

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಕರ್ಣ:ಮಾ.11,ಇತಿಹಾಸಪ್ರಸಿದ್ಧಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಬರುವ ಏಪ್ರಿಲ್ 27 ರಿಂದ ಪ್ರಾರಂಭಿಸಿ ನಿರಂತರ ಒಂದುವರ್ಷಕಾಲ ಕೋಟಿರುದ್ರಜಪಾನುಷ್ಠಾನವು ನಡೆಯಲಿದೆ.ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಸ್ವಾಮಿಗಳವರ ದಿವ್ಯಸಂಕಲ್ಪ ಹಾಗು ಮಾರ್ಗದರ್ಶನದಲ್ಲಿ ನಡೆಯಲಿರುವ ಕೋಟಿರುದ್ರಕಾರ್ಯಕ್ರಮವು ಇತಿಹಾಸವನ್ನು ನಿರ್ಮಿಸುವಂತಹದ್ದಾಗಿದೆ.ಸಾಮಾನ್ಯವಾಗಿ ಮಹಾರುದ್ರ,ಅತಿರುದ್ರ ಅನುಷ್ಠಾನಗಗಳು ಮಾತ್ರ ಇಲ್ಲಿಯವರೆಗೆ ನಡೆದಿದ್ದು ಲಭ್ಯವಿರುವ ದಾಖಲೆಗಳಂತೆ ಎಲ್ಲಿಯೂ ಕೋಟಿಸಂಖ್ಯೆಯ ರುದ್ರಜಪ ನಡೆದಿಲ್ಲ.ಲೋಕಕಲ್ಯಾಣಕ್ಕಾಗಿ ನಡೆಯಲಿರುವ ಈ ರುದ್ರಜಪವು ಈಶ್ವರನಿಗೆ ಅತ್ಯಂತ ಪ್ರಿಯಕರವಾಗಿದ್ದು ಸುಮಾರು ಒಂದುಸಾವಿರ ಋತ್ವಿಜರು ಒಂದುವರ್ಷಕಾಲ ಪ್ರತಿದಿನ ಈ ಜಪಪಾರಾಯಣದಲ್ಲಿ ಪಾಲ್ಗೊಳ್ಳಲಿದ್ದಾರೆ.ಭಗವದ್ಭಕ್ತರು ಸೇವಾಸಕ್ತರು ಶ್ರೀಮಹಾಬಲೇಶ್ವರ ಸನ್ನಿಧಿಯಲ್ಲಿ ಸ್ವತಃ ರುದ್ರಪಾರಾಯಣಮಾಡುವ ಮೂಲಕ ಈ ಐತಿಹಾಸಿಕಕೋಟಿರುದ್ರ ಅನುಷ್ಠಾನಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ.ಬರುವ ವೈಶಾಖ ಶುಕ್ಲ ಅಕ್ಷಯತೃತೀಯಾದಿನದಂದು ಪ್ರಾರಂಭಗೊಳ್ಳುವ ಈ ವಿನೂತನ ಈಶಸೇವೆಯು 2010ರ ಅಕ್ಷಯತೃತೀಯಾದಿನದಂದು ಸಮಾಪ್ತವಾಗಲಿದೆ.ಹಾಗೂ ಅದೇ ಸಂದರ್ಭದಲ್ಲಿ ಶ್ರೀಸಾರ್ವಭೌಮ ಮಹಾಬಲೇಶ್ವರ ದೇವರ ಅಷ್ಟಬಂಧಮಹೋತ್ಸವವೂ ಜರುಗಲಿದೆ.ಈ ಸೇವಾವಕಾಶವನ್ನು ಆಸ್ತಿಕಶ್ರದ್ಧಾಳುಗಳು ಸಾರ್ಥಕಪಡಿಸಿಕೊಳ್ಳಬೇಕಾಗಿ ಶ್ರೀದೇವಾಲಯದ ಪ್ರಕಟಣೆ ತಿಳಿಸಿದೆ.
ಗೋಕರ್ಣ.
11.03.2009 ಮಾಧ್ಯಮಕೇಂದ್ರ ಗೋಕರ್ಣ.