

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಆದಿಗೋಕರ್ಣ ಗುಡಿಯ ಸಂರಕ್ಷಣಾ ಪುನರ್ ನಿರ್ಮಾಣ ಕಾಮಗಾರಿಯ ‘ಪಾದುಕಾನ್ಯಾಸ’ ಕಾರ್ಯಕ್ರಮ ಸಂಪನ್ನಗೊಂಡಿತು .ಕಾರ್ಕಳದ ಖ್ಯಾತ ಶಿಲ್ಪಕಲಾ ಕೇಂದ್ರದ ನಿರ್ದೇಶಕರಾದ ಶ್ರೀ ಗುಣವಂತೇಶ್ವರ ಭಟ್ ಗುಡಿಯ ಶಿಲ್ಪಿ . ಆದಿಗೋಕರ್ಣ ಗುಡಿಯು ಶ್ರೀ ಶ್ರೀಗಳವರ ದಿವ್ಯ ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಸಂಪೂರ್ಣ ಶಿಲಾಮಯ ಗುಡಿಯಾಗಿ ಶಾಸ್ತ್ರೀಯವಾಗಿ , ವಾಸ್ತುಪ್ರಕಾರ ನಿರ್ಮಾಣವಾಗಲಿದೆ .ಉಪಾಧಿವಂತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು , ಊರ ನಾಗರಿಕರು ಮತ್ತು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .