

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಸ್ವರ್ಣವಲ್ಲೀ ಸಂಸ್ಥಾನ ಹಮ್ಮಿಕೊಂಡಿರುವ ಭಗವದ್ಗೀತಾ ಅಭಿಯಾನವು ಶ್ರೀ ರಾಮಚಂದ್ರಾಪುರ ಮಠ ವ್ಯಾಪ್ತಿಯ ಶಿವಮೊಗ್ಗ ಮತ್ತಿತರ ಜಿಲ್ಲೆಯಲ್ಲಿ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ,ಶ್ರೀ ರಾಘವೇಶ್ವರ ಶ್ರೀಗಳವರು ಹೊಸಬಾಳೆಗೆ ಬಂದ ಸಂದರ್ಭದಲ್ಲಿ ಅವರನ್ನು ಸ್ವರ್ಣವಲ್ಲೀ ಮಠದ ಪ್ರತಿನಿಧಿಗಳು ಭೇಟಿಯಾಗಿ ಸಹಕಾರ ನೀಡಲು ಮತ್ತು ಭಾಗಿಯಾಗಲು ವಿನಂತಿಸಿದರು.ಇದಕ್ಕೆ ಸ್ಪಂದಿಸಿದ ಶ್ರೀಗಳು ಆಭಿಯಾನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಭಗವದ್ಗೀತಾ ಅಭಿಯಾನ ಸಮಿತಿ ಸಂಚಾಲಕರಾದ ವೆಂಕಟರಮಣ ಹೆಗಡೆ,ಶ್ರೀಪಾದ ರಾಯಸದ,ಶಿವಮೊಗ್ಗಾಜಿಲ್ಲಾ ಉಸ್ತುವಾರಿ ಪ್ರಮುಖರಾದ ಜಿ.ವಿ.ಹೆಗಡೆ ಬಿಸ್ಲಕೊಪ್ಪ,ಸುಬ್ರಹ್ಮಣ್ಯ ಹಲಗೇಸರ ಮತ್ತಿತರರು ಈ ಸಂದ್ರಭದಲ್ಲಿ ಹಾಜರಿದ್ದರು.