ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರೀ ದೇವಾಲಯದ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ, ನೈವೇದ್ಯ, ಪೂಜೆ ಸಮರ್ಪಿಸಲಾಗುತ್ತದೆ .
ರೂಢಿಗತ ಪರಂಪರೆಯಂತೆ ವಿಜಯ ದಶಮಿಯ೦ದು ವಿಜಯೋತ್ಸವದ ಪ್ರಯುಕ್ತ ಶ್ರೀ ದೇವರ ಸವಾರಿಯು ಬಿರುದು ಬಾವಲಿ ಸಹಿತ ಭದ್ರಕಾಳಿ ದೇವಾಲಯದ ಸಮೀಪದ ನಿಗದಿತ ಸ್ಥಳದಲ್ಲಿ ಪೂಜೆ ಸ್ವೀಕರಿಸಿ , ಭದ್ರಕಾಳಿ ದೇವಾಲಯಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿ ಶ್ರೀ ದೇವಾಲಯಕ್ಕೆ ಮರಳುತ್ತದೆ .








