June 19th, 2010
ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ [...]
June 17th, 2010
ಕೋಟಿರುದ್ರ ಷಷ್ಠ ಪರ್ವ – ಪತ್ರಿಕಾ ವರದಿಗಳು
May 19th, 2010
ಗೋಕರ್ಣ:- ಶ್ರೀರಾಚಂದ್ರಾಪುರಮಠದ ನೂತನ ಗೋಬಂಧು ಯೋಜನೆಯನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಅಕ್ಷಯ ತೃತೀಯೆಯ ಶುಭ ದಿನದಂದು ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಲೋಕಾರ್ಪಣೆ ಮಾಡಿದರು. ಗೋಸಂರಕ್ಷಣೆ ಮಹಾಕಾರ್ಯದ ಸಂಬಂಧ ರೂಪಿಸಲಾದ ಈ ಹೊಸ ಯೋಜನೆ ಸಾಮಾನ್ಯರಿಗೆ ಸಹ ಗೋಸಂರಕ್ಷಣೆಯ ಅವಕಾಶ ಒದಗಿಸಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ೯೧-೯೪೮೧೯೦೮೧೩೧ ಅಥವಾ ೯೧- ೯೪೪೯೫೯೫೨೦೬ ಸಂಪರ್ಕಿಸಲು ಕೋರಲಾಗಿದೆ.
May 19th, 2010
ಗೋಕರ್ಣ:- ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕಳೆದ ವರ್ಷದಿಂದ ಆರಂಭಿಸಲಾದ ಕೋಟಿರುದ್ರ ಜಪಾನುಷ್ಠಾನಕ್ಕೆ ನಾಡಿನಾದ್ಯಂತ ಉತ್ತಮ ಪೋಷಣೆ ಒದಗಿ ಬಂದಿದ್ದು, ಕಾರಣ ಇದಕ್ಕೆ ಒಂದು ಸಾಮಾಜಿಕ ಆಯಾಮ ನೀಡುವತ್ತ ಸಂಕಲ್ಪಿಸಲಾಗಿದೆ ಎಂದು ನುಡಿದರು. ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು. ವಿಶ್ವಕಲ್ಯಾಣಕ್ಕಾಗಿ ಸಂಘಟಿಸಲಾದ ಕೋಟಿರುದ್ರ ಜಪಾನುಷ್ಠಾನ ಶ್ರೀಮಂದಿರಕ್ಕೆ ಮಾತ್ರ ಸೀಮಿತವಾಗಿರಬಾರದು. ಈ ಅನುಷ್ಠಾನದ ಮೂಲಕ ಸಾಮಾಜಿಕ ಕಾರ್ಯ ಕೂಡಾ ಸಾಧಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ [...]