ಶ್ರೀ ಕ್ಷೇತ್ರದಲ್ಲಿಯೇ . ಸಮಸ್ತ ಭಕ್ತರ ಆಪ್ತ ಸ್ಪರ್ಶ-ಅರ್ಚನೆಗಳಿಗೆ ನಿಲುಕುವ, ನಂಬಿದ ಭಕ್ತರನ್ನು ಕಡೆಗಣ್ಣ ನೋಟದಿಂದಲೇ ಕಾಯುವ ಈ ಜಗದೊಡೆಯನ ಆರಾಧನಾ ಪರ್ವ […]

ರಥಸಪ್ತಮಿ

ರಥಸಪ್ತಮಿ

ರವಿವಾರ, ಆಗಸ್ತು 3rd, 2014
ಶಿವ-ಪಾರ್ವತಿ ವಿವಾಹೋತ್ಸವ

ಶಿವ-ಪಾರ್ವತಿ ವಿವಾಹೋತ್ಸವ

ರವಿವಾರ, ಆಗಸ್ತು 3rd, 2014
Deepotsava

ತ್ರಿಪುರಾಖ್ಯ ದೀಪೋತ್ಸವ

ರವಿವಾರ, ಆಗಸ್ತು 3rd, 2014

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ದೇವಾಲಯದಲ್ಲಿ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ಭೀಮಕೊಂಡಕ್ಕೆ ಉತ್ಸವ ಹೋಗಿ ಅಲ್ಲಿ ಧಾತ್ರಿ ಹವನ, ವನಭೋಜನ ನಂತರ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ ರಥೋತ್ಸವ ಜರುಗಲಿದೆ. [gallery link=”file” columns=”2″ ids=”3402,3401,3400,3403″

ಶಿವಗಂಗಾ ವಿವಾಹೋತ್ಸವ

ಶಿವಗಂಗಾ ವಿವಾಹೋತ್ಸವ

ರವಿವಾರ, ಆಗಸ್ತು 3rd, 2014

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಶಿವಗಂಗಾ ವಿವಾಹ ಮಹೋತ್ಸವವು ವೈಭವದಿಂದ ಜರುಗುತ್ತದೆ. ರೂಢಿಗತ ಪರಂಪರೆಯಂತೆ ಮಹಾಬಲೇಶ್ವರ ಉತ್ಸವವು ಗಂಗಾಷ್ಟಮಿಯ ದಿನ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯಕ್ಕೆ ಹೋಗಿ ಗಂಗಾಮಾತೆಯ ಅನುಮತಿ ಪಡೆದು ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ನೆರವೇರುತ್ತದೆ. ಆ ಮಾತುಕತೆಯಂತೆ ವಿವಾಹ ಮಹೋತ್ಸವ ಆಶ್ವೀಜ ಬಹುಳ ಚತುರ್ದಶಿಯಂದು ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ನೆರವೇರುತ್ತದೆ. ಈ ಸ್ಥಳಕ್ಕೆ ಸಾವಿರಾರು ಭಕ್ತರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದು ಈ ವಿವಾಹ ಮಹೋತ್ಸವದ ಪ್ರಸಾದ […]

ಶಿವಗಂಗಾ ವಿವಾಹನಿಶ್ಚಯೋತ್ಸವ

ಶಿವಗಂಗಾ ವಿವಾಹನಿಶ್ಚಯೋತ್ಸವ

ರವಿವಾರ, ಆಗಸ್ತು 3rd, 2014

ಗಂಗಾಷ್ಟಮಿಯ ಪರ್ವಕಾಲದಲ್ಲಿ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಜರುಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಹಿಂದಿನ ದಿನ ರಾತ್ರೆ ಸುಮಾರು 12 ಗಂಟೆಗೆ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಶ್ರೀ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಡನೆ ವಾದ್ಯಘೋಶದೊಂದಿಗೆ ಗಂಗಾವಳಿಗೆ ಹೋಗಿ ಬೆಳಿಗ್ಗೆ ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಹೋಗುತ್ತದೆ.ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು […]

ಕದಿರು ಹರಣೋತ್ಸವ

ಕದಿರು ಹರಣೋತ್ಸವ

ರವಿವಾರ, ಆಗಸ್ತು 3rd, 2014

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಕದಿರು ಹರಣೋತ್ಸವವು ರೂಢಿಗತ ಪರಂಪರೆಯಂತೆ ಜರುಗುತ್ತದೆ. ತತ್ಸಂಬಂಧ ಶ್ರೀ ದೇವರ ಉತ್ಸವವು ರಾಜಲಾಂಛನಗಳಾದ ಬಿರುದು-ಬಾವಲಿಗಳೊಂದಿಗೆ ಹೊರಟು ಸಮೀಪದ ಊರು ಬಂಕಿಕೊಡ್ಲಿಗೆ ಹೋಗಿ ನಿರ್ದಿಷ್ಟಪಡಿಸಿದ ಭತ್ತದ ಗದ್ದೆಗೆ ಹೋಗಿ, ಭತ್ತವನ್ನು ಕೊಯ್ಯುವ ಧಾನ್ಯ ಹರಣೋತ್ಸವ ಪೂರೈಸಿ ಪೂಜೆ ಸ್ವೀಕರಿಸುವುದು . ನಂತರ ರೈತ ಸಮುದಾಯ ತಮ್ಮ ಗದ್ದೆಯ ಹೊಸ ಬೆಳೆಯ ಕದಿರನ್ನು ಶ್ರೀ ದೇವರಿಗೆ ಸಮರ್ಪಿಸುತ್ತಾರೆ . ಈ ಪೂಜೆಯನ್ನು ಸ್ವೀಕರಿಸಿ ಜಗದೀಶ್ವರನ ಉತ್ಸವವು ಹೊಸ ಕದಿರನ್ನು ಪ್ರಸಾದ ರೂಪದಲ್ಲಿ […]

ವಿಜಯದಶಮಿ (ನವರಾತ್ರಿ)

ವಿಜಯದಶಮಿ (ನವರಾತ್ರಿ)

ರವಿವಾರ, ಆಗಸ್ತು 3rd, 2014

ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರೀ ದೇವಾಲಯದ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ, ನೈವೇದ್ಯ, ಪೂಜೆ ಸಮರ್ಪಿಸಲಾಗುತ್ತದೆ . ರೂಢಿಗತ ಪರಂಪರೆಯಂತೆ ವಿಜಯ ದಶಮಿಯ೦ದು ವಿಜಯೋತ್ಸವದ ಪ್ರಯುಕ್ತ ಶ್ರೀ ದೇವರ ಸವಾರಿಯು ಬಿರುದು ಬಾವಲಿ ಸಹಿತ ಭದ್ರಕಾಳಿ ದೇವಾಲಯದ ಸಮೀಪದ ನಿಗದಿತ ಸ್ಥಳದಲ್ಲಿ ಪೂಜೆ ಸ್ವೀಕರಿಸಿ , ಭದ್ರಕಾಳಿ ದೇವಾಲಯಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿ ಶ್ರೀ ದೇವಾಲಯಕ್ಕೆ ಮರಳುತ್ತದೆ .

ಶಾರದಾಪೂಜೆ

ಶಾರದಾಪೂಜೆ

ರವಿವಾರ, ಆಗಸ್ತು 3rd, 2014
Chintamani Ganapati

ಗಣೇಶ ಚತುರ್ಥಿ

ರವಿವಾರ, ಆಗಸ್ತು 3rd, 2014

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಗಣೇಶ ಚತುರ್ಥಿ ಉತ್ಸವವನ್ನು ನಾಲ್ಕು ದಿನಗಳ ಕಾಲ ವೈಭವದಿಂದ ಆಚರಿಸಲಾಗುತ್ತದೆ. ಅಂದು ಗಣಪನ ಮೂರ್ತಿಯನ್ನು ವೆಂಕಟರಮಣ ದೇವಾಲಯದಿಂದ ಪಲ್ಲಕ್ಕಿ ಉತ್ಸವದಲ್ಲಿ ವಾಲಗ ,ಕಟ್ಟಿಗೆ , ದೀವಟಿಗೆ ಸಮೇತ ವೈಭವದಿಂದ ಕರೆತರಲಾಗುತ್ತದೆ . ಅಂದು ವಿಶೇಷ ಪಂಚಭಕ್ಷ ನೈವೇದ್ಯ , ಮಹಾಮಂಗಳಾರತಿ ನಡೆಯಲಿದೆ. ಮೂರನೇ ದಿನ ಸಾಯಂಕಾಲ ದಂಡಾವಳಿ ಪೂಜೆ , ವಿದ್ವಜ್ಜನರಿಂದ ವೇದಸಭೆ ಜರುಗಲಿದೆ . ನಾಲ್ಕನೇ ದಿನ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ , ವೆಂಕಟರಮಣ ದೇವಾಲಯದವರೆಗೆ ಹೋಗಿ ಅಲ್ಲಿಂದ […]

Highslide for Wordpress Plugin