

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಮಹಾಬಲೇಶ್ವರ ದೇವಾಲಯದ ಜಯ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ ಸು-ಸಂಪನ್ನಗೊಂಡಿತು . ಬಾವಿಕೊಡ್ಲದ ದೇವರ ಗದ್ದೆ ಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು . ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪ್ರಸಾದ ವಿತರಣೆ ನಡೆಯಿತು. ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು .