Donate

Help us to help others, please Donate

Related Links

e-Procurement Process 2015

Tender Application Form

Related Links

ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳು

ಶನಿವಾರ, ಜನವರಿ 31st, 2009 -

ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳ ಬಗೆಗಿನ ವಿವರಗಳು :

  1. ಪ್ರಸಿದ್ಧ ಉಪ್ಪು ತಯಾರಿಕಾ ಕೇಂದ್ರವಾದ ಸಾಣಿಕಟ್ಟೆ.
  2. ಮೀನುಗಾರಿಕಾಬಂದರುಪ್ರದೇಶ ತದಡಿ.
  3. ಕ್ರಿ. ಶ.೭ರಲ್ಲಿದ್ದ ಶ್ರೀಹರ್ಷನ ನಾಗಾನಂದ ನಾಟಕಕ್ಕೆ ಆಧಾರವೆಂದು ಪರಿಗಣಿತವಾದ ನಾಗರ ಬಯಲು, ಶ್ರೀಗೌರಿದೇವಾಲಯ, ಚಕ್ರಬಂಡೇಶ್ವರ ದೇವಾಲಯ, ಕಪಿಲಾತೀರ್ಥ, ದ್ವೇಷತೀರ್ಥ, ಅಸೂಯಾತೀರ್ಥ, ಕೇಸರೀತೀರ್ಥ, ಜಟಾಯುತೀರ್ಥ ಮೊದಲಾದ ಹಲವಾರು ತೀರ್ಥಗಳ ಸಮುಚ್ಚಯ.
  4. ಗೋಕರ್ಣ ಸಮೀಪದ ಓಂ ಬೀಚ್. ದೇವನಾಗರಿಲಿಪಿಯ ಓಂಕಾರದ ರೂಪವನ್ನು ಹೊಂದಿರುವ ಈ ಕಡಲತೀರದ ಹಿಂದಿನ ಹೆಸರು ದೋಣಿಬಯಲು. ಜಾಗತಿಕ ಪ್ರವಾಸಿ ಭೂಪಟದಲ್ಲಿ ಗುರುತಿಸಲ್ಪಟ್ಟ ಈ ಸಾಗರತೀರವು ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಟಲಿ, ರಷ್ಯಾ, ಇಸ್ರೇಲ್ ಮೊದಲಾದ ೮೦ಕ್ಕೂ ಹೆಚ್ಚಿನ ರಾಷ್ಟ್ರಗಳ ವಿದೇಶೀ ಪ್ರವಾಸಿಗಳು ಇಲ್ಲಿಗೆ ಪ್ರತಿವರ್ಷ ಭೇಟಿನೀಡುತ್ತಾರೆ.
  5. ಕುಡ್ಳೆ ಬೀಚ್, ಹಾಫ್ ಮೂನ್ ಬೀಚ್ ಮೊದಲಾದ ಹಲವಾರು ಮೋಹಕ ಕಡಲತೀರಗಳ ಗೊಂಪು ಗೋಕರ್ಣದ ಪರಿಸರದಲ್ಲಿದೆ. ಶತಶೃಂಗ ಪರ್ವತದ ತಪ್ಪಲು ಪ್ರದೇಶದಲ್ಲಿ ರಾಮತೀರ್ಥ, ಭರತದೇವಾಲಯ, ಗೋಗರ್ಭ, ಬ್ರಹ್ಮರ್ಷಿದೈವರಾತ ಆಶ್ರಮ ಮೊದಲಾದ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.

2 Responses to ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳು

  1. m.p.nagesh

    very fine temple in karnataka

  2. Hemanth

    Its good but not satified

Leave a Reply

Highslide for Wordpress Plugin