

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಕರ್ಣ. ಈ ಜಗತ್ತು ಅದ್ಭುತವಾದ ಈಶ್ವರಸೃಷ್ಟಿ. ಈ ಈಶ್ವರನ ಕಾರ್ಯದಲ್ಲಿ ಕೊರತೆ ಎಂಬುದು ಎಲ್ಲಿಯೂ ಕಾಣದು. ಎಲ್ಲವೂ ಪರಿಪೂರ್ಣವೇ. ಶೂನ್ಯವೆಂಬ ಕುಂಚದಿಂದ ಶೂನ್ಯದ ಬಣ್ಣವನ್ನೇ ಉಪಯೋಗಿಸಿ ಬರೆದ ಈ ಲೋಕಚಿತ್ರ ಜಗದೊಡೆಯನಾದ ಶಿವನ ಅಪೂರ್ವ ಕಲಾಕೃತಿ. ಶಿವರಾತ್ರಿಯ ಈ ಪುಣ್ಯಪರ್ವದಲ್ಲಿ ಲೋಕಕ್ಕೊಂದೇ ಆದ ಈ ಗೋಕರ್ಣದಲ್ಲಿ ವಿಶ್ವಕ್ಕೊಂದೇ ಆಗಿರುವ ಸಾರ್ವಭೌಮ ಶ್ರಿ ಮಹಾಬಲನ ಉಪಾಸನೆಯೊಂದಿಗೆ ಆದ್ಯ ಕಲಾಕಾರನಾದ ಅವನ ಪ್ರೀತಿಯ ಕೃತಿಯನ್ನು ಅವಲೋಕಿಸಿ ಆನಂದಿಸುವುದೂ ಸಹ ಅವನ ಅರ್ಚನೆಯೇ ಎಂದು ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು ಶುಕ್ರವಾರ ನಡೆದ ಶಿವರಾತ್ರಿಯ ಎರಡನೇ ದಿನದಂದು ಖ್ಯಾತ ಚಿತ್ರಕಲಾವಿದ ಶ್ರೀ ಬಿ.ಕೆ.ಎಸ್.ವರ್ಮಾ ಅವರಿಗೆ ಶ್ರೀದೇವರ ಅನುಗ್ರಹರೂಪವಾಗಿ ಸಾರ್ವಭೌಮ ಪ್ರಶಸ್ತಿಯನ್ನಿತ್ತು ಸಮ್ಮಾನಿಸಿ ಅನುಗ್ರಹಭಾಷಣವನ್ನಿತ್ತ ಶ್ರೀಗಳು ಶಿವರಾತ್ರಿಯು ಕಾಲ, ದೇಶ, ಸನ್ನಿವೇಶಗಳೆಂಬ ಮೂರು ಆಯಾಮಗಳನ್ನು ಹೊಂದಿದೆ. ಬದಲಾವಣೆ ಪ್ರಕೃತಿಯ ನಿಯಮ. ಗೋಕರ್ಣದ್ದಲ್ಲಿ ಭಾವನೆಗಳಂತೆ ಭವನಗಳೂ ನಿರ್ಮಾಣಗೊಳ್ಳಬೇಕು ಈ ಕ್ಷೇತ್ರಾಭಿವೃದ್ದಿಯ ವಿಷಯದಲ್ಲಿ ನಾವು ಯಾವತ್ಯಾಗಕ್ಕೂ ಸಹ ಸಿದ್ಧ. ಈ ಕ್ಷೇತ್ರವನ್ನು ಪ್ರಕಾಶಪಡಿಸುವಂತಹ ಅವಕಾಶ ನಮ್ಮ ಪೂರ್ವಜರಿಗೆ ದೊರಕಲಿಲ್ಲ. ನಮ್ಮಪುಣ್ಯದಿಂದ ಋಣ ತೀರಿಸುವ ಅವಕಾಶವನ್ನು ಜಗದೀಶ ನಮಗಿತ್ತಿದ್ದಾನೆ. ಈ ಪವಿತ್ರಕಾರ್ಯದಲ್ಲಿ ಭೇದಭಾವವಿಲ್ಲದ್ಲೆ ಎಲ್ಲರೂ ಸಹಕರಿಸುವಂತಾಗಲಿ ಎಂದೂ ಶ್ರೀಗಳು ಆಶಿಸಿದರು. ಭವಿಷ್ಯದ ಗೋಕರ್ಣ ಎಂಬ ವಿಷಯದಲ್ಲಿ ನಡೆದ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡ ಪತ್ರಕರ್ತ ಶ್ರೀ ಜಿ.ಯು.ಭಟ್ಟ ಕೆಲವು ಸಮಸ್ಯೆಗಳಿಗೆ ಕಾಲವೇ ಉತ್ತರ ಹೇಳಬೇಕು. ಯಾವುದೇ ಬದಲಾವಣೆಗೆ ಸತತಪರಿಶ್ರ್ರಮ, ಸಂಕಲ್ಪಶಕ್ತಿ ಅಗತ್ಯ ಎಂದು ನುಡಿದು ಸರ್ವನಾಶವಾಗಿದ್ದ ಜಪಾನ್ ನಂತಹ ಪುಟ್ಟದೇಶ ಇಂದು ಅಮೆರಿಕಾಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ಬೆಳೆದಿರುವುದಕ್ಕೆ ಅಲ್ಲಿಯ ನಾಗರಿಕರ ಛಲ ಕಾರಣ. ಅಂತಹ ಭಾವನೆಗಳು ನಮ್ಮಲ್ಲು ಸಹ ಉದಿಸಬೇಕು ಎಂದರು. ಮತ್ತೋರ್ವ ಪತ್ರಕರ್ತ ಶ್ರೀ ಅಶೋಕ ಹಾಸ್ಯಗಾರ ಗೋಕರ್ಣ ಇತಿಹಾಸದ ಪ್ರತಿನಿಧಿ ವಿದ್ವತ್ತು, ಆತಿಥ್ಯಗಳಿಗೆ ಹೆಸರಾದ ಕ್ಷೇತ್ರವಿದು. ಪೂಜ್ಯ ಶ್ರೀ ಗಳವರ ನಾಯಕತ್ವದಲ್ಲಿಯೇ ಇದರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸಮಾರಂಭದ ಅಭ್ಯಾಗತರಾಗಿದ್ದ ಉದ್ಯಮಿ ಶ್ರೀ ಅಶೋಕ ಖೇಣಿ ಟೀಕೆಗಳತ್ತ ಗಮನ ನೀಡುತ್ತ ಹೋದರೆ ನಾವು ಮುಂದುವರೆಯಲು ಅಸಾಧ್ಯ . ರಚನಾತ್ಮಕವಾದ ಕಾರ್ಯಗಳಿಂದ ಮಾತ್ರ ಉದ್ದಿಷ್ಟಫಲ ಪ್ರಾಪ್ತಿಯಾಗುತ್ತದೆ. ಪ್ರೀತಿಯಿಂದ ಗೆಲ್ಲಲು ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು. ಅಡಿಶನಲ್ ಅಡ್ವೋಕೇಟ್ ಜನರಲ್ ಶ್ರೀ ಕೆ. ಎಮ್ ನಟರಾಜ ಹಾಗೂ ಉದ್ಯಮಿ ಶ್ರೀ ಶ್ರೀನಿವಾಸ ರೆಡ್ಡಿ ಮಾತನಾಡಿ ಪ್ರಸ್ತುತವಾದ ಗೋಹತ್ಯಾ ನಿಷೇಧದಂತಹ ವಿಷಯದಲ್ಲಿ ಶ್ರೀಗಳ ಪರಿಶ್ರಮವನ್ನು ಉಲ್ಲೇಖಿಸಿದರು. ಮತ್ತೋರ್ವ ಅಭ್ಯಾಗತ ಅಡ್ವೋಕೇಟ್ ಜನರಲ್ ಶ್ರೀ ಅಶೋಕ ಹಾರ್ನಹಳ್ಳಿಯವರು ಮಾತನಾಡಿ ಭರತನಾಡು ಪುಣ್ಯಕ್ಷೇತ್ರಗಳ ಪವಿತ್ರಭೂಮಿ. ಆದರೆ ಈ ಪ್ರದೇಶಗಳ ಬಗ್ಗೆ ನಾವು ಅಭಿಮಾನ ಹೊಂದಿಲ್ಲ ಎಂಬುದು ಅತ್ಯಂತ ಖೇದದ ವಿಚಾರ, ಸಮಸ್ತ ಆಸ್ತಿಕ ಭಕ್ತರ ಆಶಾಕಿರಣವಾದ ದಕ್ಷಿಣಕಾಶಿಯೆಂದೇ ಪ್ರಸಿದ್ಧವಾದ ಈ ಕ್ಷೇತ್ರಕ್ಕೆ ಪೂಜ್ಯ ಶ್ರೀಗಳವರ ಸ್ಪರ್ಶ ಚೈತನ್ಯವನ್ನು ತುಂಬುವಂತಾಗಬೇಕು. ಈ ಕಾರ್ಯದಲ್ಲಿ ನಮ್ಮೆಲ್ಲ ಮತಭೇದಗಳನ್ನು ಮರೆತು ಈ ಬದಲಾವಣೆಯ ಪ್ರಕ್ರಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಹೊನ್ನಾವರ ತಾಲೂಕು ಪಂಚಾಯತ ಅಧ್ಯಕ್ಷ ಶ್ರೀ ಕೃಷ್ಣ ಜೆ.ಗೌಡರು ಸಮಗ್ರ ಉ.ಕ ಜಿಲ್ಲೆಯ ಅಭಿವೃದ್ಧಿಯ ನಾಯಕತ್ವವನ್ನು ಶ್ರೀಗಳವರೇವಹಿಸಬೇಕೆಂದು ಪ್ರಾರ್ಥಿಸಿದರು. ಡಾ.ಕೆ.ಎನ್.ಬೈಲಕೇರಿ ಹಾಗೂ ವೇ||ಗಣೇಶ ನಾರಾಯಣ ಹಿರೇಗಂಗೆ ದಂಪತಿಗಳು ಸಭಾರ್ಚನೆ ಸಲ್ಲಿಸಿದರು. ಡಾ|| ವಿ. ಎನ್. ಹೆಗಡೆ ನಿರ್ವಹಿಸಿದ ಈ ಸಮಾರಂಭದಲ್ಲಿ ಡಾ.ವಿ. ಆರ್. ಮಲ್ಲನ್, ಶ್ರೀ ಮಹೇಶ ಶೆಟ್ಟಿ, ಶ್ರೀ ಆನಂದ ಕವರಿ, ಶ್ರೀ ನಾಗರಾಜ ಹಿತ್ತಲಮಕ್ಕಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು
March 5th, 2010 at %I:%M %p
swamiji speech and character i like very much. i wish them to get lots lots of ideas to do work like “vishwa go sammelana” so that our nation become moral to world.