Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವಗಂಗಾ ವಿವಾಹ ಮಹೋತ್ಸವ ಸಂಪನ್ನ

ಶಿವಗಂಗಾ ವಿವಾಹ ಮಹೋತ್ಸವ ಸಂಪನ್ನ

ಗುರುವಾರ, ಅಕ್ತೂಬರ 19th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶಿವಗಂಗಾ ವಿವಾಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆಶ್ವೀಜ ಬಹುಳ ಚತುರ್ದಶಿ ದಿನ ವೈಭವದಿಂದ ಜರುಗಿತು . ಶ್ರೀ ಕ್ಷೇತ್ರ ಗೋಕರ್ಣದ ವಿಶಾಲವಾದ ಮಹಾಬಲೇಶ್ವರ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಾ೦ಬುಧಿಗೆ ತೆರಳುತ್ತಿರುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ […]

ಶಿವಗಂಗಾ ವಿವಾಹ ಮಹೋತ್ಸವ (18-10-2017)

ಮಂಗಳವಾರ, ಅಕ್ತೂಬರ 17th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಶಿವಗಂಗಾ ವಿವಾಹ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೈಭವದಿಂದ ಜರುಗಲಿದೆ. ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ದಿನ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ ವಿವಾಹ ಮಹೋತ್ಸವವು 18-10-2017 ಬುಧವಾರ (ಆಶ್ವಿಜ ಬಹುಳ ಚತುರ್ದಶಿಯಂದು) ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ತೀರದಲ್ಲಿ ನೆರವೇರುತ್ತದೆ. ಈ ಸ್ಥಳಕ್ಕೆ ಸಾವಿರಾರು ಭಕ್ತರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದು ಈ […]

‘ಕದಿರು ಹರಣೋತ್ಸವ’ ಸಂಪನ್ನ

‘ಕದಿರು ಹರಣೋತ್ಸವ’ ಸಂಪನ್ನ

ಶನಿವಾರ, ಸೆಪ್ಟೆಂಬರ 23rd, 2017

ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬಿ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ,ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ, ದಿನಾಂಕ 23-09-2017 ಶನಿವಾರ ಸು-ಸಂಪನ್ನಗೊಂಡಿತು . ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು . ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು […]

ಕದಿರುಹರಣೋತ್ಸವ (23-09-2017)

ಕದಿರುಹರಣೋತ್ಸವ (23-09-2017)

ಗುರುವಾರ, ಸೆಪ್ಟೆಂಬರ 14th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬಿ ಸಂವತ್ಸರದ ಕದಿರುಹರಣೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಿ 23-09-2017 ಶನಿವಾರ ಜರುಗಲಿದೆ . ತತ್ಸಂಬಂಧವಾಗಿ 22-09-2017 ಶುಕ್ರವಾರ ರಾತ್ರಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಂದಿಗೆ ಹೊರಟು ಬಂಕಿಕೊಡ್ಲ ತಲುಪುವುದು . ಮರುದಿನ ದಿ 23-09-2017 ಶನಿವಾರ ನಸುಕಿನಲ್ಲಿ ಸೋಮವಾರ ಭತ್ತದ ಗದ್ದೆಗೆ ಹೋಗಿ ಭತ್ತದ ಬೆಳೆಯನ್ನು ಕೊಯ್ದು ಪೂಜೆ […]

ಶ್ರಾವಣ ಅಮಾವಾಸ್ಯೆ – ವಿಶೇಷ ‘ಹೂವಿನಂಗಿ’ ಪೂಜೆ

ಶ್ರಾವಣ ಅಮಾವಾಸ್ಯೆ – ವಿಶೇಷ ‘ಹೂವಿನಂಗಿ’ ಪೂಜೆ

ಬುಧವಾರ, ಆಗಸ್ತು 23rd, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರಿಗೆ ಮತ್ತು ಶ್ರೀ ವೀರಭದ್ರ ದೇವರಿಗೆ ಶ್ರಾವಣ ಅಮಾವಾಸ್ಯೆ ದಿನಾಂಕ 22-08-2017 ರಂದು ಕಾರ್ಯಕರ್ತರಿಂದ ಹೂವಿನಂಗಿ ಪೂಜೆ ಸೇವೆ ಸಂಪನ್ನಗೊಂಡಿತು . ವೇ ಶಿತಿಕಂಠ ಹಿರೇಭಟ್ ಪೂಜೆ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .

ಕೃಷ್ಣಾಷ್ಟಮಿ , ‘ದಧಿ ಶಿಕ್ಯೋತ್ಸವ’ ಉತ್ಸವ ಸಂಪನ್ನ

ಕೃಷ್ಣಾಷ್ಟಮಿ , ‘ದಧಿ ಶಿಕ್ಯೋತ್ಸವ’ ಉತ್ಸವ ಸಂಪನ್ನ

ಶನಿವಾರ, ಆಗಸ್ತು 19th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ , ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ನೈವೇದ್ಯ ಪೂಜೆ ನೆರವೇರಿಸಲಾಯಿತು . ಸಾಯಂಕಾಲ ಶ್ರೀ ದೇವರ ಸಲಾಮು ಕೋಟಿತೀರ್ಥದ ಸಮೀಪವಿರುವ ಕೃಷ್ಣಾಪುರ ದೇವಾಲಯಕ್ಕೆ ತೆರಳಿ ಹಿಂದಿರುಗಿತು . ಮರುದಿನ ನವಮಿಯಂದು ‘ದಧಿ ಶಿಕ್ಯೋತ್ಸವ’ ಸಂಜೆ ಐದು ಘಂಟೆಗೆ ಶ್ರೀ ದೇವರ ಉತ್ಸವವು ಬಿರುದು […]

07-08-2017 ಸೋಮವಾರ : ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ

ಶುಕ್ರವಾರ, ಆಗಸ್ತು 4th, 2017

ಚಂದ್ರಗ್ರಹಣ ಪ್ರಯುಕ್ತ ದಿನಾಂಕ 07-08-2017 ಸೋಮವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ ಇರುತ್ತದೆ . ಬೆಳಿಗ್ಗೆ 05.00 ರಿಂದ 11.30 ವರೆಗೆ ಪೂಜೆ – ಸ್ಪರ್ಶದರ್ಶನ . ನಂತರ ಮಹಾಪೂಜೆ. ಸಾಯಂಕಾಲ 04.00 ರಿಂದ 06.00 ವರೆಗೆ ಪೂಜೆ – ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ. ನಂತರ ಮಹಾಪೂಜೆ . ರಾತ್ರಿ ಗ್ರಹಣ ಕಾಲದಲ್ಲಿ ಅಂದರೆ 10.53 ರಿಂದ 12.48 ಸಮಯದಲ್ಲಿ ಪೂಜೆ, ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ . ಭಕ್ತಮಹಾಜನತೆ ಗಮನಿಸಬೇಕಾಗಿ ಶ್ರೀ […]

ಶ್ರಾವಣ ಸೋಮವಾರ – ವಿಶೇಷ ಪೂಜೆ

ಶ್ರಾವಣ ಸೋಮವಾರ – ವಿಶೇಷ ಪೂಜೆ

ಸೋಮವಾರ, ಜುಲಾಯಿ 31st, 2017

ಶ್ರಾವಣ ಸೋಮವಾರ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿತು . ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಗವದ್ಭಕ್ತರು ಆತ್ಮಲಿಂಗ ದರ್ಶನ ಪಡೆದು, ಅಭಿಷೇಕ ಸೇವೆ ಸಲ್ಲಿಸಿದರು .ಬಂದ ಭಕ್ತರಿಗೆ ವಿಶೇಷ ಅಮೃತಾನ್ನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು .

“ಗೋಕರ್ಣ ಗೌರವ” ಎರಡು ನೂರು ದಿನ ಸಂಪನ್ನ

“ಗೋಕರ್ಣ ಗೌರವ” ಎರಡು ನೂರು ದಿನ ಸಂಪನ್ನ

ಗುರುವಾರ, ಜುಲಾಯಿ 27th, 2017

ಪ ಪೂ ಶ್ರೀ ಶ್ರೀ ಬಸವರಾಜ ಸ್ವಾಮಿಗಳು , ಶ್ರೀಹರಿಹರಾತ್ಮಜ ಮಠ , ನಾಗರಬಾವಿ , ಬೆಂಗಳೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದ ೨೦೦ ನೇ ದಿನದ ಸಾನ್ನಿಧ್ಯವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಶ್ರೀ ದಿನಕರ ಶೆಟ್ಟಿ ದಂಪತಿಗಳು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವಿಸಿದರು . ತಾ ಪ೦ ಸದಸ್ಯ ಶ್ರೀ ಮಹೇಶ […]

‘ಯಾಮಪೂಜೆ’ ಸಂಪನ್ನ

‘ಯಾಮಪೂಜೆ’ ಸಂಪನ್ನ

ಶನಿವಾರ, ಜುಲಾಯಿ 22nd, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ ಹೇಮಲಂಭಿ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ವಿಶೇಷ ಪೂಜೆ, ಕೊನೆಯಲ್ಲಿ ರುದ್ರಹೋಮದೊಂದಿಗೆ ಸಂಪನ್ನಗೊಂಡಿತು .

Highslide for Wordpress Plugin